newsics.com
ಹಾರ್ದಿಕ್ ಪಾಂಡ್ಯ, ತನ್ನ ಗೆಳತಿ ಮಹಿಕಾ ಶರ್ಮಾ ಜೊತೆ ಓಡಾಡಲು ಮತ್ತೊಂದು ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಇದರ ಹೆಸರು Ferrari 12Cilindri ಆಗಿದ್ದು ಇದು ಸುಮಾರು 10 ಕೋಟಿ ರೂಪಾಯಿಗಳಿಗೂ ಅಧಿಕ ಬೆಲೆ ಇದೆ. ಫೆರಾರಿ 12ಸಿಲಿಂಡ್ರಿ ಕಾರು ಗ್ರ್ಯಾಂಡ್ ಟೂರಿಂಗ್ ಸೂಪರ್ ಕಾರ್ ಆಗಿದ್ದು, ಇದನ್ನು ವಿಶೇಷವಾಗಿ ಶ್ರೀಮಂತ ಖರೀದಿದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಆನ್ ರೋಡ್ ಬೆಲೆ 10 ಕೋಟಿ ರೂಪಾಯಿ ಮೀರಿದೆ. ಇದು ಗಂಟೆಗೆ 340 ರಿಂದ 350 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ.
ಸದ್ಯ ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಶರ್ಮಾ ಇಬ್ಬರು ಜೊತೆಯಲ್ಲೇ ಫೆರಾರಿ 12ಸಿಲಿಂಡ್ರಿ ಕಾರಿನಲ್ಲಿ ಪಾರ್ಟಿಗೆ ಹೋಗಿ ವಾಪಸ್ ಮನೆಗೆ ಬರುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ ಗ್ಯಾರೇಜ್ನಲ್ಲಿ ರೋಲ್ಸ್ ರಾಯ್ಸ್ ಫಾಂತೊಮ್, ಆಡಿ A6, ರೇಂಜ್ ರೋವರ್ ವೋಗೋ, ಲ್ಯಾಂಬೋರ್ಗಿನ್ ಉರ್ಸ್ ಎಸ್ಇ ಹಾಗೂ ಮೆರ್ಸಿಡಸ್ ಬೆಂಜ್ ಸೇರಿ ಇನ್ನು ಕೆಲವು ದುಬಾರಿ ಕಾರುಗಳು ಇವೆ.
ಈ ಸಲದ ಟಿ20 ವಿಶ್ವಕಪ್ನಲ್ಲಿ ಅದ್ಭುತವಾದ ಪ್ರದರ್ಶನ ನೀಡದ್ದ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನ ನೀಡಿದ್ದರು. 160.74 ಸ್ಟ್ರೈಕ್ರೇಟ್ನಲ್ಲಿ 217 ರನ್ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಜಿಂಬ್ವಾಬೆ ಹಾಗೂ ನಮೀಬಿಯಾ ವಿರುದ್ಧ ಅರ್ಧಶತಕ ಗಳಿಸಿದ್ದಾರೆ. ಬೌಲಿಂಗ್ನಲ್ಲೂ ಪರಾಕ್ರಮ ಮೆರೆದಿದ್ದ ಪಾಂಡ್ಯ 32.33 ಸರಾಸರಿಯಲ್ಲಿ ಒಟ್ಟು 9 ವಿಕೆಟ್ಗಳನ್ನು ಉರುಳಿಸಿದ್ದರು. ಫೆರಾರಿ 12ಸಿಲಿಂಡ್ರಿ ಕಾರನ್ನು ಗೆಳತಿ ಮಹಿಕಾ ಶರ್ಮಾಗೆ ಗಿಫ್ಟ್ ಆಗಿ ಕೊಟ್ಟಿದ್ದಾರಾ ಎಂದು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ
War news ಇರಾನ್ನ ಖಾರ್ಗ್ ದ್ವೀಪದ ಮೇಲೆ ಯುಎಸ್ ದಾಳಿ, ಬೆಚ್ಚಿಬಿದ್ದ ಚೀನಾ!