Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇರಾನ್‌ ವಿರುದ್ದ ಯುದ್ದಕ್ಕೆ 5 ದಿನ ಕದನ ವಿರಾಮ ಘೋಷಿಸಿದ ಟ್ರಂಪ್‌
ಪ್ರಮುಖವಿದೇಶ

ಇರಾನ್‌ ವಿರುದ್ದ ಯುದ್ದಕ್ಕೆ 5 ದಿನ ಕದನ ವಿರಾಮ ಘೋಷಿಸಿದ ಟ್ರಂಪ್‌

Share
1 Min Read
SHARE

newsics.com

ಇರಾನ್ ಜೊತೆಗಿನ ಯುದ್ಧದ ಕಾರ್ಮೋಡ ಸರಿಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಪರಿಣಾಮವನ್ನು ಗಲ್ಫ್ ರಾಷ್ಟ್ರಗಳೂ ಅನುಭವಿಸಿದ್ದವು. ಇದರ ಪರೋಕ್ಷ ಪರಿಣಾಮವನ್ನು ಭಾರತ ಸೇರಿದಂತೆ ಇತರೆ ದೇಶಗಳೂ ಅನುಭವಿಸಿದ್ದವು.

ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಮಿಲಿಟರಿ ದಾಳಿಗಳನ್ನು ನಡೆಸಲು ಮುಂದಾಗಿದ್ದ ಅಮೆರಿಕಾ, ಮುಂದಿನ ಐದು ದಿನಗಳವರೆಗೆ ಸ್ಥಗಿತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಕ್ಷಣಾ ಇಲಾಖೆಗೆ (Pentagon) ಮಹತ್ವದ ಆದೇಶ ನೀಡಿದ್ದಾರೆ.
ಜಗತ್ತಿನಾದ್ಯಂತ ತೈಲ, ಇಂಧನದ ಬಿಕ್ಕಟ್ಟು ಎದುರಾಗಿದೆ. ಯುದ್ಧ ಶುರುವಾಗಿ 24 ದಿನಗಳ ನಂತರ ಇದೀಗ ಈ ಯುದ್ಧಕ್ಕೆ ತೆರೆ ಬೀಳುವ ಲಕ್ಷಣಗಳೂ ಗೋಚರಿಸುತ್ತಿವೆ.

ಟ್ರಂಪ್ ಅವರ ಈ ನಿರ್ಧಾರವು ಕೇವಲ ತಾತ್ಕಾಲಿಕ ಶಾಂತಿಯ ಸಂಕೇತವಲ್ಲ, ಬದಲಿಗೆ ಇದರಲ್ಲಿ ಒಂದು ಗಂಭೀರ ಎಚ್ಚರಿಕೆಯೂ ಅಡಗಿದೆ. ಈ ಐದು ದಿನಗಳ ವಿರಾಮವು ಕೇವಲ ಮಾತುಕತೆಯ ಪ್ರಗತಿಯ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಟೆಹ್ರಾನ್ ಮಾತುಕತೆಯಲ್ಲಿ ಸಹಕರಿಸದಿದ್ದರೆ ಅಥವಾ ರಚನಾತ್ಮಕವಾಗಿ ಸ್ಪಂದಿಸದಿದ್ದರೆ, ಈ ವಿರಾಮವು ತಕ್ಷಣವೇ ಕೊನೆಗೊಂಡು ದಾಳಿಗಳು ಪುನರಾರಂಭಗೊಳ್ಳಲಿವೆ ಎಂದು ಅಮೆರಿಕದ ಮೂಲಗಳು ಸೂಚಿಸಿವೆ.
ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಜಾಗತಿಕವಾಗಿ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಭಾರಿ ಹೊಡೆತ ಬಿದ್ದಿದೆ. ವಿಶೇಷವಾಗಿ ಭಾರತದಂತಹ ದೇಶಗಳು ಇಂಧನ ಬಿಕ್ಕಟ್ಟಿನ ಭೀತಿಯಲ್ಲಿದ್ದವು. ಈಗ ಟ್ರಂಪ್ ನೀಡಿರುವ ಈ ಐದು ದಿನಗಳ ಕಾಲಾವಕಾಶವು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯನ್ನು ತಡೆಹಿಡಿಯಲು ಮತ್ತು ರಾಜತಾಂತ್ರಿಕ ಹಾದಿಯನ್ನು ಸುಗಮಗೊಳಿಸಲು ನೆರವಾಗುವ ನಿರೀಕ್ಷೆಯಿದೆ.
ಟ್ರಂಪ್ ಅವರು ಉತ್ಪಾದಕ ಸಂಭಾಷಣೆ ಎಂದು ಹೇಳಿದೆ, ಆದರೆ ಇರಾನ್ ಸರ್ಕಾರವು ಯಾವುದೇ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದ ಬಗ್ಗೆ ಇದುವರೆಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಅಶ್ಲೀಲ ಹಾಡಿನ ವಿವಾದ: 800ಕ್ಕೂ ಹೆಚ್ಚು ಲಿಂಕ್ಸ್ ಡಿಲೀಟ್ ಮಾಡಿದ ಪೊಲೀಸರು

TAGGED:Trump declares 5-day ceasefire in Iran war
Share This Article
Facebook Twitter Copy Link Print
Previous Article ಅಶ್ಲೀಲ ಹಾಡಿನ ವಿವಾದ: 800ಕ್ಕೂ ಹೆಚ್ಚು ಲಿಂಕ್ಸ್ ಡಿಲೀಟ್ ಮಾಡಿದ ಪೊಲೀಸರು
Next Article ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು 4 ತಿಂಗಳು ರೇ*ಪ್!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?