https://youtube.com/shorts/G0oN8U59OVY?si=rbIwZ4fR9fKtFNQ-
newsics.com
ನವದೆಹಲಿ: ಸಂವೇದನಾಶೀಲ ಹಲ್ಲುಗಳಿಗಾಗಿ ಬಳಸಲಾಗುವ ವಿಶ್ವಪ್ರಸಿದ್ಧ ಸೆನ್ಸೋಡೈನ್ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಟೂತ್‌ಪೇಸ್ಟ್ ತಯಾರಿಸಿ ಮಾರಾಟ ಮಾಡುತ್ತಿದ್ದ ಅಕ್ರಮ ಕಾರ್ಖಾನೆಯ ಮೇಲೆ ದಾಳಿ ನಡೆಸಲಾಗಿದ್ದು, ಸಾವಿರಾರು ನಕಲಿ ಟ್ಯೂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೆಹಲಿಯ ಈಶಾನ್ಯ ಭಾಗದ ಶಾಸ್ತ್ರಿ ಪಾರ್ಕ್ ಮತ್ತು ಜಗತ್‌ಪುರ ಪ್ರದೇಶಗಳಲ್ಲಿ ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ ಈ ನಕಲಿ ಜಾಲ ಬಯಲಿಗೆ ಬಂದಿದೆ.
ಸುಮಾರು 25,000ಕ್ಕೂ ಹೆಚ್ಚು ನಕಲಿ ಟೂತ್‌ಪೇಸ್ಟ್ ಟ್ಯೂಬ್‌ಗಳು, ಖಾಲಿ ಪ್ಯಾಕೆಟ್‌ಗಳು ಮತ್ತು ಟೂತ್‌ಪೇಸ್ಟ್ ತಯಾರಿಸಲು ಬಳಸುತ್ತಿದ್ದ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ನಕಲಿ ‘ಈನೋ’ (Eno) ಪ್ಯಾಕೆಟ್‌ಗಳು ಕೂಡ ಪತ್ತೆಯಾಗಿವೆ.
ಈ ನಕಲಿ ಟೂತ್‌ಪೇಸ್ಟ್ ತಯಾರಿಕೆಯಲ್ಲಿ ಮಾನವನ ಆರೋಗ್ಯಕ್ಕೆ ಮಾರಕವಾದ, ಕ್ಯಾನ್ಸರ್‌ಕಾರಕ ಕೆಮಿಕಲ್‌ಗಳನ್ನು ಬಳಸಲಾಗುತ್ತಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಕಡಿಮೆ ಬೆಲೆಗೆ ಆಮಿಷವೊಡ್ಡಿ ಇವುಗಳನ್ನು ಸ್ಥಳೀಯ ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು.