https://youtube.com/shorts/JFDfzeRUAUw?si=UPiQjhCFAIkLXEhb
newsics.com
ಬ್ರಿಟನ್‌ನ ಲೀಡ್ಸ್ ನಗರದಲ್ಲಿರುವ ವೆಸ್ಟ್ ಲೀಡ್ಸ್ ಸಿವಿಲ್ ಕಂಪನಿಯ ಮ್ಯಾನೇಜರ್ ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯನ್ನು ನಿಂದಿಸಿ ಕಂಗಾಲಾಗಿದ್ದಾರೆ. ಆಲುಗಡ್ಡೆ ಎಂದು ಪದೇ ಪದೇ ಮಹಿಳೆಯನ್ನು ಕರೆದು ಅವಮಾನಿಸಿದ ಬಾಸ್‌ಗೆ ಇದೀಗ ಕೋರ್ಟ್ ಬರೋಬ್ಬರಿ 29 ಲಕ್ಷ ರೂಪಾಯಿ ಪಾವತಿಸಲು ಆದೇಶಿಸಿದೆ.
ಬರ್ನಾಡೆಟ್ ಹೆಯ್ಸ್ ಅನ್ನೋ ಮಹಿಳೆ ವೆಸ್ಟ್ ಲೀಡ್ಸ್ ಸಿವಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆಯ ಮೂಲಕ ಐರ್ಲೆಂಡ್. ವೆಸ್ಟ್ ಲೀಡ್ಸ್ ಸಿವಿಲ್ ಕಂಪನಿಯ ಬಾಸ್ ಅಟ್ಕಿನ್ಸ್ ಮಿಕ್ ಮಹಿಳಾ ಉದ್ಯೋಗಿಗೆ ಪದೆ ಪದೇ ಜನಾಂಗಿಯ ನಿಂದನೆ ಮಾಡಿದ್ದಾರೆ. ಐರೀಶ್ ಮಹಿಳೆಯರಿಗೆ ಅಲ್ಲಿನ ದೇಶದಲ್ಲಿ ಬಳಸುವ ಕೆಲ ಕೆಟ್ಟ ಬೈಗುಳ, ನಿಂದನೆ ಪದಗಳನ್ನು ಬಳಸಿದ್ದಾರೆ. ಈ ಪೈಕಿ ಆಲುಗಡ್ಡೆ, ಸ್ಟುಪಿಡ್ ಪ್ಯಾಡಿ ಸೇರಿದಂತೆ ಹಲವು ಪದ ಬಳಕೆ ಮಾಡಿದ್ದಾರೆ.
ಬಾಸ್ ಪದೇ ಪದೇ ಈ ರೀತಿ ಜನಾಂಗೀಯ ನಿಂದನೆ ಮಾಡಿದ ವಿರುದ್ಧ ಕೆರಳಿ ಕೆಂಡಾಮಂಡಲವಾಗಿದ್ದಾಳೆ. ಇದೇ ವೇಳೆ ಬಾಸ್ ಪದ ಬಳಕೆ ವಿರುದ್ದ ಕಾನೂನು ಹೋರಾಟ ಆರಂಭಿಸಿದ್ದಾಳೆ.
ಈ ಪ್ರಕರಣ ಉದ್ಯೋಗ ನ್ಯಾಮಮಂಡಳಿ ಮೆಟ್ಟಿಲೇರಿತ್ತು. ಜನಾಂಗೀಯ ನಿಂದನೆ ಹಾಗೂ ಮಹಿಳೆಯನ್ನು ಕಚೇರಿಯಲ್ಲಿ ಅವಮಾನ ಮಾಡಿದ ಪ್ರಕರಣವನ್ನು ಉದ್ಯೋಗ ನ್ಯಾಯಮಂಡಳಿ ಗಂಭೀರವಾಗಿ ಪರಿಗಣಿಸಿತ್ತು. ಇದೀಗ 23,000 ಪೌಂಡ್ ಪರಿಹಾರ ನೀಡುವಂತೆ ಆದೇಶ ನೀಡಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ 29 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಬಾಸ್, ಮಹಿಳೆಗೆ ನೀಡಬೇಕಿದೆ.ಕಂಪನಿ ಆಗಷ್ಟೇ ಚೇತರಿಕೆ ಹಾದಿಯಲ್ಲಿತ್ತು. ಇದರ ನಡುವೆ ಈ ಪ್ರಕರಣದಿಂದ ಬಾಸ್ ಕಂಗಾಲಾಗಿದ್ದಾರೆ. ಪರಿಹಾರ ಮೊತ್ತ ಕಡಿಮೆ ಮಾಡುವಂಕೆ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಆಕೆ ಕಂಪನಿಯಲ್ಲಿ ಮುಂದುವರಿಸುವುದಾಗಿ ಆಫರ್ ನೀಡಿದ್ದಾರೆ. ಆದರೆ ಇದ್ಯಾವುದನ್ನು ನ್ಯಾಯ ಮಂಡಳಿ ಒಪ್ಪಿಕೊಂಡಲ್ಲ
https://www.newsics.com/2026/03/14/tragic-end-for-hindu-girl-who-saw-hell-in-love-with-mohammed/