https://youtube.com/shorts/qIu1k1AjcVg?si=asT_CsSQI4v14g8C
newsics.com
ವಾರಣಾಸಿ: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಪ್ರಯಾಣಿಕನೊಬ್ಬ ಎರಡು ಬಾರಿ ತೆರೆಯಲು ಯತ್ನಿಸಿದ ಘಟನೆ ನಡೆದಿದೆ
ಬೆಂಗಳೂರಿನಿಂದ ವಾರಣಾಸಿಗೆ ಶನಿವಾರ ರಾತ್ರಿ 8:15ಕ್ಕೆ ಇಂಡಿಗೋ ವಿಮಾನ ಹೊರಟಿದ್ದು 15 ನಿಮಿಷಕ್ಕೆ ಮೊಹಮ್ಮದ್ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿದ್ದಾನೆ. ವಿಮಾನದ ಸಿಬ್ಬಂದಿ ಎಮರ್ಜೆನ್ಸಿ ಡೋರ್ ತೆಗೆಯದಂತೆ ಎಚ್ಚರಿಸಿದ್ದಾರೆ. ನಂತರ ರಾತ್ರಿ 10.20ಕ್ಕೆ ವಿಮಾನ ಲ್ಯಾಂಡ್ ಆಗುವ ವೇಳೆ ವಿಮಾನ ಭೂಮಿಯಿಂದ ಕೇವಲ 500 ಅಡಿ ಮೇಲಿರುವಾಗ ಮತ್ತೆ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಉತ್ತರ ಪ್ರದೇಶದ ಮೌ ಜಿಲ್ಲೆಯ ಮೊಹಮ್ಮದ್ ಅದ್ನಾನ್ ಇಂತಹ ಕೃತ್ಯವಸಗಿದ ವ್ಯಕ್ತಿ. ವಾರಣಾಸಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವಾರಣಾಸಿ ಪೊಲೀಸ್ ಅಧಿಕಾರಿಗಳು ಮೊಹಮ್ಮದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನನಗೆ ಏನೂ ಗೊತ್ತಾಗಿಲ್ಲ, ನನ್ನ ಮೇಲೆ ದೆವ್ವ ಬಂದಿತ್ತು ಎಂದು ಹೇಳಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
https://www.newsics.com/2026/03/30/fears-of-another-waterway-closure-after-hormuz/