Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇಲ್ಲಿ ಗ್ಯಾಸ್ ಸಿಲಿಂಡರ್ ಟೆನ್ಶನ್ ಇಲ್ಲದೆ ಪ್ರತಿನಿತ್ಯ 70 ಸಾವಿರ ಮಕ್ಕಳಿಗೆ ಸಿಗುತ್ತೆ ಬಿಸಿ ಬಿಸಿ ಊಟ
ಕರ್ನಾಟಕಪ್ರಮುಖ

ಇಲ್ಲಿ ಗ್ಯಾಸ್ ಸಿಲಿಂಡರ್ ಟೆನ್ಶನ್ ಇಲ್ಲದೆ ಪ್ರತಿನಿತ್ಯ 70 ಸಾವಿರ ಮಕ್ಕಳಿಗೆ ಸಿಗುತ್ತೆ ಬಿಸಿ ಬಿಸಿ ಊಟ

Share
2 Min Read
SHARE

newsics.com

ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶದ ಹಲವಡೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಹೋಟೆಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಬೆಂಗಳೂರಿನ ಸಾಮಾಜಿಕ ಸಂಸ್ಥೆಯೊಂದಕ್ಕೆ ಮಾತ್ರ ಗ್ಯಾಸ್ ಕೊರತೆಯ ಬಿಸಿ ತಟ್ಟಿಲ್ಲ ಎಂಬುದು ವಿಶೇಷವಾಗಿದೆ.

ಈ ಗ್ಯಾಸ್ ಬಿಕ್ಕಟ್ಟಿನ ನಡುವೆಯೂ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಎಲ್‌ಪಿಜಿ ಗ್ಯಾಸ್ ಬಳಸದೇ, ಯಾವುದೇ ತೊಂದರೆಯಿಲ್ಲದೆ 70 ಸಾವಿರದಿಂದ ಒಂದು ಲಕ್ಷ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಸಿದ್ಧಪಡಿಸುತ್ತಿದೆ. ವಿಶೇಷವೆಂದರೆ ಈ ಅಡುಗೆಗೆ ಗ್ಯಾಸ್ ಸಿಲಿಂಡರ್ ಅಗತ್ಯವೇ ಇಲ್ಲ. ದೇಶದಾದ್ಯಂತ ವ್ಯಾಪಿಸಿರುವ ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ತಲೆಕೆಡಿಸಿಕೊಳ್ಳದ ಸಂಸ್ಥೆ ಸ್ಟೀಮ್ ಕುಕ್ಕಿಂಗ್ ಪದ್ಧತಿಯ ಮೂಲಕ ಮಕ್ಕಳಿಗೆ ಮಿಡ್ ಡೇ ಮೀಲ್ಸ್ ನೀಡುತ್ತಿದೆ. ಈಗಿರುವ ತುರ್ತು ಪರಿಸ್ಥಿತಿಯಿಂದಾಗಿ ದೇಶದ ಜನ ಕಕ್ಕಾಬಿಕ್ಕಿಯಾಗಿದ್ದರೆ, 2005ರಲ್ಲೇ ಎಲ್‌ಪಿಜಿ ಸಿಲಿಂಡರ್ ಬಳಕೆಗೆ ಗುಡ್‌ಬೈ ಹೇಳಿರುವ ಈ ಸಂಸ್ಥೆ ದೇಶದ ಮೊದಲ ಕಮ್ಯುನಿಟಿ ಕ್ಲೌಡ್ ಕಿಚನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿ ಕಸದ ವಸ್ತುಗಳಿಂದ ತಯಾರಿಸಲಾದ ಬ್ರಿಕೆಟ್ಸ್ ಬಳಸಿ ಅಡುಗೆ ಮಾಡಲಾಗುತ್ತಿದೆ. ಹಿಂದೆ ದಿನಕ್ಕೆ 60 ಸಿಲಿಂಡರ್ ಹಾಗೂ ಸುಮಾರು 400 ಲೀಟರ್ ಡಿಸೆಲ್ ಅಗತ್ಯವಿದ್ದರೆ, ಈಗ ಪರಿಸರ ಸ್ನೇಹಿ ವಿಧಾನದಿಂದ ಅಡುಗೆ ನಡೆಯುತ್ತಿದೆ. ಇದೀಗ ಪ್ರತಿ ದಿನ 70 ಸಾವಿರ ಮಕ್ಕಳಿಗೆ ಮಿಡ್‌ಡೇ ಮೀಲ್ಸ್ ನೀಡುವುದರ ಜೊತೆಗೆ ನಗರದ 10 ಕಡೆಗಳಲ್ಲಿ ಅನ್ನದಾನವೂ ನಡೆಯುತ್ತಿದೆ. ಫಾಸಿಲ್ ಫ್ಯೂಯಲ್ ಫ್ರೀ ಅಡುಗೆ ವ್ಯವಸ್ಥೆ ಮೂಲಕ ಅದಮ್ಯ ಚೇತನ ಸಂಸ್ಥೆ ಸದ್ಯದ ಗ್ಯಾಸ್ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರಿಗೂ ಮಾದರಿಯಾಗಿದೆ.
ಏನಿದು ಬ್ರಿಕೆಟ್ಸ್?
ಬ್ರಿಕೆಟ್ಸ್ (Briquettes) ಎಂಬುದು ಮರದ ಪುಡಿ, ಕೃಷಿ ತ್ಯಾಜ್ಯ (ನೆಲ್ಲಿಕಾಯಿ ಚಿಪ್ಪು, ಕಡಲೆಕಾಯಿ ಸಿಪ್ಪೆ) ಅಥವಾ ಕಲ್ಲಿದ್ದಲು ಪುಡಿಯಿಂದ ತಯಾರಿಸಿದ ಇಂಧನ ಇಟ್ಟಿಗೆಗಳಾಗಿವೆ. ಇವು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಕಡಿಮೆ ಹೊಗೆ ಮತ್ತು ಹೆಚ್ಚಿನ ಶಾಖವನ್ನು ನೀಡುವ ಪರ್ಯಾಯ ಇಂಧನ ಮೂಲಗಳಾಗಿವೆ. ಇವುಗಳನ್ನು ಉದ್ಯಮಗಳಲ್ಲಿ ಬಾಯ್ಲರ್‌ಗಳಿಗೆ, ಅಡುಗೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದೇ ಕ್ರಮವನ್ನು ದೇಶದ ವಿವಿಧ ಹೋಟೆಲ್ಗಳು, ಪಿಜಿಗಳು ಅಳವಡಿಸಿಕೊಂಡರೆ ಸಧ್ಯದ ಪರಿಸ್ಥಿತಿ ಎದುರಿಸಲು ಸಹಾಯವಾಗುತ್ತದೆ.

Elephant attack ಹಾಡಹಗಲೇ ಕಾಡಾನೆ ದಾಳಿ: ಬೆಳೆಗಾರ ಸಾವು

TAGGED:000 children get hot meals every day without gas cylinder tension.70Here
Share This Article
Facebook Twitter Copy Link Print
Previous Article Elephant attack ಹಾಡಹಗಲೇ ಕಾಡಾನೆ ದಾಳಿ: ಬೆಳೆಗಾರ ಸಾವು
Next Article Big effort ಜೈಲಿನಿಂದ ಪರಾರಿಯಾಗಲು ಸತತ ಐದು ವರ್ಷ ಸುರಂಗ ಕೊರೆದ ಕೈದಿ ತಲುಪಿದ್ದೆಲ್ಲಿಗೆ?

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?