https://youtube.com/shorts/mi9ZHeAq9YU?si=AFQw5PdOpVrb1FjB
newsics.com
ಇಸ್ರೇಲ್-ಇರಾನ್ ಯುದ್ಧದ ಭೀತಿಯ ನಡುವೆ, ಟೆಲ್ ಅವಿವ್‌ನ ಆಗಸದಲ್ಲಿ ಸಾವಿರಾರು ಕಾಗೆಗಳು ವಿಚಿತ್ರವಾಗಿ ಹಾರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಇದು ಒಂದು ರೀತಿಯಲ್ಲಿ ಆತಂಕಕಾರಿ ವಾತಾವರಣ ನಿರ್ಮಿಸಿದ್ದು, ಯಾವುದರ ಮುನ್ಸೂಚನೆ ಎಂದು ತಿಳಿಯದ ಸ್ಥಿತಿ ನಿರ್ಮಾಣವಾಗಿದೆ.
ಟೆಲ್ ಅವಿವ್‌ನ ಮೇಲೆ ನೂರಾರು ಕಾಗೆಗಳು ಆಕಾಶದಲ್ಲಿ ಸುತ್ತುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮವನ್ನು ಆಕ್ರಮಿಸಿಕೊಂಡಿದ್ದು, ಅನೇಕ ವೀಕ್ಷಕರನ್ನು ಆತಂಕಕ್ಕೀಡು ಮಾಡಿದೆ. X ಮತ್ತು ಇತರ ವೇದಿಕೆಗಳಲ್ಲಿ ತ್ವರಿತವಾಗಿ ಇದು ಶೇರ್ ಆಗುತ್ತಿದೆ.
ಇದು ಇಸ್ರೇಲ್ ಪ್ರಧಾನಿ ನೆತನ್ಯಾಹುವಿನಿಗೆ ಅಪಶಕುನದ ಸಂಕೇತವೇ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಈ ಕಾಗೆಯು ಧರ್ಮ ಮತ್ತು ಜ್ಯೋತಿಷದ ಕಡೆಗೆ ತಿರುಗಿದೆ. ಕಾಗೆಗಳಂತಹ ಪಕ್ಷಿಗಳ ಹಿಂಡುಗಳನ್ನು ಕೆಟ್ಟ ಶಕುನಗಳು ಮತ್ತು ವಿನಾಶದ ಮುನ್ನುಡಿ ಎಂದು ಕರೆಯಲಾಗುತ್ತದೆ.
ಕೆಲ ವರ್ಷಗಳ ಹಿಂದೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಾರಿನ ಮೇಲೆ ಕಾಗೆ ಕುಳಿತ ಸಂದರ್ಭದಲ್ಲಿ ಪರಿಹಾರ ಮಾಡಿಕೊಂಡಿದ್ದರಲ್ಲ, ಅದೇ ರೀತಿ ಇದನ್ನು ಅಪಶಕುನ ಎಂದು ಕರೆಯಲಾಗುತ್ತದೆ. (ಮೂಢ ನಂಬಿಕೆಗಳನ್ನು ನಂಬುವುದಿಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ಬಳಸುವ ಸರ್ಕಾರಿ ಕಾರು ಈಗಾಗಲೇ ಎರಡು ಲಕ್ಷ ಕಿ.ಮೀ.ಗೂ ಹೆಚ್ಚು ಸಂಚರಿಸಿದೆ. ಜೊತೆಗೆ ಸ್ವಲ್ಪ ಮಟ್ಟಿನಲ್ಲಿ ತಾಂತ್ರಿಕ ಸಮಸ್ಯೆ ಇದ್ದುದರಿಂದ ಕಾರು ಬದಲಾವಣೆ ಮಾಡಬೇಕಾಯಿತು ಎಂದು ತಿಳಿಸಿದ್ದರು ಎನ್ನಿ) ಕೆಲವರು ಬೈಬಲ್‌ನ ಉಲ್ಲೇಖಗಳನ್ನು ಕಮೆಂಟ್ನಲ್ಲಿ ಹೇಳುತ್ತಿದ್ದಾರೆ. ಅಲ್ಲಿ ನಾಶವಾದ ನಂತರ ಈ ರೀತಿ ಪಕ್ಷಿಗಳು ಕಾಣಿಸಿಕೊಳ್ಳುತ್ತವೆ, ಈ ವೀಡಿಯೊ ಇಸ್ರೇಲ್-ಇರಾನ್ ಯುದ್ಧದಲ್ಲಿ ಬರಲಿರುವ ಕೆಟ್ಟದ್ದರ ಎಚ್ಚರಿಕೆಯ ಸಂಕೇತವಾಗಿರಬಹುದು ಎನ್ನಲಾಗುತ್ತಿದೆ.
ತಜ್ಞರು ಹೇಳುವಂತೆ ಇದಕ್ಕೆ ಸರಳವಾದ ವಿವರಣೆಯಿದೆ. ಕಾಗೆಗಳ ದೊಡ್ಡ ಗುಂಪುಗಳು ಒಟ್ಟಿಗೆ ಸೇರುತ್ತವೆ, ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಈ ಪಕ್ಷಿಗಳು ಹೆಚ್ಚಾಗಿ ಬೆಚ್ಚಗಿರಲು, ಆಹಾರವನ್ನು ಹುಡುಕಲು ಅಥವಾ ಬೆದರಿಕೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಸೇರುತ್ತವೆ.