https://youtube.com/shorts/DiU6l59Harw?si=ZuaOlVBTxzvWqxLP
newsics.com
ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ” ದಿ ಡೆವಿಲ್ʼ ‘ಸರ್ಸೆ ನಿನ್ನ ಸೆರಗ’ ಹಾಡು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಚಿತ್ರತಂಡದ ವಿರುದ್ಧ ದೂರು ಕೂಡ ದಾಖಲಾಗಿದೆ. ಈ ಹಿನ್ನೆ ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ತೆಗೆಯಿರಿ ಎಂದು ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್ ನೀಡಿದ್ದು, ಇದರ ಬೆನ್ನಲೇ ಹಿಂದಿ ವರ್ಷನ್ ಹಾಡನ್ನು ಡಿಲೀಟ್ ಮಾಡಲಾಗಿದೆ.
ಇದೀಗ ಹಾಡಿನಲ್ಲಿ ಹೆಜ್ಜೆ ಹಾಕಿರುವ ಬಿಟೌನ್ ಬ್ಯೂಟಿ ನೋರಾ ಫತೇಹಿ (Nora Fatehi) ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ʼಮೊದಲು ನನಗೆ ಅಶ್ಲೀಲ ಸಾಹಿತ್ಯದ ಬಗ್ಗೆ ಮಾಹಿತಿ ಇರಲಿಲ್ಲಲ್ಲʼ ಎಂದು ನೋರಾ ಹೇಳಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡಿ ಮಾತನಾಡಿರುವ ನೋರಾ, “ಕಳೆದ ಎರಡು ದಿನಗಳಿಂದ ಆಗುತ್ತಿರುವ ವಿವಾದದ ಬಗ್ಗೆ ಮಾತನಾಡಲಿದ್ದೇನೆ. ನಾನು ಮೂರು ವರ್ಷಗಳ ಹಿಂದೆ ಈ ಹಾಡನ್ನು ಶೂಟ್ ಮಾಡಿದ್ದೆ. ಸಂಜಯ್ ದತ್ ಅವರಂತಹ ದಿಗ್ಗಜರು ಈ ಚಿತ್ರದಲ್ಲಿದ್ದಾರೆ. ಅವರ ಜತೆ ಕೆಲಸ ಮಾಡುವುದು ಯಾರಿಗೆ ಇಷ್ಟವಿಲ್ಲ ಹೇಳಿ, ಅದಕ್ಕಾಗಿ ನಾನು ಈ ಹಾಡಿಗೆ ಒಪ್ಪಿಕೊಂಡೆ. ಇದು ನನ್ನ ಪ್ರಕಾರ ʼನಾಯಕ್ ನಹೀ ಖಳನಾಯಕ್ʼ ಹಾಡಿನ ರಿಮೇಕ್ ಆಗಿದೆ. ಈ ಹಾಡು ಕೇಳಿದಾಗ ನನಗೆ ಇದರಲ್ಲಿ ಯಾವುದೇ ಅಶ್ಲೀಲತೆ ಕಾಣಲಿಲ್ಲ. ನನಗೆ ಕನ್ನಡ ಅರ್ಥ ಆಗುವುದಿಲ್ಲ. ಹಾಗಾಗಿ ಅವರು ಏನು ಹೇಳಿದ್ರೋ ಅದನ್ನು ನಾನು ಒಪ್ಪಿಕೊಂಡೆ ಎಂದಿದ್ದಾರೆ.
ʼʼಹಿಂದಿ ವರ್ಷನ್ ಹಾಡು ಕೇಳಿಸಿದಾಗ ನನಗೆ ಅದರಲ್ಲಿನ ಪದಗಳ ಅರ್ಥ ಗೊತ್ತಿತ್ತು. ಇದಕ್ಕೆ ತುಂಬಾ ವಿರೋಧ ಬರುತ್ತದೆ ಅಂತ ನಿರ್ದೇಶಕರ ಬಳಿ ಹೇಳಿದ್ದೆ. ಅದೇ ಕಾರಣಕ್ಕೆ ನಾನು ಈ ಹಾಡನ್ನು ಎಲ್ಲೂ ಕೂಡ ಪ್ರಚಾರ ಮಾಡಿಲ್ಲ. ನನ್ನ ಗೌರವಕ್ಕೆ ಧಕ್ಕೆ ಬರುತ್ತದೆ ಅಂತ ನಿರ್ದೇಶಕರ ಬಳಿ ಹೇಳಿದ್ದೆʼʼ ಎಂದಿದ್ದಾರೆ.
ಈ ಹಾಡನ್ನು ಈಗ ತೆಗೆದು ಹಾಕಲಾಗಿದೆ ಅದು ಒಳ್ಳೆಯದಾಯಿತು. ಇನ್ಮುಂದೆ ಇನ್ನಷ್ಟು ಜಾಗ್ರತೆಯಿಂದೆ ಮುಂದೆ ಸಾಗುತ್ತೇನೆ ಎಂದು ನಟಿ ಹೇಳಿದ್ದಾರೆ.
ನಿರ್ದೇಶಕ ಪ್ರೇಮ್ ಹಾಡಿನ ಬಗ್ಗೆ ಸಮರ್ಥನೆ ನೀಡಿದ್ದು, ನೋಡುಗರ ದೃಷ್ಟಿಕೋನ ಸರಿಯಾಗಿರಬೇಕು ಎಂದಿದ್ದಾರೆ
https://www.instagram.com/reel/DWBRIz5DIZJ/?igsh=MTU1bzkxb3JybnhiMQ==