newsics.com
ಚಿನ್ನದ ಬೆಲೆಯು ಇಳಿಕೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇರಾನ್ Vs ಅಮೆರಿಕ, ಇಸ್ರೇಲ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚಿನ್ನದ ಬೆಲೆಯಲ್ಲಿ ಮತ್ತೆ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಡಾಲರ್ ಮೌಲ್ಯ ಬಲಗೊಳ್ಳುತ್ತಿರುವುದು ಹಾಗೂ ಅಮೆರಿಕದ ಆರ್ಥಿಕ ಪ್ರಭಾವ ಸೇರಿದಂತೆ ಹಲವು ವಿಚಾರಗಳು ಚಿನ್ನದ ಮೌಲ್ಯದ ಮೇಲೆ ಪ್ರಭಾವ ಬೀರಲಿವೆ ಎಂದು ಅಂದಾಜಿಸಲಾಗಿದೆ.
ವಾರಾಂತ್ಯವಾದ ಏಪ್ರಿಲ್ 5ರ ಭಾನುವಾರದಂದು ಚಿನ್ನದ ಬೆಲೆಯು ಯಥಾಸ್ಥಿತಿಯಲ್ಲಿದೆ. ಇನ್ನು ಭಾರತದಲ್ಲಿ ಚಿನ್ನದ ಒಟ್ಟಾರೆ ಬೆಲೆಯು ಗರಿಷ್ಠ ಮಟ್ಟದಿಂದ ಶೇ. 17ರಷ್ಟು ಕಡಿಮೆಯಾಗಿದ್ದರೂ, ಸಹ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಭಾನುವಾರ ಭರ್ಜರಿ ಇಳಿಕೆಯಾಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 11,320 ರೂಪಾಯಿ ಆಗಿದೆ. 10 ಚಿನ್ನದ ಬೆಲೆಯು 1,13,200 ರೂ. ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 13,835 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,38,350 ರೂ. ಆಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯು ಏಪ್ರಿಲ್ 5ರಂದು 1 ಗ್ರಾಂಗೆ 15,093 ರೂ. ಹಾಗೂ 10 ಗ್ರಾಂಗೆ 1,50,930 ರೂ. ಆಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಇನ್ನು ಬೆಳ್ಳಿಯು ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 250 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2.50 ಲಕ್ಷ ರೂ. ಆಗಿದೆ. ಬೆಳ್ಳಿ ಬೆಲೆಯು ಸಹ ಯಥಾಸ್ಥಿತಿ ಮುಂದುವರಿದಿದೆ