newsics.com
ಅಂಕೋಲಾ(ಉತ್ತರ ಕನ್ನಡ): ಕಾಡು ಹಂದಿ ದಾಳಿ ನಡೆಸಿ ಯುವಕನೋರ್ವನ ಕಾಲಿನ ಬೆರಳನ್ನೇ ಕಚ್ಚಿ ತುಂಡರಿಸಿದ ಘಟನೆ ತಾಲೂಕಿನ ಮಾಸ್ತಿಕಟ್ಟಾ ವಲಯ ಅರಣ್ಯ ವ್ಯಾಪ್ತಿಯ ವಾಸರ ಕುದ್ರಗಿ ಉಳಗದ್ದೆಯಲ್ಲಿ ಸಂಭವಿಸಿದೆ.
ಉಳಗದ್ದೆ ನಿವಾಸಿ ಅರುಣ ಕನ್ನೆ ಗೌಡ(35)ಹಂದಿ ದಾಳಿಯಿಂದ ಗಾಯಗೊಂಡ ವ್ಯಕ್ತಿಯಾಗಿದ್ದು ಈತ ಉಳಗದ್ದೆಯ ತನ್ನ ಮನೆಯಿಂದ ಕಾಡು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ
ಮರಿಗಳೊಂದಿಗೆ ಹೋಗುತ್ತಿದ್ದ ತಾಯಿ ಕಾಡು ಹಂದಿ ಓಡಿಸಿಕೊಂಡು ಬಂದಿದ್ದು ಹಂದಿ ದಾಳಿಯಿಂದ ತಪ್ಪಿಸಿಕೊಳ್ಳಲು ಮರ ಏರುತ್ತಿರುವ ಸಂದರ್ಭದಲ್ಲಿ ಕಾಲಿನ ಹೆಬ್ಬೆರಳು ಹಂದಿ ಬಾಯಿಗೆ ಸಿಕ್ಕಿದ್ದು ಹಂದಿ ಕಡಿತದಿಂದ ಹೆಬ್ಬೆರಳು ತುಂಡಾಗಿ ಹೋಗಿದೆ.
ಗಾಯಾಳುವನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಕಾಲು ಬೆರಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಹಂದಿ ದಾಳಿಗೆ ಸಂಬಂಧಿಸಿದಂತೆ
ಗಾಯಗೊಂಡ ವ್ಯಕ್ತಿಗೆ ಅರಣ್ಯ ಇಲಾಖೆಯಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು 4 ತಿಂಗಳು ರೇ*ಪ್!