https://youtube.com/shorts/JFDfzeRUAUw?si=UPiQjhCFAIkLXEhb
newsics.com
ಟೆಹ್ರಾನ್: ಇರಾನ್ ಮತ್ತು ಇಸ್ರೇಲ್, ಅಮೆರಿಕ ನಡುವಿನ ಯುದ್ಧ ಇದೀಗ 16ನೇ ದಿನಕ್ಕೆ ಕಾಲಿಟ್ಟಿದ್ದು, ಅಮೆರಿಕ ವಿರುದ್ಧ ಕೆಂಡಾಮಂಡಲವಾಗಿರುವ ಇರಾನ್ ಇದೀಗ ಮೊದಲ ಬಾರಿಗೆ ತನ್ನ ಡ್ಯಾನ್ಸಿಂಗ್ ಕ್ಷಿಪಣಿಯನ್ನು ಉಡಾಯಿಸಿದೆ.
ಇರಾನ್ ಭಾನುವಾರ ಇಸ್ರೇಲಿ ಮತ್ತು ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ತನ್ನ ಕ್ಷಿಪಣಿ ದಾಳಿ ಮುಂದುವರೆಸಿದ್ದು ತನ್ನ ಬತ್ತಳಿಕೆಯಲ್ಲಿರುವ ಕ್ಷಿಪಣಿಗಳ ಸರಣಿಯನ್ನೇ ಉಡಾಯಿಸಿದೆ.
ಈ ಪೈಕಿ ಇರಾನ್ ಇದೇ ಮೊದಲ ಬಾರಿಗೆ ‘ಡ್ಯಾನ್ಸಿಂಗ್ ಕ್ಷಿಪಣಿ’ ಎಂದು ಕರೆಯಲಾಗುವ ಸೆಜ್ಜಿ ಕ್ಷಿಪಣಿಯನ್ನು ಪ್ರಯೋಗಿಸಿದೆ.ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದ ನಂತರ ಇದನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ.
ಇರಾನ್ನ ಸೆಜ್ಜಿಲ್-2 ಎರಡು ಹಂತದ, ಘನ-ಇಂಧನ ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಅಂದಾಜು 2,000 ಕಿಲೋಮೀಟರ್ ವ್ಯಾಪ್ತಿ ಮತ್ತು ಸುಮಾರು 700 ಕಿಲೋಗ್ರಾಂಗಳಷ್ಟು ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇದರ ಎತ್ತರದ ಕುಶಲ ಸಾಮರ್ಥ್ಯದಿಂದಾಗಿ, ಇದನ್ನು “ಡ್ಯಾನ್ಸಿಂಗ್ ಕ್ಷಿಪಣಿ” ಎಂದು ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇದು ಐರನ್ ಡೋಮ್ನಂತಹ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಕಣ್ತಪ್ಪಿಸುವ ಸಾಮರ್ಥ್ಯ ಹೊಂದಿದೆ.
ಅಂತೆಯೇ ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರ (CSIS) ಪ್ರಕಾರ, ಈ ಕ್ಷಿಪಣಿ ಸುಮಾರು 18 ಮೀಟರ್ ಉದ್ದ, ಸುಮಾರು 1.25 ಮೀಟರ್ ವ್ಯಾಸ ಮತ್ತು ಸುಮಾರು 23,600 ಕಿಲೋಗ್ರಾಂಗಳಷ್ಟು ತೂಗುತ್ತದೆ.
https://www.newsics.com/2026/03/16/food-department-launches-helpline-for-lpg-cylinder-distribution/