https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಶಿವಮೊಗ್ಗ : ಶಿವಮೊಗ್ಗದ ಹೊರವಲಯದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ಪಶುವೈದ್ಯೆ ಮೇಲೆ ನೀರಾನೆ ದಾಳಿ ನಡೆಸಿದೆ. ದಾಳಿಯಿಂದ ಡಾಕ್ಟರ್ ಸಮೀಕ್ಷಾ ರೆಡ್ಡಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಬೆಂಗಳೂರು ಮೂಲದ 27 ವರ್ಷದ ಡಾ. ಸಮೀಕ್ಷಾ ರೆಡ್ಡಿ ಈ ದಾಳಿಗೆ ಸಾವನ್ನಪ್ಪಿದ್ದಾರೆ.ಇನ್ನು, ಈ ದುರ್ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ನೀಡಿದ್ದಾರೆ. ಹಿರಿಯ ಪಶುವೈದ್ಯರು ಮತ್ತು ಅರಣ್ಯಾಧಿಕಾರಿಗಳ ತಂಡದಿಂದ ತನಿಖೆ ನಡೆಸಿ 7 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಡಾ. ಸಮೀಕ್ಷಾ ಸಾವಿಗೆ ಕಾರಣವಾದ ನೀರಾನೆ ಹಂಸಿಣಿ ನ್ಯೂಸ್ 18 ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೀರಾನೆಯ ಬಳಿ ಘಟನೆ ನಡೆದ ರಾತ್ರಿ ಸಮೀಕ್ಷಾ ರೆಡ್ಡಿ ಅವರು ತಂದಿದ್ದ ಟಾರ್ಚ್ ಲೈಟ್ ಕೂಡ ಇನ್ನೂ ಹಾಗೆಯೇ ಅಲ್ಲೇ ಇದೆ. ವೈದ್ಯೆ ಸಮೀಕ್ಷಾ ರೆಡ್ಡಿ ಅವರು, ಮೊದಲು ಟಾರ್ಚ್ ಹಿಡಿದು ನೀರಾನೆಯ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಟಾರ್ಚ್ ಲೈಟ್ಗೆ ಕೆರಳಿದ ನೀರಾನೆ ಹಂಸಿಣಿ, ವೈದ್ಯೆಯ ಮೇಲೆ ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದರೂ ಸಿಸಿಟಿವಿ ದೃಶ್ಯ ಡಿಲೀಟ್ ಆಗಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
https://www.newsics.com/2026/03/21/minister-zameer-ahmed-drops-resignation-bombshell/