https://youtube.com/shorts/T_aMW9fkptU?si=5dNoX3esn0X-svY6
newsics.com
ವಾಷಿಂಗ್ಟನ್ : ಅಮೆರಿಕದ ವಾಯುಪಡೆಯ ಎರಡನೇ ಏರ್‌ಮ್ಯಾನ್ ಸುರಕ್ಷಿತವಾಗಿ ಇರಾನ್ ದೇಶದಿಂದ ಹೊರಬಂದಿದ್ದಾರೆ ಎಂದು ಅಮೆರಿಕದ ಸರ್ಕಾರಿ ಅಧಿಕಾರಿ ದೃಢಪಡಿಸಿದ್ದಾರೆ.
ಎರಡು ದಿನಗಳ ಕಾಲ ಇರಾನಿನ ಅಧಿಕಾರಿಗಳನ್ನು ತಪ್ಪಿಸಿಕೊಂಡು ಅಡಗಿಕೊಂಡಿದ್ದ ಏರ್‌ಮ್ಯಾನ್ ರನ್ನು ಕೊನೆಗೂ ಪತ್ತೆಹಚ್ಚಲಾಗಿತ್ತು. ನಂತರ ಯುಎಸ್ ಪಡೆಗಳು ಸಾಹಸಮಯ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿವೆ ಎಂದು Aljazeera ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಡೆಗಳ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ.
ರಾತ್ರಿ ಹೊತ್ತು ಆರಂಭವಾದ ಈ ಕಾರ್ಯಾಚರಣೆ ಬೆಳಗಿನ ಜಾವ ಅಂತ್ಯಗೊಂಡಿತು. ಕಾರ್ಯಾಚರಣೆಯ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಏರ್‌ಮ್ಯಾನ್ ಇರುವ ಸ್ಥಳದ ಕುರಿತು ಇರಾನಿನ ಅಧಿಕಾರಿಗಳಿಗೆ ಮಾಹಿತಿ ಇತ್ತು ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಏರ್‌ಮ್ಯಾನ್ ಸೇರಿದಂತೆ ಇತರರು ಗಂಭೀರ ಅಪಾಯದಲ್ಲಿದ್ದರು ಎಂದು ತಿಳಿದುಬಂದಿದೆ.
ಇದೀಗ ಅಮೆರಿಕದ ಅಧಿಕಾರಿಗಳು ದೃಢಪಡಿಸಿರುವಂತೆ, ರಕ್ಷಿಸಲ್ಪಟ್ಟ ಆ ವಾಯುಪಡೆಯ ಸಿಬ್ಬಂದಿ ಇರಾನ್‌ನಿಂದ ಸುರಕ್ಷಿತವಾಗಿ ಹೊರಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.