newsics.com
ವಾಸ್ತು ಶಾಸ್ತ್ರ ಮತ್ತು ವಿಜ್ಞಾನದ ಪ್ರಕಾರ, ಈ ಒಂದು ಸಣ್ಣ ಅಭ್ಯಾಸವು ನಿಮ್ಮ ಮನೆಯ ನೆಮ್ಮದಿಯನ್ನೇ ಕಸಿದುಕೊಳ್ಳಬಲ್ಲದು.
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಧನಾತ್ಮಕ ಶಕ್ತಿಯ ಕೇಂದ್ರ. ಚಪ್ಪಲಿಗಳು ಹೊರಗಿನ ನಕಾರಾತ್ಮಕ ಶಕ್ತಿಯನ್ನು ಹೊತ್ತು ತರುತ್ತವೆ. ಅಶುದ್ಧ ಸ್ಥಿತಿಯಲ್ಲಿ ಅಡುಗೆಮನೆಯನ್ನು ಪ್ರವೇಶಿಸುವುದು ಅನ್ನಪೂರ್ಣ ದೇವಿ ಮತ್ತು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದರ ಪರಿಣಾಮಗಳು ಅನಗತ್ಯ ಖರ್ಚುಗಳು ಹೆಚ್ಚಾಗುವುದು ಮತ್ತು ಬಂದ ಹಣ ಕೈಯಲ್ಲಿ ನಿಲ್ಲದೆ ಇರಬಹುದು. ಇದಲ್ಲದೇ ಸಣ್ಣ ವಿಷಯಗಳಿಗೂ ದಂಪತಿಗಳ ನಡುವೆ ಕಹಿ ಉಂಟಾಗುವುದು ಮತ್ತು ಮನೆಯಲ್ಲಿ ಅಶಾಂತಿ ಮನೆಮಾಡುವುದು. ಉತ್ತಮ ಅವಕಾಶಗಳು ಕೈತಪ್ಪುವುದು ಮತ್ತು ಕುಟುಂಬದ ಸದಸ್ಯರ ಯಶಸ್ಸಿಗೆ ಅಡೆತಡೆಗಳು ಎದುರಾಗಬಹುದು.
ವೈಜ್ಞಾನಿಕ ಸತ್ಯ:
ಇದು ಕೇವಲ ಧಾರ್ಮಿಕ ನಂಬಿಕೆಯಲ್ಲ, ಇದರ ಹಿಂದೆ ಬಲವಾದ ವೈಜ್ಞಾನಿಕ ಕಾರಣವೂ ಇದೆ. ನಾವು ಧರಿಸುವ ಶೂ ಅಥವಾ ಚಪ್ಪಲಿಗಳಲ್ಲಿ ಕೋಟ್ಯಂತರ ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಜೀವಿಗಳಿರುತ್ತವೆ. ಅಡುಗೆಮನೆಯ ಬೆಚ್ಚಗಿನ ವಾತಾವರಣವು ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕವಾಗಿದೆ. ನೆಲದ ಮೇಲೆ ಚೆಲ್ಲುವ ಆಹಾರದ ಮೂಲಕ ಈ ಸೂಕ್ಷ್ಮಜೀವಿಗಳು ಸುಲಭವಾಗಿ ಹರಡುತ್ತವೆ. ಇದರಿಂದಾಗಿ ಟೈಫಾಯಿಡ್, ಅತಿಸಾರ ಮತ್ತು ಗಂಭೀರ ಹೊಟ್ಟೆಯ ಸೋಂಕುಗಳು ಉಂಟಾಗುವ ಅಪಾಯವಿರುತ್ತದೆ. ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು.
ಕುಟುಂಬದ ಆರೋಗ್ಯ, ಆರ್ಥಿಕ ಸಮೃದ್ಧಿ ಮತ್ತು ಮಾನಸಿಕ ಶಾಂತಿಗಾಗಿ ಅಡುಗೆಮನೆಯನ್ನು ಪವಿತ್ರವಾಗಿಡುವುದು ಅತ್ಯಗತ್ಯ. ಇಂದಿನಿಂದಲೇ ಅಡುಗೆಮನೆಯೊಳಗೆ ಪಾದರಕ್ಷೆಗಳನ್ನು ಧರಿಸುವ ಅಭ್ಯಾಸವನ್ನು ಬಿಟ್ಟುಬಿಡಿ.
Gold, Silver ಚಿನ್ನ, ಬೆಳ್ಳಿ ಮತ್ತಷ್ಟು ಅಗ್ಗ, ಆಭರಣಪ್ರಿಯರಿಗೆ ಖುಷಿಯೋ ಖುಷಿ