Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಧಿಕಾರ ಹಿಡಿಯುತ್ತಿದ್ದಂತೆ ಬಾಲೆನ್ ಶಾ ನಡೆ ಬದಲಾಯ್ತಾ?
ಪ್ರಮುಖವಿದೇಶ

ಅಧಿಕಾರ ಹಿಡಿಯುತ್ತಿದ್ದಂತೆ ಬಾಲೆನ್ ಶಾ ನಡೆ ಬದಲಾಯ್ತಾ?

Share
2 Min Read
SHARE

newsics.com

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ ಒಂದು ವಿಶೇಷ ಸಂದೇಶಕ್ಕೆ ಬಾಲೆನ್ ಶಾ ನೀಡಿರುವ ಪ್ರತಿಕ್ರಿಯೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಸೃಷ್ಟಿಸಿದೆ.

ನೇಪಾಳದಲ್ಲಿ ಹೊಸ ರಾಜಕೀಯ ಅಧ್ಯಾಯ!
ನೇಪಾಳದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿರುವ ವೇಳೆ, ನೇಪಾಳ ಮತ್ತು ಭಾರತ ನಡುವಿನ ಸಂಬಂಧಗಳ ಬಗ್ಗೆ ಮಹತ್ವದ ಸಂದೇಶ ಹೊರಬಿದ್ದಿದೆ. ಹೊಸ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಾಲೆನ್ ಶಾ, ತಮ್ಮ ಮೊದಲ ಪ್ರತಿಕ್ರಿಯೆಯಲ್ಲೇ ಭಾರತ ಜೊತೆಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದಾಗಿ ಸೂಚಿಸಿದ್ದಾರೆ. ಇದೇ ವೇಳೆ, ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಅಭಿನಂದನೆಗೆ ನೀಡಿದ ಉತ್ತರವೂ ಎರಡು ದೇಶಗಳ ಭವಿಷ್ಯದ ಸಹಕಾರದ ದಿಕ್ಕನ್ನು ಸ್ಪಷ್ಟಪಡಿಸಿದೆ.

ಬಾಲೆನ್‌ಗೆ ಶುಭಾಷಯ ಕೋರಿದ ಮೋದಿ!
ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಮೋದಿ ಅವರು ಬಾಲೆನ್ ಶಾ ಅವರಿಗೆ ಶುಭಾಶಯ ಕೋರಿದ್ದರು. ನೇಪಾಳದ ಜನರು ಅವರ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಜೊತೆಗೆ, ಭಾರತ-ನೇಪಾಳ ಸ್ನೇಹವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಒಟ್ಟಾಗಿ ಕೆಲಸ ಮಾಡುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಸಂದೇಶಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಶಾ, “ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಎರಡೂ ದೇಶಗಳ ಜನರ ಸಮೃದ್ಧಿಗಾಗಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ರಾಜತಾಂತ್ರಿಕ ಚದುರಂಗದಾಟದಲ್ಲಿ ಭಾರತಕ್ಕೆ ಆದ್ಯತೆ!
ಈ ಪ್ರತಿಕ್ರಿಯೆ ಕೇವಲ ಔಪಚಾರಿಕ ಮಾತಲ್ಲ, ಅದು ನೇಪಾಳದ ಹೊಸ ಸರ್ಕಾರ ತನ್ನ ವಿದೇಶಾಂಗ ನೀತಿಯಲ್ಲಿ ಭಾರತಕ್ಕೆ ನೀಡುತ್ತಿರುವ ಆದ್ಯತೆಯ ಸಂಕೇತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ವಿಶೇಷವಾಗಿ, ಇತ್ತೀಚಿನ ವರ್ಷಗಳಲ್ಲಿ ಕೆಪಿ ಓಲಿ ಶರ್ಮಾ ಆಡಳಿತದಲ್ಲಿ ಚೀನಾ ಕಡೆ ಹೆಚ್ಚು ಒಲವು ತೋರಿದ ಆರೋಪಗಳ ಹಿನ್ನೆಲೆ, ಈ ಹೊಸ ಸಂದೇಶವು ಮಹತ್ವ ಪಡೆದುಕೊಂಡಿದೆ.

ಓಲಿಯನ್ನು ಬಂಧಿಸಿದ ನೇಪಾಳದ ಸರ್ಕಾರ!
ಇದಕ್ಕೂ ಮುನ್ನ ನೇಪಾಳದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಬಹಳ ನಾಟಕೀಯವಾಗಿದ್ದವು. ಶನಿವಾರ ಬೆಳಿಗ್ಗೆ ನಡೆದ ಕ್ರಮದಲ್ಲಿ, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿಯನ್ನು ಬಂಧಿಸಲಾಗಿದೆ ಎಂಬ ವರದಿಗಳು ಹೊರಬಂದವು. ಇದರಿಂದ ದೇಶದ ಒಳರಾಜಕೀಯದಲ್ಲಿ ನಡೆದ ತೀವ್ರ ಅಧಿಕಾರ ಹೋರಾಟ ಸ್ಪಷ್ಟವಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಇಂತಹ ನಿರ್ಧಾರ ಕೈಗೊಳ್ಳುವುದರಿಂದ, ಶಾ ಆಡಳಿತವು ತನ್ನ ದೃಢ ನಿಲುವನ್ನು ತೋರಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಮಾಣವಚನ ಸ್ವೀಕರಿಸಿದ ಬಾಲೆನ್ ಶಾ!
ಶುಕ್ರವಾರ ಕಠ್ಮಂಡುವಿನ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬಾಲೆನ್ ಶಾ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಮಚಂದ್ರ ಪೌದೆಲ್ ಅವರು ಸಂವಿಧಾನದ ವಿಧಿ 76(1) ಅಡಿಯಲ್ಲಿ ಅವರಿಗೆ ಹುದ್ದೆ ಪ್ರಮಾಣವಚನ ನೀಡಿದರು. ಈ ಸಮಾರಂಭದಲ್ಲಿ ಉಪರಾಷ್ಟ್ರಪತಿ ರಾಮ್ ಸಹಾಯ್ ಪ್ರಸಾದ್ ಯಾದವ್, ಮುಖ್ಯ ನ್ಯಾಯಮೂರ್ತಿ ಪ್ರಕಾಶ ಸಿಂಗ್ ರೌತ್ ಮತ್ತು ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ನಾರಾಯಣ್ ಪ್ರಸಾದ್ ದಹಾಲ್ ಸೇರಿ ಅನೇಕ ಹಿರಿಯ ನಾಯಕರು ಭಾಗವಹಿಸಿದ್ದರು.

ಹೊಸ ಸರ್ಕಾರದ ಆರಂಭದಲ್ಲೇ ಭಾರತಕ್ಕೆ ನೀಡಿದ ಮಹತ್ವ ಮತ್ತು ತ್ವರಿತ ರಾಜಕೀಯ ಕ್ರಮಗಳು, ಬಾಲೆನ್ ಶಾ ಆಡಳಿತದ ದಿಕ್ಕು ಮತ್ತು ಆದ್ಯತೆಗಳನ್ನು ಸ್ಪಷ್ಟಪಡಿಸುತ್ತಿವೆ. ಇದು ಭಾರತ-ನೇಪಾಳ ಸಂಬಂಧಗಳಿಗೆ ಹೊಸ ಗತಿ ನೀಡುವ ಸಾಧ್ಯತೆ ಇದೆ.

ಗ್ರಾಮ ಪಂಚಾಯಿತಿ ಚುನಾವಣೆ: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ!

TAGGED:Did Balen Shah's behavior change after coming to power?
Share This Article
Facebook Twitter Copy Link Print
Previous Article ಮದುವೆ ಬೆನ್ನಲ್ಲೇ ಕುಂಭ ವೈರಲ್ ಗರ್ಲ್ ಸಂಕಷ್ಟ : ಡೈರಿ ಆಫ್ ಮಣಿಪುರ ಸಿನಿಮಾ ರದ್ದು
Next Article ಸರ್ಕಾರಿ ನೌಕರರ ಪಿಂಚಣಿ ನಿಯಮಗಳಲ್ಲಿ ಹೊಸ ಬದಲಾವಣೆ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?