https://youtube.com/shorts/Uyg7eLAiO4c?si=HGl_mdjplGhkcNCz
newsics.com
ಆಗ್ರಾ: ವಿಚಿತ್ರ ಗೀಳಿಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಗುದನಾಳದ ಒಳಗೆ ಒಂದು ಲೀಟರ್‌ನ ನೀರಿನ ಬಾಟಲಿಯನ್ನು ಸೇರಿಸಿಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ವರ್ಷದ ವಿವಾಹಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ತನ್ನ ಖಾಸಗಿ ಅಂಗದ ಮೂಲಕ ಬಾಟಲಿಯನ್ನು ಒಳಗೆ ತಳ್ಳಿದಾಗ, ಅದು ಗುದನಾಳದ ಆಳದಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಆತನಿಗೆ ಅಸಹನೀಯ ನೋವು ಕಾಣಿಸಿಕೊಂಡಿದ್ದು, ಮಲವಿಸರ್ಜನೆ ಮಾಡಲು ಸಾಧ್ಯವಾಗದೆ ನರಳಿದ್ದಾನೆ. ಸುಮಾರು 36 ಗಂಟೆಗಳ ಕಾಲ ನೋವು ಅನುಭವಿಸಿದ ವ್ಯಕ್ತಿ, ಅಂತಿಮವಾಗಿ ನವದೀಪ್ ಆಸ್ಪತ್ರೆಗೆ ಧಾವಿಸಿದ್ದಾನೆ.
ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ. ಸುನಿಲ್ ಶರ್ಮಾ ನೇತೃತ್ವದ ತಂಡ ಎಕ್ಸರೆ ಮಾಡಿದಾಗ ಮಲದ್ವಾರದ ಒಳಗೆ ಒಂದು ಲೀಟರ್ ಗಾತ್ರದ ಪ್ಲಾಸ್ಟಿಕ್ ಬಾಟಲಿ ಇರುವುದು ಪತ್ತೆಯಾಗಿದೆ. “ಸಿಗ್ಮೋಯಿಡೋಸ್ಕೋಪಿ” ಪರೀಕ್ಷೆಯ ಮೂಲಕ ಬಾಟಲಿಯು ಒಳಗೆ ಆಳವಾದ ಗಾಯಗಳನ್ನು ಮಾಡಿರುವುದು ಕಂಡುಬಂದಿದೆ. ಸುಮಾರು 75 ನಿಮಿಷಗಳ ಕಾಲ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ಬಾಟಲಿಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ
ವೈದ್ಯರ ಪ್ರಕಾರ, ಈ ವ್ಯಕ್ತಿಯು ಸೈಕೋ ಸೆಕ್ಸುವಲ್ ಡಿಸಾರ್ಡರ್ ಎನಲ್ ಇರೋಟಿಸಂ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ.