Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪೋಷಕರ ಜೇಬಿಗೆ ಕತ್ತರಿ: ಖಾಸಗಿ ಶಾಲೆಗಳ ಶುಲ್ಕ ಭಾರಿ ಏರಿಕೆ
ಕರ್ನಾಟಕಪ್ರಮುಖ

ಪೋಷಕರ ಜೇಬಿಗೆ ಕತ್ತರಿ: ಖಾಸಗಿ ಶಾಲೆಗಳ ಶುಲ್ಕ ಭಾರಿ ಏರಿಕೆ

Share
1 Min Read
SHARE

https://youtube.com/shorts/b7DblvgZf1A?si=BCR0sxsn8Xzh1cnn

newsics.com

ಬೆಂಗಳೂರು: ಹೊಸ ಶೈಕ್ಷಣಿಕ ವರ್ಷ 2026-27ರ ದಾಖಲಾತಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬೆಂಗಳೂರಿನ ಪೋಷಕರು ತೀವ್ರ ಆತಂಕಕ್ಕೀಡಾಗಿದ್ದಾರೆ. ಒಂದೆಡೆ ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಂಬಂಧಿ ಗೊಂದಲ, ಇನ್ನೊಂದೆಡೆ ಖಾಸಗಿ ಶಾಲೆಗಳ 5% ರಿಂದ 15% ಶುಲ್ಕ ಏರಿಕೆ. ಈ ಎರಡು ಸಮಸ್ಯೆಗಳು ಪೋಷಕರ ಜೀವನವನ್ನು ಕಷ್ಟಕರಗೊಳಿಸಿವೆ.

1. ಶೇ. 15 ರಷ್ಟು ಶುಲ್ಕ ಏರಿಕೆ:

2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳು ತಮ್ಮ ವಾರ್ಷಿಕ ಶುಲ್ಕವನ್ನು ಶೇ. 5 ರಿಂದ 15 ರಷ್ಟು ಹೆಚ್ಚಿಸಿವೆ. ವಾರ್ಷಿಕ ಪರೀಕ್ಷೆಗಳು ಮುಗಿದು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ, ಶಾಲೆಗಳು ನೀಡುತ್ತಿರುವ ‘ಫೀಸ್ ಸ್ಟ್ರಕ್ಚರ್’ ನೋಡಿ ಪೋಷಕರು ಕಂಗಾಲಾಗಿದ್ದಾರೆ.

ಶಾಲಾ ನಿರ್ವಹಣಾ ವೆಚ್ಚ, ಶಿಕ್ಷಕರ ಸಂಬಳ ಹೆಚ್ಚಳ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ನೆಪವೊಡ್ಡಿ ಈ ಬೆಲೆ ಏರಿಕೆ ಮಾಡಲಾಗಿದೆ. ಮಧ್ಯಮ ವರ್ಗದ ಪೋಷಕರಿಗೆ ಈ ಹಠಾತ್ ಏರಿಕೆ ಆರ್ಥಿಕವಾಗಿ ದೊಡ್ಡ ಹೊರೆಯಾಗಿ ಪರಿಣಮಿಸಿದೆ.

 

2. ಒಂದನೇ ತರಗತಿ ಪ್ರವೇಶ: 6 ವರ್ಷದ ಕಡ್ಡಾಯ ನಿಯಮದ ಗೊಂದಲ

ಕೇವಲ ಹಣದ ಹೊರೆ ಮಾತ್ರವಲ್ಲದೆ, ತಾಂತ್ರಿಕ ನಿಯಮಗಳೂ ಪೋಷಕರ ನಿದ್ದೆಗೆಡಿಸಿವೆ. ಒಂದನೇ ತರಗತಿ ಪ್ರವೇಶಕ್ಕೆ ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ಸರ್ಕಾರದ ನಿಯಮದ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಕೆಲವು ಪೋಷಕರು ವಯೋಮಿತಿ ಸಡಿಲಿಕೆಯ ನಿರೀಕ್ಷೆಯಲ್ಲಿದ್ದಾರೆ.ಸರಿಯಾದ ಮಾಹಿತಿ ಇಲ್ಲದ ಕಾರಣ, ದಾಖಲಾತಿ ಪ್ರಕ್ರಿಯೆಯ ಸಮಯದಲ್ಲಿ ಪೋಷಕರು ಶಾಲೆಗಳಿಂದ ಶಾಲೆಗಳಿಗೆ ಅಲೆಯುವಂತಾಗಿದೆ.

ವಾರ್ಷಿಕ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ಶಾಲೆಗಳಲ್ಲಿ ಹೊಸ ದಾಖಲಾತಿ ಹಾಗೂ ರೀ-ಅಡ್ಮಿಷನ್ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ.

https://www.newsics.com/2026/03/31/ban-on-sale-of-ice-cream-violation-will-attract-a-fine-of-rs-5000/

TAGGED:Cutting into parents' pockets: Private school fees hiked
Share This Article
Facebook Twitter Copy Link Print
Previous Article ಐಸ್‌ಕ್ರೀಂ ಮಾರಾಟ ನಿಷೇಧ! ಉಲ್ಲಂಘನೆ ಮಾಡಿದ್ರೆ 5000 ರೂ. ದಂಡ!
Next Article GOOD MORNING Today’s Horoscope ಇಂದಿನ ರಾಶಿ ಭವಿಷ್ಯ 01-04-2026, ಬುಧವಾರ, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

Popular Posts

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

You Might Also Like

ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read
ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?