https://youtube.com/shorts/fD6pvkz7g8c?si=uKQ1N3BMJTvK6QIw
newsics.com
ಅಲ್ಲು ಅರ್ಜುನ್ ಸ್ಟಾರ್ ಪ್ಯಾನ್ ಇಂಡಿಯಾ ನಟ. ಅವರ ನಟನೆಯ ‘ಪುಷ್ಪ 2’ ಸಿನಿಮಾ ಹಲವು ಹೊಸ ಬಾಕ್ಸ್ ಆಫೀಸ್ ದಾಖಲೆಗಳನ್ನು ಬರೆದಿವೆ. ‘ಪುಷ್ಪ 2’ ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರು ಸುಮಾರು 300 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಅಲ್ಲು ಅರ್ಜುನ್, ಭಾರತದ ಅತ್ಯಂತ ದುಬಾರಿ ಪ್ಯಾನ್ ಇಂಡಿಯಾ ನಟರುಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ಹೊಸ ಉದ್ಯಮಕ್ಕೆ ಅಲ್ಲು ಅರ್ಜುನ್ ಕೈ ಹಾಕಿದ್ದಾರೆ.
ಅಲ್ಲು ಅರ್ಜುನ್ ಪ್ರೀಮಿಯಮ್ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದು, ಹೈದರಾಬಾದ್ನ ಈ ವರೆಗಿನ ಮಲ್ಟಿಪ್ಲೆಕ್ಸ್ಗಳಲ್ಲಿಯೇ ಅತ್ಯಂತ ಗುಣಮಟ್ಟದ ಮಲ್ಟಿಪ್ಲೆಕ್ಸ್ ಇದಾಗಲಿದೆ ಎನ್ನಲಾಗುತ್ತಿದೆ. ಹೈದರಾಬಾದ್ನ ಕೋಕಾಪೇಟೆಯಲ್ಲಿ ಎಎ ಮಲ್ಟಿಪ್ಲೆಕ್ಸ್ ನಿರ್ಮಾಣವಾಗಿದ್ದು, ನಾಳೆ (ಮಾರ್ಚ್ 12) ಇದರ ಉದ್ಘಾಟನಾ ಸಮಾರಂಭ ಆಯೋಜನೆಯಾಗಿದೆ.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಖುದ್ದು ಈ ಮಲ್ಟಿಪ್ಲೆಕ್ಸ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಏಷಿಯನ್ ಸಿನಿಮಾಸ್ ಜೊತೆಗೆ ಕೈ ಜೋಡಿಸಿ ಎಎಎ ಸಿನಿಮಾಸ್ ಹೆಸರಿನ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದರು. ಇದೀಗ ಪ್ರೀಮಿಯಮ್ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ಈಗಾಗಲೇ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ವಿಜಯ್ ದೇವರಕೊಂಡ ಒಡೆತನದ ಎವಿಡಿ ಸಿನಿಮಾಸ್ಗಳು ಇವೆ. ಇದೀಗ ಅಲ್ಲು ಅರ್ಜುನ್ ಸಹ ಮಲ್ಟಿಪ್ಲೆಕ್ಸ್ ಬ್ಯುಸಿನೆಸ್ಗೆ ಕೈಹಾಕಿದ್ದು ಈ ಇಬ್ಬರಿಗೂ ಕಠಿಣ ಸ್ಪರ್ಧೆಯನ್ನು ಒಡ್ಡಲಿದ್ದಾರೆ.