Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪುತ್ರಿ : ಮೂರು ವರ್ಷಗಳ ಬಳಿಕ ಬಯಲಾದ ರಹಸ್ಯ
ಕರ್ನಾಟಕಪ್ರಮುಖ

ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪುತ್ರಿ : ಮೂರು ವರ್ಷಗಳ ಬಳಿಕ ಬಯಲಾದ ರಹಸ್ಯ

Share
2 Min Read
SHARE

https://youtube.com/shorts/7-1-Ue0Sh8o?si=IPl4cpVzjeJG3YdO

newsics.com

ಪ್ರೀತಿಗೆ ಅಡ್ಡಿಯಾಗಿದ್ದ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ, ಸ್ವತಃ ಮಗಳೇ ಮಿಲ್ಕ್‌ಶೇಕ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಳೆ.ಪ್ರಕರಣ ನಡೆದ ಮೂರು ವರ್ಷಗಳ ನಂತರ ಪೊಲೀಸರು ಆರೋಪಿ ಪುತ್ರಿ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ.

2023ರ ಏಪ್ರಿಲ್ 25ರಂದು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಜಯಂತ್ ಬಲ್ಲಾವರ್ (45) ಎಂದಿನಂತೆ ಕೆಲಸಕ್ಕೆ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ಅವರ ಪುತ್ರಿ ಆರ್ಯ ತಂದೆಗೆ ಮಿಲ್ಕ್‌ಶೇಕ್ ನೀಡಿದ್ದಳು. ಅದನ್ನು ಕುಡಿದು ಜಯಂತ್ ಅವರು ಚಂದ್ರಾಪುರದ ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಭವನಕ್ಕೆ ತಲುಪುವಷ್ಟರಲ್ಲಿ ತೀವ್ರ ತಲೆಸುತ್ತು ಬಂದು ಕುಸಿದು ಬಿದ್ದರು. ತಕ್ಷಣವೇ ಅವರು ಮೃತಪಟ್ಟಿದ್ದರು.

ಆ ಸಮಯದಲ್ಲಿ ಇದನ್ನು ‘ಹಠಾತ್ ಅನಾರೋಗ್ಯ’ದಿಂದ ಸಂಭವಿಸಿದ ಸಾವು ಎಂದು ದಾಖಲಿಸಲಾಗಿತ್ತು. ಯಾವುದೇ ಕ್ರಿಮಿನಲ್ ಸಂಚಿನ ಶಂಕೆ ಇಲ್ಲದ ಕಾರಣ ಪ್ರಕರಣದ ಫೈಲ್ ಕ್ಲೋಸ್ ಮಾಡಲಾಗಿತ್ತು.

ಈಗ ಪೊಲೀಸರು ಈ ಸಾವನ್ನು ವ್ಯವಸ್ಥಿತವಾಗಿ ಯೋಜಿಸಿ ಮಾಡಿದ ಕೊಲೆ ಎಂದು ವಿವರಿಸಿದ್ದಾರೆ.

ವಿಷವನ್ನು ತರಿಸಲು ಆರ್ಯ ತನ್ನ ಸೋದರಸಂಬಂಧಿ ಚೈತನ್ಯ ಗೆಡಾಮ್ (22) ಎಂಬಾತನಿಗೆ 5,000 ರೂಪಾಯಿ ನೀಡಿದ್ದಳು. ಈ ವಿಷವನ್ನು ಮತ್ತೋರ್ವ ವ್ಯಕ್ತಿ ಸರಬರಾಜು ಮಾಡಿದ್ದ. ಅಂದು ಬೆಳಿಗ್ಗೆ ಆರ್ಯ ಮಿಲ್ಕ್‌ಶೇಕ್‌ನಲ್ಲಿ ವಿಷ ಬೆರೆಸಿ ತಂದೆಗೆ ಕುಡಿಸಿದ್ದಳು. ಸಾವಿನ ನಂತರ ಶವಪರೀಕ್ಷೆ ನಡೆಸದ ಕಾರಣ ಇದುವರೆಗೂ ಯಾರಿಗೂ ಅನುಮಾನ ಬಂದಿರಲಿಲ್ಲ.

ಜಯಂತ್ ಮೃತಪಟ್ಟ ನಂತರ ಆರ್ಯ ಮತ್ತು ಆಶಿಶ್ ವಿವಾಹವಾಗಿದ್ದರು. ಆದರೆ ಇವರ ಸಂಸಾರದಲ್ಲಿ ಬೇಗನೆ ಬಿರುಕು ಮೂಡಿತು. ಅಶಿಸ್ತು ಮತ್ತು ಕೆಟ್ಟ ನಡವಳಿಕೆಯಿಂದಾಗಿ ಆಶಿಶ್‌ನನ್ನು ಪೊಲೀಸ್ ತರಬೇತಿಯಿಂದ ವಜಾಗೊಳಿಸಲಾಯಿತು. ಇದರಿಂದ ಬೇಸತ್ತ ಆರ್ಯ ಪತಿಯ ಮನೆಗೆ ಹೋಗದೆ ತವರು ಮನೆಯಲ್ಲೇ ಉಳಿದುಕೊಂಡಳು. ಈ ವಿಚಾರವಾಗಿ ದಂಪತಿಗಳ ನಡುವೆ ಸತತ ಜಗಳ ನಡೆಯುತ್ತಿತ್ತು. ಕಳೆದ ವಾರ, ಆಕ್ರೋಶಗೊಂಡ ಆಶಿಶ್ ನೇರವಾಗಿ ಪೊಲೀಸ್ ಠಾಣೆಗೆ ನಡೆದು ಬಂದು ಸತ್ಯ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿಯೇ ಮೂರು ವರ್ಷಗಳ ಹಿಂದೆ ತಂದೆಗೆ ವಿಷ ನೀಡಿ ಕೊಂದಿದ್ದಾಳೆ ಮತ್ತು ಸೋದರಸಂಬಂಧಿಯ ಮೂಲಕ ವಿಷ ತರಿಸಿದ್ದಳು ಎಂಬ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

ಆಶಿಶ್ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಈಗ ಆರ್ಯ ಬಲ್ಲಾವರ್, ಆಕೆಯ ಪತಿ ಆಶಿಶ್ ಶೇಡ್ಮೇಕೆ, ಸೋದರಸಂಬಂಧಿ ಚೈತನ್ಯ ಗೆಡಾಮ್ ಮತ್ತು ವಿಷ ಸರಬರಾಜು ಮಾಡಿದ ನಾಲ್ಕನೇ ಆರೋಪಿಯನ್ನು ಬಂಧಿಸಿದ್ದಾರೆ.

https://www.newsics.com/2026/03/28/nepals-former-prime-minister-k-p-oli-arrested-soon-after-taking-oath/

TAGGED:Daughter kills father by giving him poisoned milkshake: Mystery revealed three years later
Share This Article
Facebook Twitter Copy Link Print
Previous Article ಪದಗ್ರಹಣ ಬೆನ್ನಲ್ಲೇ ನೇಪಾಳ ಮಾಜಿ ಪ್ರಧಾನಿ ಕೆ.ಪಿ. ಓಲಿ ಅರೆಸ್ಟ್
Next Article ಆಕಸ್ಮಿಕವಾಗಿ ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ಸಾವು

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?