https://youtube.com/shorts/yMSO-E277Og?si=gFSvtQQHQjZ3lXBt
newsics.com
ಬಾಲ ನಟನಾಗಿ ಮಿಂಚಿದ್ದ ಸಿನಿಮಾ ನಟ ಹರಿ ಮುರಳಿ ಕೇರಳದ ಪಯ್ಯನ್ನೂರಿನ ಅನ್ನೂರ್ನಲ್ಲಿರುವ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 15 ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಹರಿ ಮುರಳಿ ದಿಢೀರ್ ಸಾವು ಚಿತ್ರರಂಗಕ್ಕೆ ಮತ್ತೊಂದು ಆಘಾತ ನೀಡಿದೆ.
ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹರಿ ಮುರಳಿ ಅವರು ‘ರಸಿಕನ್ ಸೇರಿದಂತೆ ಸುಮಾರು 15 ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ಅವರು ವೃತ್ತಿಯಲ್ಲಿ ವಿಎಫ್ಎಕ್ಸ್ ಆರ್ಟಿಸ್ಟ್ ಆಗಿದ್ದರು. ಸಿನಿಮಾ ಕ್ಷೇತ್ರದಲ್ಲಿ ವಿಎಫ್ಎಕ್ಸ್ ಕಲಾವಿದನಾಗಿ, ನಟನಾಗಿ ಗುರುತಿಸಿಕೊಂಡಿದ್ದರು.
ರಂಗಭೂಮಿ ನಟ ಪಯ್ಯನ್ನೂರು ಮುರಳಿ ಅವರ ಪುತ್ರರಾಗಿದ್ದ ಹರಿ ಮುರಳಿ, ತಮ್ಮ ನಾಲ್ಕೂವರೆ ವರ್ಷ ವಯಸ್ಸಿನಲ್ಲೇ ಎ.ಎಂ. ನಸೀರ್ ಅವರ ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಲಾಲ್ ಜೋಸ್ ನಿರ್ದೇಶನದ ‘ರಸಿಕನ್’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಹರಿ ಮುರಳಿ ಅವರು ಕೆಲವು ಕಾಲದಿಂದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ.