https://youtube.com/shorts/7-1-Ue0Sh8o?si=IPl4cpVzjeJG3YdO
newsics.com
ತಿರುವನಂತಪುರ : ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ರಾತ್ರೋರಾತ್ರಿ ಫೇಮಸ್ ಆದವರಲ್ಲಿ ಮೊನಾಲಿಸಾ ಭೋಸ್ಲೆ ಕೂಡ ಒಬ್ಬರು. ಕಳೆದ ವರ್ಷ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷ ಮತ್ತು ಮುತ್ತಿನ ಮಾಲೆಗಳನ್ನು ಮಾರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದು ತನ್ನ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದು, ರಾತ್ರೋರಾತ್ರಿ ಫೇಮಸ್ ಆದಳು. ಎಷ್ಟರಮಟ್ಟಿಗೆ ಅಂದರೆ, ಬಾಲಿವುಡ್ನಿಂದ ಸಿನಿಮಾ ಅವಕಾಶ ಪಡೆಯುವಷ್ಟು. ಇದೇ ಮೊನಾಲಿಸಾ ಇದೀಗ ತನ್ನ ವೈಯಕ್ತಿಕ ಜೀವನ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದಾಳೆ.
ಮೊನಾಲಿಸಾನ್ನು ನಾಯಕಿಯಾಗಿ ಮಾಡಿದ ಡೈರ ಆಫ್ ಮಣಿಪುರ್್ ನಿರ್ದೇಶಕನ ವಿರುದ್ಧವೇ ಕಿರುಕುಳ ಆರೋಪ ಮಾಡಿದ್ದರು. ಇದೀಗ ನಿರ್ದೇಶಕ ಸನೋಜ್ ಮಿಶ್ರಾ ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ನಾಯಕಿಯಾದ ಸಿನಿಮಾ ಅರ್ಧಕ್ಕೆ ಕೈಬಿಟ್ಟಿದ್ದಾರೆ.
ಮುಸ್ಲಿಮ್ ಯುವಕನ ಜೊತೆ ಓಡಿ ಹೋಗಿ ಕೇರಳದಲ್ಲಿ ಮದುವೆಯಾದ ಮೊನಾಲಿಸಾ ಬಳಿಕ ಡೈರಿ ಆಫ ಮಣಿಪುರ ಸಿನಿಮಾ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಳು. ಶೂಟಿಂಗ್ ಸೆಟ್ನಲ್ಲಿ ತನಗೆ ಕಿರುಕುಳ ನೀಡಲಾಗಿದೆ. ತನ್ನ ಪೋಷಕರು ಸಹಕರಿಸು ಎಂದಿದ್ಧರು ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ನಿರ್ದೇಶಕ ಸನೋಜ್ ಮಿಶ್ರಾ, ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಮೊನಾಲಿಸಾ ನನ್ನ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಕಾರಣ ನಾನು ಆಕೆಯ ಇಚ್ಚೆಗೆ ವಿರುದ್ಧವಾಗಿದ್ದೆ. ಆಕೆಯ ಪೋಷಕರು, ಮೊನಾಲಿಸಾ ಸೇರಿದಂತೆ ಆಪ್ತ ಕುಟುಂಬರುು ಶೂಟಿಂಗ್ ಸೆಟ್ನಲ್ಲಿದ್ದರು. ಅವೆರಲ್ಲರು ನಮ್ಮ ಮನೆಯಲ್ಲೇ ತಂಗಿದ್ದರು. ನಾನು ಯಾವುದೇ ರೀತಿಯಲ್ಲಿ ಕಿರುಕುಳ ನೀಡಿದ್ದರೆ, ಅವರ ಕುಟುಂಬಸ್ಥರು, ಪೋಷಕರು ಅಥವಾ ಪೊಲೀಸರಿಗೆ ಹೇಳಬಹುದಿತ್ತು. ಹಾಗೆ ಮಾಡಿಲ್ಲ. ಇದೀಗ ಮದುವೆಯಾಗಿ ಆರೋಪ ಮಾಡುತ್ತಿದ್ದಾರೆ. ಆಕೆಯ ಈ ಮದುವೆಯನ್ನು ಮೊನಾಲಿಸಾ ಪೋಷಕರಂತೆ ನಾನು ವಿರೋಧಿಸಿದ್ದೆ. ಇದೇ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ಸಿನಿಮಾ ಕರಿಯರ್ ಬಗ್ಗೆ ಫೋಕಸ ಮಾಡಲು ಸೂಚಿಸಿದ್ದೆ. ಆದರೆ ಪ್ರೀತಿ ಪ್ರೇಮ ಎಂದು ಗೌರವಯುತವಾಗಿ ನಡೆದುಕೊಳ್ಳಲಿಲ್ಲ ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ.
ಡೈರಿ ಆಫ್ ಮಣಿಪುರ ಸಿನಿಮಾ ಸನೋಜ್ ಮಿಶ್ರಾ ಅವರ ಬಹುನಿರೀಕ್ಷಿತ ಸಿನಿಮಾ. ಮೊನಾಲಿಸಾ ಜನಪ್ರಿಯತೆ ಬೆನ್ನಲ್ಲೇ ನಾಯಕಿಯಾಗಿ ಆಯ್ಕೆ ಮಾಡಿ ಆಕೆಗೆ ನಟನೆ, ಡೈಲಾಗ್ ಸೇರಿದಂತೆ ಸಿನಿಮಾದ ಪ್ರತಿ ಸೀನ್ ತರಬೇತಿ ನೀಡಲಾಗಿತ್ತು. ಇದೀಗ ಮೊನಾಲಿಸಾ ಗಂಭೀರ ಆರೋಪ ಮಾಡಿ ದೂರವಾಗಿರುವ ಕಾರಣ ಡೈರಿ ಆಫ್ ಮಣಿಪುರ ಸಿನಿಮಾ ಪ್ರಾಜೆಕ್ಟ್ ಕೈಬಿಡುವುದಾಗಿ ಹೇಳಿದ್ದಾರೆ. ಈ ಮೂಲಕ ಮೊನಾಲಿಸಾ ಸಿನಿಮಾ ಕರಿಯರ್ ಬಹುತೇಕ ಅಂತ್ಯವಾಗಿದೆ.