https://youtube.com/shorts/Uyg7eLAiO4c?si=HGl_mdjplGhkcNCz
newsics.com
ಮೈಸೂರು: ಭ್ರಷ್ಟಾಚಾರದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು, ಅಧಿಕಾರಿಗಳ ಮುಂದೆಯೇ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಪಂಚಾಯಿತಿಯ ಪಿಡಿಒ ಮಂಜುಳಾ ಅವರು ಲೋಕಾಯುಕ್ತ ಬಲೆಗೆ ಬಿದ್ದವರು. ನೀರುಗಂಟಿ ಮಹದೇವ್ ಎಂಬುವವರಿಂದ 25,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ.
ದೂರುದಾರ ಮಹದೇವ್ ಅವರ ತಂದೆ ಸ್ವಾಮಿ ಅವರು ಕೆಲಸದಲ್ಲಿದ್ದಾಗಲೇ ನಿಧನರಾಗಿದ್ದರು. ಅನುಕಂಪದ ಆಧಾರದ ಮೇಲೆ ಮಹದೇವ್‌ಗೆ ಅದೇ ಪಂಚಾಯಿತಿಯಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಮೃತ ತಂದೆಗೆ ಬರಬೇಕಿದ್ದ ಸುಮಾರು 2 ಲಕ್ಷ ರೂಪಾಯಿ ಬಾಕಿ ಸಂಬಳವನ್ನು ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹದೇವ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಯೋಜನೆಯಂತೆ ಮಹದೇವ್ ಅವರು ಮುಂಗಡವಾಗಿ 25,000 ರೂಪಾಯಿ ಹಣವನ್ನು ನೀಡುತ್ತಿದ್ದಾಗ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ವಶಕ್ಕೆ ಪಡೆದರು. ಈ ವೇಳೆ ತೀವ್ರ ಗಾಬರಿಗೊಂಡ ಅಧಿಕಾರಿ, ಲೋಕಾಯುಕ್ತರ ಮುಂದೆಯೇ ಕಚೇರಿಯಲ್ಲಿದ್ದ ಹರಿತವಾದ ವಸ್ತುವಿನಿಂದ ತನ್ನ ಕೈಯನ್ನು ತಾನೇ ಕುಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ.
https://www.newsics.com/2026/03/17/wife-caught-red-handed-with-lover-in-hotel/