newsics.com
ರಾಯಚೂರು: ತರಬೇತಿಗೆ ಆಗಮಿಸಿದ ಶಿಕ್ಷಕಿ ಜೊತೆಗೆ ಅನುಚಿತವಾಗಿ ವರ್ತಿಸಿದ ರಾಯಚೂರು ಸಮೀಪದ ಯರಮರಸ್ ಸರ್ಕಾರಿ ಆದರ್ಶ ವಿದ್ಯಾಲಯದ ಶಿಕ್ಷಕ ಮೆಹಬೂಬ್ ಅಲಿ ಅವರನ್ನು ಅಮಾನತು ಮಾಡಲಾಗಿದೆ.
ಆರೋಪಿ ಶಿಕ್ಷಕ ಮೆಹಬೂಬ್ ಅಲಿ ಶಿಕ್ಷಕಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ. ಇದರಿಂದ ಶಿಕ್ಷಕಿಯ ಸಂಬಂಧಿಕರು ಸೋಮವಾರ ಶಾಲೆಗೆ ತೆರಳಿ ಶಿಕ್ಷಕನಿಗೆ ಬಟ್ಟೆ ಹರಿದು ಹೋಗುವಂತೆ ಥಳಿಸಿ, ಕಾಲಿಗೆ ಬೀಳಿಸಿ ಕ್ಷಮೆ ಕೇಳುವಂತೆ ಮಾಡಿದ್ದಾರೆ.
ಪರಿಶೀಲನೆ ನಡೆಸಿದ ಬಿಇಒ ಶಿಕ್ಷಕನ ತಪ್ಪೊಪ್ಪಿಗೆ ಪತ್ರ ಉಲ್ಲೇಖಿಸಿ ಅಮಾನತಿಗೆ ಶಿಫಾರಸು ಮಾಡಿದರು.