newsics.com
ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಅಭಿನಯ ಮಾಡಬೇಕು ಎಂದರೆ ನಟಿಯರು ಸಾಲು ಸಾಲು ನಿಲ್ಲುತ್ತಾರೆ. ನನಗೆ ಆಫರ್ ಕೊಡಿ ಎಂದು ಕಾದು ಕುಳಿತಿರುತ್ತಾರೆ. ಇಂತಹ ಒಂದು ದೊಡ್ಡ ಆಫರ್ ಬಂದಾಗ ಆ ಹೀರೋಯಿನ್ ನನಗೆ ಬೇಡವೇ ಬೇಡ ಎಂದು ತಿರಸ್ಕರಿಸಿದ್ದರು. ಸಖತ್ ಬ್ಯೂಟಿಯಾಗಿದ್ದ ಆ ನಟಿ ಸಿನಿಮಾ ಆಫರ್ ತಿರಸ್ಕರಿಸುವುದಕ್ಕೂ ಒಂದು ಬಲವಾದ ಕಾರಣವಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ನಾಯಕಿಯಾಗಿ ನಟಿಸುವ ಅವಕಾಶವನ್ನು ನಟಿ ಖುಷ್ಬೂ ನಿರಾಕರಿಸಿದ್ದರು. ಅವರ ಬದಲು ವಿಜಯಶಾಂತಿ ನಟಿಸಲು ಖುಷ್ಬೂ ಅವರೇ ಕಾರಣ ಎನ್ನಲಾಗುತ್ತದೆ.
ಪಿ. ವಾಸು ನಿರ್ದೇಶನದಲ್ಲಿ ಪ್ರಭು-ಖುಷ್ಬೂ ನಟಿಸಿದ್ದ ‘ಚಿನ್ನತಂಬಿ’ ಸಿನಿಮಾ ಮೆಗಾ ಹಿಟ್ ಆಗಿತ್ತು. ಅದೇ ಸಮಯದಲ್ಲಿ, ಶಿವಾಜಿ ಗಣೇಶನ್ ನಿರ್ಮಾಣದಲ್ಲಿ, ಪಿ. ವಾಸು ಅವರು ರಜನಿಕಾಂತ್ ಜೊತೆ ‘ಮನ್ನನ್’ ಸಿನಿಮಾ ಮಾಡಲು ಮುಂದಾದರು. ರಜನಿಗೆ ಸರಿಸಾಟಿಯಾದ ನಾಯಕಿ ಪಾತ್ರಕ್ಕೆ ವಾಸು ಮನಸ್ಸಿನಲ್ಲಿ ಖುಷ್ಬೂ ಇದ್ದರು. ಹೀಗಾಗಿ, ಪಿ. ವಾಸು ಮೊದಲು ಖುಷ್ಬೂಗೆ ಕಥೆ ಹೇಳಿದರು. ಆದರೆ ಕಥೆ ಕೇಳಿ ಖುಷ್ಬೂ ಶಾಕ್ ಆದರಂತೆ. ಕಥೆ ಇಷ್ಟವಾದರೂ ನಟಿಸಲು ಒಪ್ಪಲಿಲ್ಲ.
ಕಾರ್ಮಿಕನಾಗಿ ಕೆಲಸ ಮಾಡುವ ರಜನಿಕಾಂತ್‌ಗೆ ಖುಷ್ಬೂ ಕಪಾಳಮೋಕ್ಷ ಮಾಡುವ ದೃಶ್ಯ ಚಿತ್ರದಲ್ಲಿದೆ ಎಂದು ಪಿ. ವಾಸು ಹೇಳಿದಾಗ, ‘ಅಯ್ಯಯ್ಯೋ, ಆ ದೃಶ್ಯದಲ್ಲಿ ನಟಿಸಲು ನನ್ನಿಂದ ಸಾಧ್ಯವಿಲ್ಲ’ ಎಂದು ಖುಷ್ಬೂ ಹೇಳಿದರಂತೆ. ‘ನೀವು ರಜನಿಕಾಂತ್‌ಗೆ ಸರಿಸಮನಾದ ಪವರ್‌ಫುಲ್ ನಟಿಯನ್ನು ಹಾಕಿದರೆ ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ನಾನು ರಜನಿ ಸರ್‌ಗೆ ಹೊಡೆದರೆ ಪ್ರೇಕ್ಷಕರು ಒಪ್ಪುವುದಿಲ್ಲ.
‘ನಾನು ರಜನಿ ಸರ್‌ಗೆ ಹೊಡೆದರೆ, ಅವರ ಅಭಿಮಾನಿಗಳು ಥಿಯೇಟರ್‌ನಲ್ಲಿ ಸ್ಕ್ರೀನ್ ಅನ್ನೇ ಹರಿದು ಹಾಕುತ್ತಾರೆ. ಯಾಕೆಂದರೆ ರಜನಿಕಾಂತ್ ಅಭಿಮಾನಿಗಳಿಗೆ ಅವರ ಮೇಲೆ ಅಷ್ಟೊಂದು ಪ್ರೀತಿ’ ಎಂದರಂತೆ. ಖುಷ್ಬೂ ಅವರ ವಿವರಣೆ ನಿರ್ದೇಶಕ ಪಿ. ವಾಸುಗೆ ಸರಿ ಎನಿಸಿತು. ಹೀಗಾಗಿ, ಖುಷ್ಬೂ ಬದಲು ಆಗ ತೆಲುಗಿನಲ್ಲಿ ಜನಪ್ರಿಯರಾಗಿದ್ದ ವಿಜಯಶಾಂತಿಯನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದರು. ‘ನಾನು ನಾಯಕಿಯಾಗಿ ನಟಿಸದಿದ್ದರೂ, ಕಥೆ ಇಷ್ಟವಾಗಿದೆ, ಯಾವುದಾದರೂ ಒಂದು ಚಿಕ್ಕ ಪಾತ್ರ ಕೊಡಿ’ ಎಂದು ಖುಷ್ಬೂ ಕೇಳಿಕೊಂಡರಂತೆ.
https://www.newsics.com/2026/04/03/newlywed-breaks-down-in-tears-after-seeing-her-pet-dogs-love/