newsics.com
ಗದಗ: ಗ್ಯಾಸ್ ಸಿಲಿಂಡರ್ ಸಿಗದಕ್ಕೆ ಒಂದ್ಕಡೆ ಜನ್ರ ಪರದಾಡ್ತಿದ್ದಾರೆ. ಅನೇಕ ಹೋಟೆಲ್ ಗಳು ಬಂದ್ ಆಗಿವೆ. ಮಠಗಳ ದಾಸೋಹಕ್ಕೂ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್‌ನವರೇ ಬೀದಿಗಿಳಿದು ಗ್ಯಾಸ್ ಸಪ್ಲಾಯ್ ಗಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಚಿವ ಎಚ್.ಕೆ ಪಾಟೀಲರ ಕಾರ್ಯಕ್ರಮದಲ್ಲಿ 12 ಕಮರ್ಷಿಯಲ್ ಸಿಲಿಂಡರ್ ಪತ್ತೆಯಾಗಿವೆ.
ದಿವಂಗತ ಕೆ.ಎಚ್. ಪಾಟೀಲರ 101ನೇ ಜಯಂತೋತ್ಸವ ಕಾರ್ಯಕ್ರಮ ಗದಗನ ಕಾಟನ್ ಸೇಲ್ ಸೊಸೈಟಿಯಲ್ಲಿ ನಡೆಯುತ್ತಿದೆ. ಆ ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 10 ಸಾವಿರ ಜನ್ರಿಗೆ ಉಪಹಾರ ಊಟದ ವ್ಯವಸ್ಥೆ ಮಾಡಲಾಗಿದೆ.
ಬೇರೆ ಎಲ್ಲಾ ಕಡೆಗೂ ಸಿಲಿಂಡರ್ ಸಮಸ್ಯೆ, ಆದ್ರೆ ಸಚಿವ ಕಾರ್ಯಕ್ಕೆ ಮಾತ್ರ ಭರ್ಜರಿ ಸಿಲಿಂಡರ್ ಸಪ್ಲಾಯ್ ಆಗ್ತಿವೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. 12 ಕಮರ್ಷಿಯಲ್ ಸಿಲಿಂಡರ್ ಬಳಸಿ ಚಪಾತಿ, ರೊಟ್ಟಿ, ಅನ್ನ ಸಾಂಬರ್, ಮೊಸರು ಅನ್ನ, ಪಲ್ಯ, ಸೇರಿದಂತೆ ಅನೇಕ ತರಹದ ಸಿಹಿ ಪದಾರ್ಥ ಅಡುಗೆ ವ್ಯವಸ್ಥೆ ಮಾಡಿದ್ದಾರೆ. ಇದನ್ನು ಕೆ.ಎಚ್. ಪಾಟೀಲ ಅಭಿಮಾನಿಗಳ ಬಳಗದಿಂದ ಈ ಎಲ್ಲಾ ಊಟದ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಸಚಿವರಾದ ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಎಚ್.ಕೆ ಪಾಟೀಲ ಭಾಗಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾವಿರಾರು ಸಂಖ್ಯೆಯ ಜನರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಲು ಕಮರ್ಷಿಯಲ್ 12 ಸಿಲಿಂಡರ್ ಬಳಕೆಯಾಗಿವೆ.
ಈ ಪುಟ್ಟ ಕಾಳು ಬೆರೆಸಿದ ನೀರು ಕುಡಿದ್ರೆ ವಾರದಲ್ಲೇ ಹೊಟ್ಟೆಯ ಬೊಜ್ಜು ಕರಗುತ್ತೆ!
ಇನ್ಮುಂದೆ ಎಲ್‌ಪಿಜಿ ಬುಕಿಂಗ್ ಕಷ್ಟ : ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ