newsics.com
ಗಂಡನ ಮನೆಗೆ ಹೊರಟಾಗ ನವ ವಧು ಮುದ್ದಿನ ನಾಯಿಯ ಭಾವುಕ ವಿದಾಯಕ್ಕೆ ಕಣ್ಣೀರಿಟ್ಟಿದ್ದಾಳೆ. ಗೌರಿ ಸಿಂಗ್ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆ ಬಳಿಕ ನವ ವಧುವಿನ ಮನೆಯಿಂದ ಗಂಡನ ಮನೆಗೆ ತೆರಳುವ ಸಮಯ ಬಂದೇ ಬಿಟ್ಟಿದೆ. ಪೋಷಕರು, ಕುಟುಂಬಸ್ಥರು ಮಗಳನ್ನು ಬೀಳ್ಕೊಡಲು ಮುಂದಾಗಿದ್ದಾರೆ.
ಆದರೆ ಮನೆಯ ಮುದ್ದಿನ ನಾಯಿ ಇದಕ್ಕೆ ಅನುವು ಮಾಡಿಕೊಡಲೇ ಇಲ್ಲ. ನವ ವಧು ಗೌರಿ ಸಿಂಗ್ ಗಂಡನ ಕೈಹಿಡು ಕಾರಿನತ್ತ ತೆರಳುವಾಗ ಮೇಲಿನ ಮಹಡಿಯಲ್ಲಿದ್ದ ಲಾಬ್ರಡರ್ ಹಾಗೂ ಗೋಲ್ಡನ್ ರಿಟ್ರಿವರ್ ಎರಡು ನಾಯಿಗಳು ತೀವ್ರವಾಗಿ ಬೊಗಳಲು ಆರಂಭಿಸಿದೆ.
ಇಷ್ಟು ದಿನ ಮುದ್ದಾಗಿ ಸಾಕಿದ್ದ ಮಾಲಕಿಯನ್ನು ಬೀಳ್ಕೋಡಲು ಆಗದೆ, ಇರಲು ಆಗದೇ ನಾಯಿಗಳು ಚಡಪಡಿಸಿತ್ತು. ನಾಯಿ ಬೊಗಳುವಿಕೆಯಿಂದ ನವ ವಧು ಗೌರಿ ಸಿಂಗ್ ಭಾವುಕರಾಗಿದ್ದಾರೆ.
ಅಷ್ಟೊತ್ತಿಗೆ ನಾಯಿಗಳನ್ನು ಬಿಟ್ಟಿದ್ದಾರೆ. ಓಡೋಡಿ ಬಂದ ಎರಡು ನಾಯಿಗಳು ಗೌರಿ ಸಿಂಗ್ ಮೇಲಕ್ಕೆ ಹಾರಿ ಮುದ್ದಾಡಿದೆ. ನವ ವಧುವನ್ನು ಗಂಡನ ಮನೆಗೆ ತೆರಳಲು ನಾಯಿಗಳು ಅನುವು ಮಾಡಿಕೊಡಲೇ ಇಲ್ಲ.ಕಣ್ಣೀರಿಟ್ಟ ಗೌರಿ ಸಿಂಗ್ ವರ ಸಂತೈಸಿದ್ದಾನೆ. ಆದರೆ ದುಃಖ, ನೋವು ಸಹಿಸಲು ಸಾಧ್ಯವಾಗದೇ ಗೌರಿ ಸಿಂಗ್ ಕಣ್ಣೀರಿಟ್ಟಿದ್ದಾರೆ. ಕೆಲ ಹೊತ್ತಿನ ತನಕ ನಾಯಿಗಳು ಗೌರಿ ಸಿಂಗ್‌ನ ಬಿಡಲೇ ಇಲ್ಲ. ಬಳಿಕ ಪೋಷಕರು ಬಂದು ನಾಯಿಯನ್ನು ಮತ್ತೆ ಕರೆದುಕೊಂಡು ಹೋಗಿ ಕಟ್ಟಿಹಾಕಿದ್ದಾರೆ. ಈ ದೃಶ್ಯಗಳನ್ನು ನೋಡಿದ ಹಲವರು ಭಾವುಕರಾಗಿದ್ದಾರೆ.
https://www.instagram.com/reel/DWjCC2ckwNy/?igsh=eDRiY3ZhMGxhNWdo