Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮಗನಿಗೆ ಮದ್ವೆ ಮಾಡಿದ್ರೆ ನೀವು ಫಿನಿಶ್‌: ತಾಯಿಗೆ ಭವಿಷ್ಯ ನುಡಿದ ಆರ್ಯವರ್ಧನ್‌ ಗುರೂಜಿ, This is business ಎಂದ ನೆಟ್ಟಿಗರು!
ಕರ್ನಾಟಕಪ್ರಮುಖ

ಮಗನಿಗೆ ಮದ್ವೆ ಮಾಡಿದ್ರೆ ನೀವು ಫಿನಿಶ್‌: ತಾಯಿಗೆ ಭವಿಷ್ಯ ನುಡಿದ ಆರ್ಯವರ್ಧನ್‌ ಗುರೂಜಿ, This is business ಎಂದ ನೆಟ್ಟಿಗರು!

Share
2 Min Read
SHARE

https://youtube.com/shorts/LDfmKu7KOK0?si=Y4NKvWZkUj7zuhsW

newsics.com

ಬೆಂಗಳೂರು: ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರ ಜ್ಯೋತಿಷಿ ಆರ್ಯವರ್ಧನ್‌ ಗುರೂಜಿ ಅವರ ಹಳೆಯ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್‌ ಆಗಿದೆ. ಬಿಗ್‌ಬಾಸ್‌ನ ಸೀಸನ್‌ 9ರ ಸ್ಪರ್ಧಿಯಾಗಿದ್ದ ಆರ್ಯವರ್ಧನ್‌ ಗುರೂಜಿ, ಬಿಗ್‌ಬಾಸ್‌ ಒಟಿಟಿ ಮೊದಲ ಸೀಸನ್‌ನಲ್ಲೂ ಕಾಣಿಸಿಕೊಂಡಿದ್ದರು.  ಹಲವು ವೇದಿಕೆಗಳಲ್ಲಿ ತಮ್ಮ ಮಾತುಗಳಿಂದಲೇ ವಿವಾದ ಸೃಷ್ಟಿಸಿದ್ದರು. ಇದೀಗ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ಯುವಕನೊಬ್ಬನಿಗೆ ಎರಡು ಮದುವೆ ಹಾಗೂ ಸೊಸೆಯಿಂದ ತಾಯಿಗೆ ಅಪಾಯ ಎಂದು ಭವಿಷ್ಯ ನುಡಿದಿದ್ದಾರೆ.

ಟಿವಿಯಲ್ಲಿ ಕುಳಿತ ಆರ್ಯವರ್ಧನ್‌ ಗುರೂಜಿಗೆ ಕರೆ ಮಾಡುವ ಮಹಿಳೆಯ ಬಳಿಯಿಂದ ಅವರ ಪುತ್ರನ ಜನ್ಮದಿನಾಂಕವನ್ನು ಕೇಳುತ್ತಾರೆ. ಆಕೆ 29, 7 1998 ಮಧ್ಯಾಹ್ನ 1.30ಕ್ಕೆ ಎಂದು ಹೇಳುತ್ತಿದ್ದಂತೆಯೇ, ‘ಮಗ ಏನ್ಮಾಡ್ತಿದ್ದಾನೆ..’ ಎಂದು ಆರ್ಯವರ್ಧನ್‌ ಕೇಳಿದ್ದಾರೆ. ಮಗ ಮನೆ ಕಡೆಯಲ್ಲೇ ಇರೋದು, ಅಲ್ಲಿ ನೋಡಿಕೊಳ್ಳುತ್ತಿದ್ದಾನೆ ಎಂದು ಮಹಿಳೆ ಹೇಳುತ್ತಾರೆ.

ಇದರ ಬೆನ್ನಲ್ಲಿಯೇ ಆರ್ಯವರ್ಧನ್‌ ಗುರೂಜಿ, ‘ನಿನ್ನ ಮಗನಿಗೆ ಡೈವೋರ್ಸ್‌ ಆಗುತ್ತೆ. ಎರಡು ಮದುವೆ ಆಗುತ್ತೆ. ಅವನ ಜಾತಕ ಹಾಳಾಗೋಯ್ತು. 7ನೇ ಮನೆಯಲ್ಲಿ ಶನಿ ಇದ್ದಾನೆ. ಅವನು ನೀಚ ಶನಿ. ಗುರು 6ನೇ ಮನೆಯಲ್ಲಿದ್ದಾನೆ. ಇವನ ಜಾತಕ ಮುಂಡಾಮುಚ್ಕಂಡು ಹೋಯ್ತು. 10ನೇ ಮನೆಯಲ್ಲಿ ಚಂದ್ರ ಇದ್ದಾನೆ. ಹಾಗಂದ್ರೆ ಇನ್ನೂ ಎಕ್ಕುಟ್ಟಿ ಹೋಗಿದೆ ಅಂತಾನೆ ಲೆಕ್ಕ. ಎರಡು ಮದುವೆ ಅನ್ನೋದು ಲೆಕ್ಕಾ ಮಾಡಿಕೊಳ್ಳಿ. ಮೊದಲನೆ ಮದುವೆಯಲ್ಲಿ ಬಂದ ಸೊಸೆ ನಿಮ್ಮ ‘ಬುಂಡೆ’ (ತಲೆ) ಒಡಿಯೋಕೆ ಹೋಗ್ತಾಳೆ’ ಎಂದು ಆರ್ಯವರ್ಧನ್‌ ಹೇಳುತ್ತಿದ್ದಂತೆ, 7ನೇ ಮನೆಯಲ್ಲಿ ಚಂದ್ರ ಇರೋದು ಅಂತಾರಾಲ್ಲ ಎಂದು ಆ ಮಹಿಳೆ ಹೇಳುತ್ತಾರೆ.

ಇದಕ್ಕೆ ಉತ್ತರಿಸಿರುವ ಆರ್ಯವರ್ಧನ್‌ ಗುರೂಜಿ,’ಮಧ್ಯಾಹ್ನ 1.30ಕ್ಕೆ ಹುಟ್ಟಿರೋದಲ್ವ. ಹಾಗಿದ್ರೆ 7ನೇ ಮನೆಯಲ್ಲಿ ಇರೋದು ಶನಿ. ತುಲಾ ಲಗ್ನ. ಬರೋ ಸೊಸೆ ನಿಮ್ಮ ಬುರುಡೆ ಒಡಿಯೋಕೆ ಹೋಗ್ತಾಳೆ. ನಿಮಗೆ ತಿ*ದ ಮೇಲೆಲ್ಲಾ ಒದೀತಾಳೆ. ಸೊಸೆಗೆ ನೀವು ಒದಿತಾ ಇದ್ರಲ್ಲ. ಅದೇ ರೀತಿ ಈಗ ಸೊಸೆ ನಿಮ್ಮನ್ನ ಒದೀತಾಳೆ. ಅತ್ತೆ ಮೇಲೆಲ್ಲಾ ಕೇಸ್‌ ಹಾಕಿ ಜೈಲಿಗೆ ಕಳಿಸ್ತಾಳೆ. ನನ್ನ ಸಾಯಿಸೋಕೆ ಬಂದಿದ್ಲು ಅಂತಾ ಸುಳ್ಳು ಕೇಸ್‌ ಹಾಕ್ತಾಳೆ. ನಿಮ್ಮ ಮಗನಿಗೆ ಮದುವೆ ಮಾಡ್ವೇಡಿ. ಯಾವುದಾದರೂ ಆಶ್ರಮಕ್ಕೆ ಕೊಟ್ಟುಬಿಡಿ’ ಎಂದಿದ್ದಾರೆ.

 

ಕೊನೆಗೆ ಪರಿಹಾರ ಎನ್ನುವಂತೆ, ‘ಮದುವೆ ಆದ ನಂತರ ನೀವು ಅವರ ಜೊತೆ ಇರಬೇಡಿ. ಅವರನ್ನ ಬೇರೆ ಕಳಿಸಿ. ಮಕ್ಕಳು-ಮರಿ ಹುಟ್ಟೋವರೆಗೂ ಏನಾದರೂ ಜಗಳ ಆಯ್ತೋ, ನೀವೆಲ್ಲಾ ಕಂಬಿ ಎಣಿಸಬೇಕಾಗುತ್ತೆ. ಇಡೀ ಕುಟುಂಬದವರು ಬೇಲ್‌ ತೆಗೆದುಕೊಳ್ಳಬೇಕಾಗುತ್ತೆ. ಮೂರು ಸ್ಟೋನ್‌ ಕೊಡುತ್ತೇನೆ. ಅದನ್ನು ನೀರಲ್ಲಿ ಹಾಕಿ ಸ್ನಾನ ಮಾಡಿ ಎಲ್ಲವೂ ಸರಿ ಆಗುತ್ತೆ. ಯಾವಾಗ ತರಿಸಿಕೊಳ್ತೀರಿ? ನಾಳೆ ಬಂದ್ರೂ ಸಿಗುತ್ತೆ. ನೀವು ಬೆಂಗಳೂರಿಗೆ ಬರೋದೇನು ಬೇಡ. ಆನ್‌ಲೈನ್‌ನಲ್ಲೇ ಕಳಿಸಿಕೊಡ್ತೀನಿ’ ಎಂದು ಆರ್ಯವರ್ಧನ್‌ ಹೇಳಿದ್ದಾರೆ.

https://www.instagram.com/reel/DV6FNvuE6RR/?igsh=MTl4bmZxNjJ2NzRpMQ==

TAGGED:If you marry your sonnetizens said this is business!you are finished: Aryavardhan Guruji made a prediction to his mother
Share This Article
Facebook Twitter Copy Link Print
Previous Article ಪಥ ಬದಲಿಸಿ ಭಾರತದತ್ತ ಸಾಗಿದ ಚೀನಾಗೆ ಹೊಗುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌
Next Article ನಮ್ಮೊಂದಿಗೆ ನಿಂತಿರುವ ಸ್ನೇಹಿತ ಭಾರತಕ್ಕೆ ಥ್ಯಾಂಕ್ಯೂ ಎಂದ ಇರಾನ್!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?