newsics.com
ಬೆಂಗಳೂರು: ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಝೊಮ್ಯಾಟೊ ಶಾಕ್ ನೀಡಿದೆ. ತನ್ನ ಲಾಭಾಂಶವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಂಪನಿಯು ಪ್ರತಿ ಆರ್ಡರ್ ಮೇಲೆ ವಿಧಿಸುವ ‘ಪ್ಲಾಟ್‌ಫಾರ್ಮ್ ಫೀ’ ಅನ್ನು ಬರೋಬ್ಬರಿ 14.90 ರೂಪಾಯಿಗೆ ಏರಿಕೆ ಮಾಡಿದೆ.
ಆರಂಭದಲ್ಲಿ ಕೇವಲ 2 ರೂಪಾಯಿಯಿಂದ ಆರಂಭವಾಗಿದ್ದ ಈ ಶುಲ್ಕ, ಕಳೆದ ಕೆಲವು ತಿಂಗಳುಗಳಲ್ಲಿ 5, 7, 10 ರೂಪಾಯಿ ದಾಟಿ ಈಗ 14.90 ರೂಪಾಯಿಗೆ ಬಂದು ನಿಂತಿದೆ. ಸ್ವಿಗ್ಗಿ ಈಗಾಗಲೇ ಕೆಲವು ಆಯ್ದ ನಗರಗಳಲ್ಲಿ 15 ರೂಪಾಯಿಯ ಆಸುಪಾಸಿನಲ್ಲಿ ಶುಲ್ಕ ವಿಧಿಸುತ್ತಿದೆ. ಈಗ ಝೊಮ್ಯಾಟೊ ಕೂಡ ಅದೇ ಹಾದಿ ಹಿಡಿಯುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಸಾಧಿಸಲು ಮುಂದಾಗಿದೆ.
ನೀವು ಝೊಮ್ಯಾಟೊ ಗೋಲ್ಡ್ ಸದಸ್ಯರಾಗಿದ್ದರೂ ಸಹ, ಈ ಪ್ಲಾಟ್‌ಫಾರ್ಮ್ ಫೀ ಪಾವತಿಸುವುದು ಕಡ್ಡಾಯವಾಗಿದೆ. ಅಂದರೆ, ಉಚಿತ ಡೆಲಿವರಿ ಸೌಲಭ್ಯವಿದ್ದರೂ ಈ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.