newsics.com
‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಇಂದು ತಮ್ಮ 30ನೇ ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿದ್ದಾರೆ. ರಶ್ಮಿಕಾ ಎಲ್ಲಿಗೆ ಹೋದರೂ ಅಲ್ಲಿ ಕ್ಯಾಮೆರಾ ಕಣ್ಣುಗಳು ಫಾಲೋ ಮಾಡುವುದು ಮಾಮೂಲಿ. ಆದರೆ ಈ ಬಾರಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಂಡ ದೃಶ್ಯ ಅವರ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ರಶ್ಮಿಕಾ ಅವರು ತಮ್ಮ ಪತಿ ವಿಜಯ್ ದೇವರಕೊಂಡ ಮತ್ತು ಕುಟುಂಬದೊಂದಿಗೆ ಹುಟ್ಟುಹಬ್ಬದ ಪ್ರವಾಸಕ್ಕೆ ಹೊರಟಿದ್ದರು. ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಕೇಕ್ ಕತ್ತರಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, “ವಿಕ್ರಶ್” (ViRash) ಫ್ಯಾನ್ಸ್ ಈ ಫೋಟೋಗಳನ್ನು ನೋಡಿ ಫುಲ್ ಖುಷ್ ಆಗಿದ್ದಾರೆ.
ಎಲ್ಲರೂ ರಶ್ಮಿಕಾಗೆ ವಿಶ್ ಮಾಡುತ್ತಿದ್ದರೆ, ವಿಜಯ್ ದೇವರಕೊಂಡ ಅವರ ವಿಶ್ ಮಾತ್ರ ತುಂಬಾನೇ ಸ್ಪೆಷಲ್ ಆಗಿತ್ತು. ಇವರಿಬ್ಬರ ಕಾಂಬಿನೇಶನ್‌ನ ಹೊಸ ಸಿನಿಮಾ ‘ರಣಬಾಲಿ’ (Ranabali) ಸೆಟ್‌ನಿಂದ ರಶ್ಮಿಕಾ ಅವರ ‘ಜಯಮ್ಮ’ ಪಾತ್ರದ ಮೇಕಿಂಗ್ ವಿಡಿಯೋವನ್ನು ಹಂಚಿಕೊಂಡಿರುವ ವಿಜಯ್, “I Love You Jayamma” ಎಂದು ಬರೆದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ 7 ವರ್ಷಗಳ ನಂತರ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿರುವುದು ಗಾಂಧಿನಗರದ ಹಾರ್ಟ್ ಬೀಟ್ ಹೆಚ್ಚಿಸಿದೆ. ಈ ಚಿತ್ರದಲ್ಲಿ ವಿಜಯ್ ಸ್ವಾತಂತ್ರ್ಯ ಹೋರಾಟಗಾರನಾಗಿ ಕಾಣಿಸಿಕೊಂಡರೆ, ರಶ್ಮಿಕಾ ಅವರು ಬ್ರಿಟಿಷ್ ಕಾಲದ ದಿಟ್ಟ ಮಹಿಳೆ ‘ಜಯಮ್ಮ’ನಾಗಿ ಮಿಂಚಲಿದ್ದಾರೆ.
ರಶ್ಮಿಕಾ ಅವರಿಗೆ ಈ ಬಾರಿಯ ಜನ್ಮದಿನ ವಿಶೇಷ ಎನ್ನಲು ಮತ್ತೊಂದು ಕಾರಣವಿದೆ. ಫೆಬ್ರವರಿ 26, 2026 ರಂದು ಜೈಪುರದಲ್ಲಿ ಹಸೆಮಣೆ ಏರಿದ್ದ ಈ ಜೋಡಿ, ಇದೀಗ ವಿವಾಹ ಜೀವನದ ಸಂಭ್ರಮದಲ್ಲಿದೆ. ಮದುವೆಯ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದ್ದು, ವಿಜಯ್ ಮತ್ತು ಅವರ ಕುಟುಂಬ ರಶ್ಮಿಕಾ ಅವರನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದೆ ಎಂಬುದು ವೈರಲ್ ಫೋಟೋಗಳಲ್ಲೇ ಸಾಬೀತಾಗಿದೆ. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆದ ಭರ್ಜರಿ ರಿಸೆಪ್ಷನ್ ನೆನಪುಗಳು ಇನ್ನೂ ಹಸಿರಾಗಿರುವಾಗಲೇ ಈ ಬರ್ತ್‌ಡೇ ಬಂದಿದೆ.