newsics.com
ಕೋಮಾದಲ್ಲಿರುವ ವ್ಯಕ್ತಿಗೆ ದಯಾಮರಣ ನೀಡುವಂತೆ ಕೋರ್ಟ್ ತೀರ್ಪು ನೀಡಿದ ಬಳಿಕ ಇದೀಗ ಹರೀಶ್ ರಾಣಾರ ಕೊನೆಯ ಗಳಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾಗ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಸುಮಾರು 13 ವರ್ಷದಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಅವರ ದಯಾಮರಣ ಪ್ರಕ್ರಿಯೆ ದೆಹಲಿ ಏಮ್ಸ್ನಲ್ಲಿ ಆರಂಭವಾಗಿದೆ
2013ರಲ್ಲಿ ನಾಲ್ಕನೇ ಮಹಡಿಯ ಕಟ್ಟಡದಿಂದ ಬಿದ್ದು ಕೋಮಾಕ್ಕೆ ಜಾರಿದ ಮಗನಿಗೆ ದಯಾಮರಣ ನೀಡುವಂತೆ ಹರೀಶ್ ರಾಣಾ ತಂದೆ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ್ದು, ಹರೀಶ್ ರಾಣಾಗೆ ನೀಡುತ್ತಿದ್ದ ಜೀವರಕ್ಷಕ ಚಿಕಿತ್ಸೆಯನ್ನು ತಡೆದು, ದಯಾಮರಣಕ್ಕೆ ಅನುಮತಿ ನೀಡಿದೆ.
ಜೀವನದ ಆರೈಕೆ ಯೋಜನೆಯನ್ನು ಜಾರಿಗೊಳಿಸಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಇದೀಗ ಆಸ್ಪತ್ರೆಯಲ್ಲಿ ಹರೀಶ್ ರಾಣಾರ ಕೊನೆ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹರೀಶ್ ರಾಣಾ ಅವರನ್ನು ದೆಹಲಿಯ ಏಮ್ಸ್‌ಗೆ ಕರೆತರಲಾಗಿದೆ. ಇದುವರೆಗೂ ನೀಡಲಾಗುತ್ತಿದ್ದ ಚಿಕಿತ್ಸೆಯನ್ನು ಇದೀಗ ನಿಲ್ಲಿಸಲಾಗಿದೆ. 13 ವರ್ಷಗಳ ಕುಟುಂಬದ ಭರವಸೆ, ಪ್ರಾರ್ಥನೆ ಮತ್ತು ತ್ಯಾಗ ಇದೀಗ ಕೊನೆಗೊಳ್ಳುತ್ತಿದೆ.
ದೀರ್ಘಕಾಲದಿಂದ ಆರೋಗ್ಯ ಚೇತರಿಕೆ ಕಾಣದವರಿಗೆ ನಡೆಸುವ ದಯಾಮರಣ ಪ್ರಕ್ರಿಯೆಯಲ್ಲಿ ಮೊದಲು ಹಂತಹಂತವಾಗಿ ಅವರ ಜೀವ ರಕ್ಷಕ ವ್ಯವಸ್ಥೆಯನ್ನು ಹಂತಹಂತವಾಗಿ ತೆಗೆದು ಹಾಕಲಾಗುತ್ತದೆ. ಅಂತೆಯೇ ಹರೀಶ್ ರಾಣಾ ಅವರಿಗೆ ಮೊದಲು ದ್ರವ ಆಹಾರ ನೀಡಲು ಮತ್ತು ತ್ಯಾಜ್ಯ ಸಂಗ್ರಹಣೆಕ್ಕಾಗಿ ಅಳವಡಿಸಿರುವ ಟ್ಯೂಬ್‌ಗಳನ್ನು ತೆಗೆದುಹಾಕಲಾಗುತ್ತದೆ. ಬಳಿಕ ಅವರ ದೇಹವನ್ನು ನೈಸರ್ಗಿಕ ವ್ಯವಸ್ಥೆಗೆ ಪೂರಕವಾಗಿ ಮಾಡಲಾಗುತ್ತದೆ. ಅವರ ದೇಹ ಸಹಜ ಪರಿಸರದಲ್ಲಿ ಇದ್ದಷ್ಟು ಹೊತ್ತು ಅವರು ಜೀವಂತವಾಗಿರುತ್ತಾರೆ. ಬಳಿಕ ಹರೀಶ್ ರಾಣಾ ಅವರ ಅಂಗಾಂಗ ದಾನಕ್ಕೆ ಕುಟುಂಬ ಒಪ್ಪಿರುವುದರಿಂದ ವೈದ್ಯಕೀಯ ತಂಡವು ಅವರ ಅಂಗಗಳ ಸಂಪೂರ್ಣ ಪರೀಕ್ಷೆ ನಡೆಸಿ, ಅವುಗಳಲ್ಲಿ ಯಾವುದು ದಾನಕ್ಕೆ ಯೋಗ್ಯವಾಗಿದೆ ಎಂದು ನೋಡಿ ಅದನ್ನು ಉಳಿಸಿಕೊಳ್ಳುತ್ತಾರೆ. ಅನಂತರ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.
ಮಗುವಿನ ಪೋಷಣೆಗಾಗಿ ನಾನು ಯಾರ ಜತೆಗಾದರೂ ಮಲಗುತ್ತೇನೆ: ಚಂದ್ರಿಕಾ ದೀಕ್ಷಿತ್, ವಿಡಿಯೋ ನೋಡಿ