https://youtube.com/shorts/T_aMW9fkptU?si=5dNoX3esn0X-svY6
newsics.com
ವಾಷಿಂಗ್ಟನ್: ಅಮೆರಿಕದ ವೈಟ್ ಹೌಸ್ ಎದುರಿಗಿರುವ ಲಫಾಯೆಟ್ ಪಾರ್ಕ್ ಬಳಿ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ವಲಯದಲ್ಲಿ ಭಾರಿ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ದೃಢಪಡಿಸಿದೆ.
ಭಾನುವಾರ (ಏಪ್ರಿಲ್ 5, 2026) ಬೆಳಗಿನ ಜಾವ ಸುಮಾರು 12:30ರ ಸುಮಾರಿಗೆ ಲಫಾಯೆಟ್ ಪಾರ್ಕ್ ಬಳಿ ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ. ಕೂಡಲೇ ಭದ್ರತಾ ಅಧಿಕಾರಿಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ.
ಗುಂಡಿನ ಸದ್ದು ಕೇಳಿಬಂದ ತಕ್ಷಣ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಪಾರ್ಕ್ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ, ಯಾವುದೇ ಶಂಕಿತ ವ್ಯಕ್ತಿ ಅಥವಾ ಸಂತ್ರಸ್ತರು ಸ್ಥಳದಲ್ಲಿ ಪತ್ತೆಯಾಗಿಲ್ಲ.
https://www.newsics.com/2026/04/05/whats-in-the-national-crush-diet/