https://youtube.com/shorts/JFDfzeRUAUw?si=UPiQjhCFAIkLXEhb
newsics.com
ಎಲ್‌ಪಿಸಿ ಸಿಲಿಂಡರ್ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಇಲಾಖೆಯು ಸಹಾಯವಾಣಿ ಆರಂಭಿಸಿದೆ. ನಾಗರೀಕರು ಯಾವುದೇ ದೂರುಗಳಿದ್ದರೂ ಕರೆ ಮಾಡಿ ಸಲ್ಲಿಕೆ ಮಾಡಬಹುದು ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಿಳಿದ್ದಾರೆ.
ದುಪಟ್ಟು ಬೆಲೆಗೆ ಸಿಲಿಂಡರ್ ಮಾರಾಟ ಮಾಡಿದ್ರೆ ಕ್ರಮ ಕೈಗೊಳ್ಳಲು ಆಹಾರ ಇಲಾಖೆಯು ಮುಂದಾಗಿದೆ. ಇನ್ನು ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ 11 ಲಕ್ಷ ಗೃಹಬಳಕೆಯ, 20 ಸಾವಿರ ವಾಣಿಜ್ಯ ಬಳಕೆಯ ಸಿಲಿಂಡರ್ ಹಂಚಿಕೆ ಮಾಡಲಾಗಿದೆ.
ಗ್ಯಾಸ್ ವಿತರಣೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ತೈಲ ಕಂಪನಿಗಳು ಅಗತ್ಯ ತಕ್ಕಂತೆ ಎಲ್‌ಪಿಜಿ ಸಿಲಿಂಡರ್ ದಾಸ್ತಾನು ಮಾಡಿಕೊಂಡಿವೆ. ಗ್ಯಾಸ್ ಏಜೆನ್ಸಿಗಳು ಬುಕಿಂಗ್ ಮಾಡಿದ ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಸಿಲಿಂಡರ್ ವಿತರಿಸಬೇಕು. ಕಾಳಸಂತೆಯಲ್ಲಿ ದುಪಟ್ಟು ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು.
ಈ ಕುರಿತು ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಏನಾದರೂ ತೊಂದರೆ ಇದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://www.newsics.com/2026/03/15/dhurandhar-2-crosses-rs-100-crore-in-advance-bookings-alone-2/