newsics.com
ಹೊಸ ಹಣಕಾಸು ವರ್ಷದ ಆರಂಭದೊಂದಿಗೆ (2026-27), ದೇಶದ ತೆರಿಗೆ ವ್ಯವಸ್ಥೆ ಮತ್ತು ಹೂಡಿಕೆ ನಿಯಮಗಳಲ್ಲಿ ಭಾರೀ ಬದಲಾವಣೆಗಳು ಆಗಲಿವೆ.
1961ರ ಹಳೆಯ ಆದಾಯ ತೆರಿಗೆ ಕಾಯ್ದೆಯ ಜಾಗಕ್ಕೆ ಹೊಸ ‘ಆದಾಯ ತೆರಿಗೆ ಕಾಯ್ದೆ 2025’ ಜಾರಿಗೆ ಬರುತ್ತಿರುವುದು ಈ ವರ್ಷದ ಅತಿ ದೊಡ್ಡ ವಿಶೇಷ. ಇದರೊಂದಿಗೆ ಸವರನ್ ಗೋಲ್ಡ್ ಬಾಂಡ್ (SGB) ಮೇಲಿನ ತೆರಿಗೆ ವಿನಾಯಿತಿ, ಶೇರು ಮಾರುಕಟ್ಟೆಯ STT ದರಗಳು ಹಾಗೂ FASTag ಶುಲ್ಕಗಳಲ್ಲಿ ಏರಿಕೆಯಾಗಲಿದ್ದು, ಸಾಮಾನ್ಯ ಜನರ ಜೇಬಿನ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಈ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
1) ಹೊಸ ಆದಾಯ ತೆರಿಗೆ ಕಾಯ್ದೆ 2025 ಸವರನ್ ಗೋಲ್ಡ್ ಬಾಂಡ್ (SGB) ತೆರಿಗೆಯಲ್ಲಿ ಬದಲಾವಣೆ3) ಸೆಕ್ಯೂರಿಟಿಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಹೆಚ್ಚಳ4) ಡಿಜಿಟಲ್ ಪಾವತಿ ಭದ್ರತೆ (RBI ನಿಯಮಗಳು)5) ITR ಸಲ್ಲಿಕೆ ಅವಧಿಯಲ್ಲಿ ಬದಲಾವಣೆ6) ವಿದೇಶಿ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚದ ಮೇಲೆ TCS ಕಡಿತ7) ಫಾರ್ಮ್ 15G ಮತ್ತು 15H ಸಲ್ಲಿಕೆ ಸರಳೀಕರಣ
2026ರ ಏಪ್ರಿಲ್ 1 ರಿಂದ ಆದಾಯ ತೆರಿಗೆ, ಹೂಡಿಕೆ ಮತ್ತು ಅನುಸರಣೆಗಳಲ್ಲಿ (Compliance) ಹಲವು ಬದಲಾವಣೆಗಳು ಜಾರಿಗೆ ಬರಲಿವೆ.
1) ಹೊಸ ಆದಾಯ ತೆರಿಗೆ ಕಾಯ್ದೆ, 2025
ಏಪ್ರಿಲ್ 1, 2026 ರಿಂದ ಹೊಸ ಕಾಯ್ದೆ ಜಾರಿಗೆ ಬರಲಿದ್ದು, ಇದು 1961ರ ಹಳೆಯ ಕಾಯ್ದೆಯನ್ನು ಬದಲಿಸುತ್ತದೆ. ಇನ್ನು ಮುಂದೆ ಸವರನ್ ಗೋಲ್ಡ್ ಬಾಂಡ್ (SGB) ಅನ್ನು ಮಾರುಕಟ್ಟೆಯಲ್ಲಿ (Secondary Market) ಖರೀದಿಸಿದವರಿಗೆ ಮೆಚ್ಯೂರಿಟಿ ಸಮಯದಲ್ಲಿ ತೆರಿಗೆ ವಿನಾಯಿತಿ ಸಿಗುವುದಿಲ್ಲ.
ವಿಭಾಗಗಳ ಮರುಸಂಘಟನೆ ಮತ್ತು ಸರಳೀಕೃತ ಭಾಷೆಯ ಬಳಕೆ.
ಆದಾಯದ ವರ್ಗೀಕರಣ ಮತ್ತು ವ್ಯಾಖ್ಯಾನಗಳಲ್ಲಿ ಬದಲಾವಣೆ.
2) ಸವರನ್ ಗೋಲ್ಡ್ ಬಾಂಡ್ (SGB) ತೆರಿಗೆಯಲ್ಲಿ ಬದಲಾವಣೆ
ಇನ್ನು ಮುಂದೆ ಸವರನ್ ಗೋಲ್ಡ್ ಬಾಂಡ್ (SGB) ಅನ್ನು ಮಾರುಕಟ್ಟೆಯಲ್ಲಿ (Secondary Market) ಖರೀದಿಸಿದವರಿಗೆ ಮೆಚ್ಯೂರಿಟಿ ಸಮಯದಲ್ಲಿ ತೆರಿಗೆ ವಿನಾಯಿತಿ ಸಿಗುವುದಿಲ್ಲ.
ಮೂಲ ಹೂಡಿಕೆದಾರರು: ಪ್ರಾಥಮಿಕವಾಗಿ ಬಾಂಡ್ ಖರೀದಿಸಿದವರಿಗೆ ಮೆಚ್ಯೂರಿಟಿ ಸಮಯದಲ್ಲಿ ತೆರಿಗೆ ವಿನಾಯಿತಿ ಮುಂದುವರಿಯುತ್ತದೆ.
ಸೆಕೆಂಡರಿ ಮಾರ್ಕೆಟ್: ಶೇರು ಮಾರುಕಟ್ಟೆಯಲ್ಲಿ ಇತರರಿಂದ SGB ಖರೀದಿಸಿದವರು ಮೆಚ್ಯೂರಿಟಿ ಸಮಯದಲ್ಲಿ ‘ಕ್ಯಾಪಿಟಲ್ ಗೇನ್ಸ್’ ತೆರಿಗೆ ಪಾವತಿಸಬೇಕಾಗುತ್ತದೆ.
3) ಡಿಜಿಟಲ್ ಪಾವತಿ ಭದ್ರತೆ (RBI ನಿಯಮಗಳು)
UPI, ಡೆಬಿಟ್/ಕ್ರೆಡಿಟ್ ಕಾರ್ಡ್ ಮತ್ತು ಆನ್‌ಲೈನ್ ಬ್ಯಾಂಕಿಂಗ್‌ಗೆ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (2FA) ಕಡ್ಡಾಯ.
ಇದು OTP, PIN ಅಥವಾ ಬಯೋಮೆಟ್ರಿಕ್ ಮೂಲಕ ಇರಬಹುದು.
4) ITR ಸಲ್ಲಿಕೆ ಅವಧಿಯಲ್ಲಿ ಬದಲಾವಣೆ
ITR-3 ಮತ್ತು ITR-4 (ಆಡಿಟ್ ಇಲ್ಲದ ಪ್ರಕರಣಗಳು): ಸಲ್ಲಿಕೆಯ ಕೊನೆಯ ದಿನಾಂಕವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.
ITR-1 ಮತ್ತು ITR-2: ಜುಲೈ 31 ರವರೆಗೆ ಮಾತ್ರ ಅವಕಾಶ.
ಟ್ಯಾಕ್ಸ್ ಆಡಿಟ್: ಅಕ್ಟೋಬರ್ 31 ರವರೆಗೆ ಸಮಯವಿರುತ್ತದೆ.
6) ವಿದೇಶಿ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚದ ಮೇಲೆ TCS ಕಡಿತ
ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (LRS) ಅಡಿಯಲ್ಲಿ ವಿದೇಶಕ್ಕೆ ಕಳುಹಿಸುವ ಹಣದ ಮೇಲಿನ TCS ಕಡಿತಗೊಳಿಸಲಾಗಿದೆ:
ವಿದೇಶಿ ಶಿಕ್ಷಣ: 5% ರಿಂದ 2% ಕ್ಕೆ ಇಳಿಕೆ.
ವಿದೇಶಿ ವೈದ್ಯಕೀಯ ಚಿಕಿತ್ಸೆ: 5% ರಿಂದ 2% ಕ್ಕೆ ಇಳಿಕೆ.
6) ಫಾರ್ಮ್ 15G ಮತ್ತು 15H ಸಲ್ಲಿಕೆ ಸರಳೀಕರಣ
ಇನ್ನು ಮುಂದೆ ಹೂಡಿಕೆದಾರರು ಈ ಫಾರ್ಮ್‌ಗಳನ್ನು ನೇರವಾಗಿ ಡಿಪಾಸಿಟರಿಗಳಿಗೆ (NSDL/CDSL) ಸಲ್ಲಿಸಬಹುದು. ಇದು ಪ್ರತಿ ಬ್ಯಾಂಕ್ ಅಥವಾ ಮ್ಯೂಚುಯಲ್ ಫಂಡ್ ಸಂಸ್ಥೆಗೆ ಪ್ರತ್ಯೇಕವಾಗಿ ಸಲ್ಲಿಸುವ ಕಿರಿಕಿರಿ ತಪ್ಪಿಸುತ್ತದೆ.