https://youtube.com/shorts/qIu1k1AjcVg?si=asT_CsSQI4v14g8C
newsics.com
ಕನ್ನಡದ ನಟಿ-ನಿರೂಪಕಿ ಅನುಪಮಾ ಗೌಡ ಯಾವಾಗಲು ತಮ್ಮ ನಟನೆ, ಸಿನಿಮಾ, ಸೀರಿಯಲ್ ಮೂಲಕ ಸದಾ ಸುದ್ದಿಯಲ್ಲಿದ್ದರು. ತಮ್ಮ ನೈಜ ನಟನೆ, ಮಾತಿನ ಮೂಲಕ ಮನೆಮಾತಾಗಿದ್ದ ಅನುಪಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಆ ಒಂದು ಫೋಟೋ. ಅನುಪಮಾ ಇತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಆ ಸಮಯದಲ್ಲಿ ಅನುಪಮಾ ಕುರಿತಾದ ಫೋಟೋ ಒಂದು ಎಲ್ಲೆಡೆ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ ಅನುಪಮಾ ಸದ್ದಿಲ್ಲದೇ ನಿಶಿತಾರ್ಥ ಕೂಡಾ ಮಾಡಿಕೊಂಡಿದ್ದಾರೆ ಎಂಬುದಾಗಿಯೂ ಗಾಸಿಪ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಎಲ್ಲಾ ಗಾಸಿಪ್ ಗಳಿಗೆ ಅನುಪಮಾ ಗೌಡ ‘ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್’ ರಾಮನವಮಿ ಪ್ರಯುಕ್ತ ಶೂಟಿಂಗ್ ಸೆಟ್‌ನಲ್ಲಿ ಎಲ್ಲರಿಗೂ ನಿಮ್ಮ ಬದುಕಿನ ಹನುಮಂತ ಯಾರು ಅಂತ ಕೇಳಿ ವಾಹಿನಿ ಒಂದು ವಿಡಿಯೋ ರಿಲೀಸ್ ಮಾಡಿದೆ.
ಇದರಲ್ಲಿ ಅನುಪಮಾ ಅವರು ಹೀಗೆ ಉತ್ತರ ಕೊಟ್ಟಿದ್ದಾರೆ ಇತ್ತೀಚೆಗೆ ನನಗೆ ಎಂಗೇಜ್ಮೆಂಟ್ ಆಗಿದೆ ಅಂತ ರೂಮರ್ಸ್ ಹರಡಸ್ತಿದ್ದಾರೆ. ಈಸ್ ಮೈ ಬೆಸ್ಟ್ ಫ್ರೆಂಡ್ ರಾಘವ್” ಎಂದು ಹೇಳಿದ್ದಾರೆ ನಟಿ ಅನುಪಮಾ ಗೌಡ ಅವರು. ಈ ಮೂಲಕ ತಮ್ಮ ಬದುಕಿನ ಹನುಮಂತ, ಆಪತ್ಬಾಂಧವ ಗೆಳೆಯ ರಾಘವ್ ಎಂದಿದ್ದಾರೆ.
ಇದೇ ಶೋನಲ್ಲಿ ಮದುವೆ ಬಗ್ಗೆನೂ ಮಾತ್ನಾಡಿದ್ದ ಅನುಪಮಾ ಅವರು, ನನ್ನ ಲೈಫ್‌ನಲ್ಲಿ ಒಂದು ಪಾಸ್ಟ್ ಇದೆ. ಅದು ಎಲ್ಲರಿಗೂ ಗೊತ್ತು. ಆದಾದಮೇಲೆ ನನಗೆ ಯಾರ ಮೇಲು ಪ್ರೀತಿ ಆಗಿಲ್ಲ. ಸೋ ನನ್ನ ಮದುವೆ ಆಗೋ ಹುಡುಗನಿಂದ ತುಂಬಾ ನಿರೀಕ್ಷೆ ಮಾಡೋದು ಪ್ರೀತಿನಾ. ನನಗೆ ಜಗತ್ತು, ಸಮಾಜದಲ್ಲಿ ಏನಾಗ್ತಿದೆ ಅನ್ನೋದರ ಬಗ್ಗೆ ಜನರಲ್ ನಾಲೆಡ್ಜ್ ಇಲ್ಲ. ಸೋ ಆ ಹುಡುಗ ತುಂಬಾ ನಾಲೆಡ್ಜಡ್ ಪರ್ಸನ್ ಆಗಿರಬೇಕು. ಫನ್ನಿಯಾಗಿರಬೇಕು. ಆ ತರಹದ ವ್ಯಕ್ತಿ ಸಿಕ್ಕಿದರೆ ಖಂಡಿತ ಮದುವೆ ಆಗ್ತಿನಿ ಎಂದು ಹೇಳಿದ್ದರು ನಟಿ ಅನುಪಮಾ ಗೌಡ.
https://www.instagram.com/reel/DWYmgTfD3oz/?igsh=Z21wYW52aTF1MTUx