Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹಾರ್ಮುಜ್ ನಂತರ ಮತ್ತೊಂದು ಜಲಮಾರ್ಗ ಬಂದ್‌ ಭೀತಿ
ದೇಶಪ್ರಮುಖವಿದೇಶ

ಹಾರ್ಮುಜ್ ನಂತರ ಮತ್ತೊಂದು ಜಲಮಾರ್ಗ ಬಂದ್‌ ಭೀತಿ

Share
2 Min Read
SHARE

https://youtube.com/shorts/qIu1k1AjcVg?si=asT_CsSQI4v14g8C

newsics.com

ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ವ್ಯಾಪ್ತಿ ವಿಸ್ತರಿಸುತ್ತಿರುವಂತೆ ಕಾಣುತ್ತಿದೆ. ಇದೀಗ ಸಂಘರ್ಷವು ಮತ್ತೊಂದು ಮಜಲಿಗೆ ತಿರುಗಿದೆ. ಇದರಿಂದ ಬಾಬ್‌ ಅಲ್‌ ಮಂಡೇಬ್‌’ ತೈಲ ಹಾಗೂ ಸರಕು ಸಾಗಣೆಯ ಪ್ರಮುಖ ಜಲಮಾರ್ಗವೂ ಮುಚ್ಚುವ ಸಾಧ್ಯತೆ ಇದೆ.

ಲೆಬನಾನ್ ಮತ್ತು ಇರಾಕ್‌ನಲ್ಲಿರುವ ಇರಾನ್‌ನ ಶಿಯಾ ಮಿತ್ರರಾಷ್ಟ್ರಗಳು ಈಗಾಗಲೇ ಪ್ರಾದೇಶಿಕ ಸಂಘರ್ಷದಲ್ಲಿ ಸೇರಿಕೊಂಡಿವೆ. ಈಗ, ಹೌತಿ ಹಸ್ತಕ್ಷೇಪದಿಂದ, ಬಾಬ್ ಎಲ್ ಮಂಡೇಬ್ ಸ್ಟ್ರೇಟ್ ಜಲಸಂಧಿ ಮುಚ್ಚುವ ಅಪಾಯವಿದೆ. ಬಾಬ್ ಎಲ್-ಮಂಡೇಬ್ ವಿಶ್ವದ ಪ್ರಮುಖ ಕಡಲ ಚೆಕ್‌ಪಾಯಿಂಟ್‌ಗಳಲ್ಲಿ ಒಂದಾಗಿದೆ, ಇದು ಯೆಮೆನ್ (ಅರೇಬಿಯನ್ ಪರ್ಯಾಯ ದ್ವೀಪ) ಮತ್ತು ಜಿಬೌಟಿ/ಎರಿಟ್ರಿಯಾ (ಆಫ್ರಿಕಾದ) ನಡುವೆ ಇದೆ. ಇದು ಕೆಂಪು ಸಮುದ್ರವನ್ನು ಅಡೆನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರಕ್ಕೆ ಸಂಪರ್ಕಿಸುತ್ತದೆ.

ಇದು ರೆಡ್ ಸೀ ಅಥವಾ ಕೆಂಪು ಸಮುದ್ರದಲ್ಲಿರುವ ಒಂದು ಕಿರಿದಾದ ಜಲಮಾರ್ಗ. ಈಜಿಪ್ಟ್​ನ ಸೂಜ್ ಕೆನಾಲ್​ಗೆ ಹೋಗಬೇಕಾದರೆ ಈ ಜಲಸಂಧಿ ಮೂಲಕವೇ ಹಡಗುಗಳು ಸಾಗಬೇಕು. ಕುತೂಹಲ ಎಂದರೆ ಈ ಬಾಬ್ ಎಲ್ ಮಂಡೇಬ್ ಎಂದರೆ ಅರೇಬಿಕ್ ಭಾಷೆಯಲ್ಲಿ ಕಣ್ಣೀರ ದ್ವಾರ. ಇದರ ಆಜುಬಾಜಿನಲ್ಲಿರುವ ದೇಶಗಳಲ್ಲಿ ಯೆಮೆನ್ ಕೂಡ ಒಂದು. ಈ ವಿಚಾರವೇ ಈಗ ಜಾಗತಿಕ ಭೀತಿಗೆ ಕಾರಣವಾಗಿರುವುದು.

ಯೆಮೆನ್​ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸಂಘಟನೆಯ ಉಪಸ್ಥಿತಿ ಇದೆ. ಇರಾನ್ ಸೂಚನೆ ಕೊಟ್ಟರೆ ಹೌತಿ ಬಂಡುಕೋರರು ಈ ಜಲಸಂಧಿಯಲ್ಲಿ ದಾಳಿ ಶುರು ಹಚ್ಚಿಕೊಳ್ಳಬಹುದು. ಬಾಬೆಲ್ ಮಂಡೆಬ್ ಜಲಸಂಧಿ ಬಹಳ ಮುಖ್ಯವಾದ ಟ್ರೇಡಿಂಗ್ ರೂಟ್​ನಲ್ಲಿ ಇದೆ. ಇದಕ್ಕೆ ತಡೆ ಬಿದ್ದರೆ ಹಾರ್ಮುಜ್ ಜಲಸಂಧಿಗಿಂತಲೂ ಪರಿಣಾಮ ಘೋರವಾಗಿರುತ್ತದೆ.

ಹಾರ್ಮುಜ್ ಜಲಸಂಧಿಯಲ್ಲಿ ಬಹುತೇಕ ನೌಕೆಗಳು ತೈಲ ಸಾಗಣೆ ಮಾಡುತ್ತವೆ. ಆದರೆ, ಬಾಬೆಲ್ ಮಂಡೇಬ್ ಜಲಸಂಧಿ ಇನ್ನೂ ದೊಡ್ಡ ವ್ಯಾಪಾರ ಮಾರ್ಗಕ್ಕೆ ಬರುತ್ತದೆ. ತೈಲವಷ್ಟೇ ಅಲ್ಲ, ಹಲವು ಸರಕುಗಳ ಸಾಗಣೆಯಾಗುತ್ತದೆ.

ಇದು ಸೂಯೆಜ್ ಕಾಲುವೆಗೆ ಇರುವ ಏಕೈಕ ಸಮುದ್ರ ಮಾರ್ಗವಾಗಿದೆ ಮತ್ತು ಜಾಗತಿಕ ಕಡಲ ವ್ಯಾಪಾರದ ಶೇ 10-15 ರಷ್ಟು ಇದರ ಮೂಲಕ ಹಾದುಹೋಗುತ್ತದೆ. ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನವನ್ನು ವಿಧಿಸಿದೆ. ಹೌತಿಗಳು ಇದನ್ನು ಸಹ ಮುಚ್ಚಿದರೆ, ಅದು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಬಹುದು.

https://www.newsics.com/2026/03/30/tragedy-during-shooting-on-a-boat-actor-rahul-dies-after-drowning/

TAGGED:Fears of another waterway closure after Hormuz
Share This Article
Facebook Twitter Copy Link Print
Previous Article ಬೋಟಿನಲ್ಲಿ ಶೂಟಿಂಗ್ ವೇಳೆ ದುರಂತ :ನೀರಿನಲ್ಲಿ ಮುಳುಗಿ ನಟ ರಾಹುಲ್ ಸಾವು
Next Article ನನ್ನ ಮೇಲೆ ದೆವ್ವ ಬಂದಿದೆ ಎಂದು ವಿಮಾನದ ತುರ್ತು ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ

Popular Posts

Heavy Rain 5 ದಿನಗಳ ಕಾಲ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ, ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ

1 Min Read

Kangana Ranaut ರೇಷ್ಮೆ ಪೈಠಣಿ ಸೀರೆಯಲ್ಲಿ ಮಿಂಚಿದ ಕಂಗನಾ ರಣಾವತ್

1 Min Read

PM Narendra Modi ಮಧ್ಯಮ ವರ್ಗದವರು ಯಾವುದೇ ಕಾರಣಕ್ಕೂ ಹಿಂದುಳಿಯದಂತೆ ನಾವು ಹಗಲಿರುಳು ಶ್ರಮಿಸಬೇಕು : NDA ಸಮಾವೇಶದಲ್ಲಿ ಪ್ರಧಾನಿ ಮೋದಿ

1 Min Read

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

You Might Also Like

ಕರ್ನಾಟಕದೇಶಪ್ರಮುಖ

Gold Rate ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ : ಚಿನ್ನದ ದರ ಭಾರಿ ಇಳಿಕೆ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹10,000 ದಾಖಲೆಯ ಕುಸಿತ

1 Min Read
ದೇಶಪ್ರಮುಖ

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ : ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ

1 Min Read
ಕರ್ನಾಟಕಪ್ರಮುಖ

ವಾರದೊಳಗೆ 200 ವೈದ್ಯರ ಖಾಯಂ ನೇಮಕಾತಿಗೆ ಯು.ಟಿ. ಖಾದರ್ ಆದೇಶ

1 Min Read
ದೇಶಪ್ರಮುಖವಿದೇಶ

pak helicopter crashes ಪಿಒಕೆಯಲ್ಲಿ ಪಾಕ್ ಸೇನಾ ಹೆಲಿಕಾಪ್ಟರ್ ಪತನ: 21 ಸಿಬ್ಬಂದಿ ಸಾವು, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?