Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಸರ್ಕಾರಿ ನೌಕರರ ಪಿಂಚಣಿ ನಿಯಮಗಳಲ್ಲಿ ಹೊಸ ಬದಲಾವಣೆ
ರಿಲೇಷನ್‌ಶಿಪ್

ಸರ್ಕಾರಿ ನೌಕರರ ಪಿಂಚಣಿ ನಿಯಮಗಳಲ್ಲಿ ಹೊಸ ಬದಲಾವಣೆ

Share
3 Min Read
SHARE

newsics.com

ಪಿಂಚಣಿ ಸಂಬಂಧಿತ ನಿಯಮಗಳಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಪಿಂಚಣಿ ನಿಯಮಗಳಲ್ಲಿ ಆಗುತ್ತಿರುವ ಈ ಹೊಸ ಬದಲಾವಣೆಗಳ ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ಹಾಗೂ ಈ ಕುರಿತು ಸಮಗ್ರ ಪರಿಹಾರವನ್ನು ನೀಡಬೇಕಾಗಿರುವುದರಿಂದ ಸಮಿತಿಯು ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲು ಹೆಚ್ಚಿನ ಸಮಯಾವಕಾಶದ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಎನ್ ಪಿಎಸ್ ಯೋಜನೆಯಡಿ ನಿವೃತ್ತಿಯಾದ ಸರಕಾರಿ ನೌಕರರಿಗೆ ಕನಿಷ್ಠ ಪಿಂಚಣಿಯೂ ಸಿಗದೆ ತೊಂದರೆಯಾಗುತ್ತಿರುವ ಬಗ್ಗೆ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿ ಬಗ್ಗೆ ವಿವರ ಕೇಳಿದ್ದರು.
ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಎನ್ ಪಿಎಸ್ ಯೋಜನೆಯಡಿ ನಿವೃತ್ತಿ ಹೊಂದಿದ ನೌಕರರ ಫ್ರಾನ್ ಖಾತೆಯಲ್ಲಿರುವ ಶೇ. 60 ಲಂಪ್‌ಸಮ್‌ ಮೊತ್ರವನ್ನು ನೌಕರರು ಹಿಂಪಡೆಯ ಬಹುದಾಗಿದೆ. ಉಳಿದ ಶೇ. 40 ಮೊತ್ತವನ್ನು Annuity Senice Provider ಹೂಡಿಕೆ ಮಾಡಿ, ಮಾಸಿಕ ಪಿಂಚಣಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ. ಎನ್ ಪಿಎಸ್ ಯೋಜನೆಯಡಿ ನಿವೃತ್ತಿಯಾಗುವ ಸರ್ಕಾರ ನೌಕರರ ಪಿಂಚಣಿಯು ನೌಕರರು ಸಲ್ಲಿಸುವ ಸೇವಾ ಅವಧಿ ಮತ್ತು ಸದರಿ ಅವಧಿಯಲ್ಲಿ ನೌಕರರ ಮೂಲವೇತನದ ಆಧಾರದ ಮೇಲೆ ಪಾವತಿಸಲ್ಪಡುವ ವಂತಿಗೆಯ ಮೇರೆಗೆ ನಿರ್ಧರಿಸಲ್ಪಡುತ್ತದೆ ಎಂದರು.
ಸಮಿತಿಯ ಸಭೆಯಲ್ಲಿ ಚರ್ಚೆ
ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ / ಮಾರ್ಪಾಡು ಮಾಡಲು ಸಮಗ್ರವಾಗಿ ಪರಿಶೀಲಿಸಲು ಈಗಾಗಲೇ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಸಮಿತಿಯು ಹಲವು ಬಾರಿ ಸಭೆಗಳನ್ನು ನಡೆಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಬದಲಾವಣೆ/ ಮಾರ್ಪಾಡು ಮಾಡಿರುವ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ಅಧಿಕಾರಿಗಳನ್ನೊಳಗೊಂಡ ತಂಡಗಳು ಅಧ್ಯಯನ ನಡೆಸಿ ವರದಿಗಳನ್ನು ಸಮಿತಿಗೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎನ್‌ಪಿಎಸ್‌ ಯೋಜನೆಗೆ ಸೂಕ್ತ ಮಾರ್ಪಾಡುಗಳನ್ನು ಮಾಡುವ ಸಾಧ್ಯತೆಗಳ ಕುರಿತು ಮತ್ತು ಎನ್‌ಪಿಎಸ್‌ ಯೋಜನೆಯ ಬದಲಾಗಿ ರಾಜ್ಯದಲ್ಲಿ ಏಕೀಕೃತ ಪಿಂಚಣಿ ಯೋಜನೆಯ Unified Pension Scheme (UPS) ಸಾಧ್ಯತೆಗಳು ಮತ್ತು ಇತರೆ ವಿಷಯಗಳ ಕುರಿತು ಸಲಹೆಗಳನ್ನು ನೀಡುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ ಇವರುಗಳೊಂದಿಗೆ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಸಮಿತಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದರು.
ರಾಜಸ್ಥಾನ ಹಿಮಾಚಲ ಪುದೇಶ ಒಳಗೊಂಡಂತೆ ಹಲವು ರಾಜ್ಯಗಳು ಒಪಿಎಸ್ ಯೋಜನೆಯನ್ನು ಮರು ಜಾರಿ ಮಾಡಲಾಗಿದ್ದರೂ ಸಹ PFRDAರವರು ಒಪಿಎಸ್ ಮರು ಜಾರಿ ಮಾಡಿರುವ ಸದರಿ ರಾಜ್ಯಗಳು ಈಗಾಗಲೇ ಪಾವತಿಸಿರುವ ಎನ್ ಪಿಎಸ್ ವಂತಿಗೆ ಮೊತ್ತಗಳನ್ನು ಸಂಬಂಧಿಸಿದ ರಾಜ್ಯ ಸರಕಾರಗಳಿಗೆ ಹಿಂದಿರುಗಿಸಿರುವುದಿಲ್ಲ. ಕೇಂದ್ರ ಸರ್ಕಾರವು ಮಾಸಿಕ ಪಿಂಚಣಿ ಆಧಾರಿತ ಯುಪಿಎಸ್‌ ಯೋಜನೆಯನ್ನು ಅಳವಡಿಸಿಕೊಳ್ಳಲು ಎಲ್ಲ ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಿದ್ದರೂ, ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ರಾಜ್ಯಗಳು ಎನ್‌ ಪಿಎಸ್‌ ಯೋಜನೆಯನ್ನೇ ಮುಂದುವರಿಸಿವೆ. ಆಂಧ್ರ ಪ್ರದೇಶವು ಓಪಿಎಸ್‌ ಯೋಜನೆಯನ್ನು ಅಳವಡಿಸಿಕೊಳ್ಳದೆ ಕನಿಷ್ಠ ಪಿಂಚಣಿ ಪಾವತಿಯನ್ನು ಖಾತ್ರಿಪಡಿಸುವ Guaranteed Pension Scheme ಯೋಜನೆಯನ್ನು ಜಾರಿಗೊಳಿಸಿದೆ. ಇತ್ತೀಚೆಗೆ ತಮಿಳುನಾಡು ಸರಕಾರ ಕೂಡ OPS ಯೋಜನೆಯನ್ನು ಅಳವಡಿಸಿಕೊಳ್ಳದೇ Tamil Nadu Assured Pension Scheme (TAPS) ಯೋಜನೆಯನ್ನು ಜಾರಿಗೊಳಿಸಿದೆ ಎಂದರು.
ಕೇಂದ್ರ ಸರ್ಕಾರವು ಮಾರ್ಪಡಿಸಿದ ಪಿಂಚಣಿ ಯೋಜನೆಯಾದ Unified Pension Scheme (UPS) ನ್ನು ಜಾರಿಹಗೊಳಿಸಿರುತ್ತಾರೆ. UPS ಅನ್ನು ಜಾರಿಗೊಳಿಸಿದ ನಂತರವೂ ಸಹ ಎನ್ ಪಿಎಸ್ ಯೋಜನೆಗೆ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಆದಾಗ್ಯೂ NPS ಯೋಜನೆಯ ಅಧಿಕಾರಿಗಳು/ನೌಕರರುಗಳು NPS ಯೋಜನೆಯಲ್ಲೇ ಮುಂದುವರೆಯಲು ಅಥವಾ UPS ಯೋಜನೆಗೆ ಬದಲಾಯಿಸಿಕೊಳ್ಳಲು ಆಯ್ಕೆ ನೀಡಲಾಗಿದೆ. ಆದ್ದರಿಂದ ಪಿಂಚಣಿ ಸಂಬಂಧಿತ ನಿಯಮಗಳಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ ಎಂದರು.
ಸರ್ಕಾರಿ ನೌಕರರ ಕರ್ತವ್ಯದ ವೇಳೆಯಲ್ಲಿ ಸಾರ್ವಜನಿಕರಿಂದ ನಡೆಯುವ ಹಲ್ಲೆ ದೌರ್ಜನ್ಮ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕಿರುಕುಳ ಹಾಗೂ ಸರ್ಕಾರಿ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕುರಿತು ಕಾಯ್ದೆ ರೂಪಿಸುವ ಪ್ರಸ್ತಾವನೆಯು ಸರ್ಕಾರದ ವರಿಶೀಲನೆಯಲ್ಲಿರುವುದಾಗಿ ಮುಖ್ಯಮಂತ್ತಿಗಳು ತಿಳಿಸಿದ್ದಾರೆ.

ಅಧಿಕಾರ ಹಿಡಿಯುತ್ತಿದ್ದಂತೆ ಬಾಲೆನ್ ಶಾ ನಡೆ ಬದಲಾಯ್ತಾ?

TAGGED:New change in pension rules for state government employees: New move from the government
Share This Article
Facebook Twitter Copy Link Print
Previous Article ಅಧಿಕಾರ ಹಿಡಿಯುತ್ತಿದ್ದಂತೆ ಬಾಲೆನ್ ಶಾ ನಡೆ ಬದಲಾಯ್ತಾ?
Next Article ಇರಾನ್ ಜೊತೆ ಹೋರಾಡಿ ಇಸ್ರೇಲ್ ಸೈನ್ಯ ವೀಕ್ ಆಯ್ತಾ? ; ಸಮೀಕ್ಷೆ ಹೇಳಿದ್ದೇನು?

Popular Posts

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?