https://youtube.com/shorts/Uyg7eLAiO4c?si=HGl_mdjplGhkcNCz
newsics.com
ಶ್ರೀಶೈಲ ಯಾತ್ರೆ ಮುಗಿಸಿ ಬರುವಾಗ ಕ್ರೂಸರ್ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರ ಬಳಿ ನಡೆದಿದೆ.
ಅಪಘಾತದಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮೂವರು ಮೃತಪಟ್ಟಿದ್ದಾರೆ. ಅಜಿತ್ ಸಾತವಾರ(28), ಗೌರವ್(40) ಅಲಕಾ ಶಿಂಧೆ(60) ಮೃತಪಟ್ಟವರು ಎಂದು ಹೇಳಲಾಗಿದೆ.
ಕ್ರೂಸರ್ ನಲ್ಲಿ ಶ್ರೀಶೈಲ ಜಾತ್ರೆಗೆ 14 ಜನ ತೆರಳಿದ್ದರು. ಅಪಘಾತದಲ್ಲಿ 11 ಜನ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
https://www.newsics.com/2026/03/17/man-with-water-bottle-inserted-into-private-part/