https://youtube.com/shorts/G0oN8U59OVY?si=rbIwZ4fR9fKtFNQ-
newsics.com
6 ವರ್ಷದ ಪುಟ್ಟ ಮಗುವನ್ನ ಹೋಟೆಲ್ ರೂಮಿನಲ್ಲಿ ಒಂಟಿಯಾಗಿ ಬಿಟ್ಟು ಹೋಗಿದ್ದಳು ಒಬ್ಬ ತಾಯಿ.ಬರೋಬ್ಬರಿ 15 ದಿನಗಳ ಕಾಲ ಆ ತಾಯಿಗಾಗಿ ಕಾಯುತ್ತಾ ಮಗುವನ್ನು ಹೋಟೆಲ್ ಸಿಬ್ಬಂದಿಯನ್ನು ನೋಡಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ.
ಚೆಂಗ್‌ಚೆಂಗ್ ಎಂಬ ಹೆಸರಿನ ಈ 6 ವರ್ಷದ ಬಾಲಕ, ಫೆಬ್ರವರಿ ತಿಂಗಳಲ್ಲಿ ತನ್ನ 25 ವರ್ಷದ ತಾಯಿ ಯುಯೆ ಜೊತೆಗೆ ಝೆಂಗ್‌ಝೌನಲ್ಲಿರುವ ಹೋಟೆಲ್‌ಗೆ ಬಂದಿದ್ದನು. ಆರಂಭದಲ್ಲಿ ಈ ತಾಯಿ ರಾತ್ರಿ ಹೊತ್ತು ಹೊರಗಡೆ ಹೋಗಿ ಬೆಳಗ್ಗೆ ವಾಪಸ್ ಬರುತ್ತಿದ್ದಳು. ಆದರೆ ಮಾರ್ಚ್ ಶುರುವಾಗುತ್ತಿದ್ದಂತೆ, ಹೊರಗೆ ಹೋದವಳು ಮರಳಿ ಬರಲೇ ಇಲ್ಲ. ಹೋಟೆಲ್ ಸಿಬ್ಬಂದಿಗೂ ಯಾವುದೇ ಸಂಪರ್ಕದ ಮಾಹಿತಿಯನ್ನು ಆಕೆ ನೀಡಿರಲಿಲ್ಲ.
ಬರೋಬ್ಬರಿ ಅರ್ಧ ತಿಂಗಳಿಗೂ ಹೆಚ್ಚು ಕಾಲ ಈ ಪುಟ್ಟ ಬಾಲಕ ಆ ಹೋಟೆಲ್ ರೂಮಿನಲ್ಲೇ ಒಂಟಿಯಾಗಿ ಕಾಲ ಕಳೆದಿದ್ದಾನೆ. ಈ ಸಮಯದಲ್ಲಿ ಆತ ಹೋಟೆಲ್ ಕೆಲಸಗಾರರು ಮತ್ತು ಕ್ಲೀನಿಂಗ್ ಮಾಡುವವರ ಜೊತೆ ಮಾತನಾಡಲು ಶುರು ಮಾಡಿದನು. ಪಾಪ ಆ ಮಗುವಿನ ಪರಿಸ್ಥಿತಿ ನೋಡಿ, ಸಿಬ್ಬಂದಿ ಕೂಡ ಆತನನ್ನು ಆಗಾಗ ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದರು.
ಈ ಮಗುವಿನ ಸ್ಥಿತಿ ನೋಡಿ ಮರುಗಿದ ಹೋಟೆಲ್ ಸಿಬ್ಬಂದಿ, ಆತನಿಗೆ ತಾಯಿಯ ಸ್ಥಾನದಲ್ಲಿ ನಿಂತು ಆರೈಕೆ ಮಾಡಲು ಶುರು ಮಾಡಿದರು. ಆತನಿಗೆ ಹೊತ್ತಿಗೆ ಸರಿಯಾಗಿ ಊಟ, ಹಣ್ಣುಗಳನ್ನು ತಂದುಕೊಡುತ್ತಿದ್ದರು. ಯಾರಾದರೊಬ್ಬರು ಸದಾ ಕಾಲ ಆತನ ಜೊತೆಯಲ್ಲಿ ಇರುವಂತೆ ಪಾಳಿಗಳ ಲೆಕ್ಕದಲ್ಲಿ ಮಗುವನ್ನು ನೋಡಿಕೊಳ್ಳುತ್ತಿದ್ದರು.
ಮಾರ್ಚ್ 24 ರಂದು ಕೊನೆಗೂ ಆ ತಾಯಿ ಹೋಟೆಲ್‌ಗೆ ಹಿಂತಿರುಗಿದಳು. ತಾಯಿಯನ್ನು ನೋಡಿದ ತಕ್ಷಣ ಮಗು ಓಡಿಹೋಗಿ ತಬ್ಬಿಕೊಂಡಿತು. ತನಗೆ ಹುಷಾರಿಲ್ಲದ ಕಾರಣ ಮಗುವಿಗೂ ಸೋಂಕು ತಗುಲಬಹುದೆಂಬ ಭಯ ಹಾಗೂ ಆರ್ಥಿಕ ಸಮಸ್ಯೆಯಿಂದ ಹೀಗೆ ಮಾಡಿದೆ ಎಂದು ಆಕೆ ಕ್ಷಮೆ ಕೇಳಿದಳು.