https://youtube.com/shorts/fD6pvkz7g8c?si=uKQ1N3BMJTvK6QIw
newsics.com
ನಮ್ಮ ಮನೆಗಳಲ್ಲಿ ಎರಡು ರೀತಿಯ ಮಸಾಲೆ ಪದಾರ್ಥಗಳನ್ನು ನಾವು ಬಳಸುತ್ತೇವೆ. ಒಂದು ಮನೆಯಲ್ಲಿಯೇ ಎಲ್ಲಾ ಪದಾರ್ಥಗಳನ್ನು ಸೇರಿಸಿ ಕುಟ್ಟಿ ಪುಡಿ ಮಾಡಿ ತಯಾರಿಸಿದ ಮಸಾಲೆ ಮತ್ತು ಎರಡನೆಯದು ಮಾರುಕಟ್ಟೆಗಳಲ್ಲಿ ಸಿಗುವ ಪ್ಯಾಕೇಟ್ ಮಸಾಲೆ ಪದಾರ್ಥಗಳು ಅಂತ ಹೇಳಬಹುದು. ಈ ಪ್ಯಾಕೇಟ್‌ಗಳಲ್ಲಿ ಹಾಕಿಟ್ಟು ಮಾರುವ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ ಅಂತ ಮೊದಲಿನಿಂದಲೂ ಅನೇಕರು ಹೇಳುತ್ತಲೇ ಬಂದಿದ್ದಾರೆ.
ಇತ್ತೀಚೆಗೆ ನಡೆದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಕಂಪನಿಯ ಕೆಲವು ಉತ್ಪನ್ನಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಕೀಟನಾಶಕ ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾಗಳ ಕುರುಹುಗಳು ಪತ್ತೆಯಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಹಲವು ದೇಶಗಳ ಆಹಾರ ನಿಯಂತ್ರಣ ಸಂಸ್ಥೆಗಳು ಎವರೆಸ್ಟ್ ಮಸಾಲೆ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಹಾನಿಕಾರಕ ರಾಸಾಯನಿಕಗಳಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕೂಡ ದೇಶಾದ್ಯಂತ ಮಸಾಲೆ ಪದಾರ್ಥಗಳ ಗುಣಮಟ್ಟದ ಮೇಲೆ ಕಠಿಣ ನಿಗಾ ವಹಿಸಲು ಸೂಚಿಸಿದೆ.
ಎಂಟರೊಬ್ಯಾಕ್ಟೀರಿಯಾಸಿ ಎಂದರೇನು?
ಪರೀಕ್ಷೆಯ ವರದಿಯಲ್ಲಿ ‘ಎಂಟರೊಬ್ಯಾಕ್ಟೀರಿಯಾಸಿ’ ಎಂಬ ಬ್ಯಾಕ್ಟೀರಿಯಾದ ಗುಂಪು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.ಇದು ಸಾಲ್ಮೊನೆಲ್ಲಾ ಮತ್ತು ಇ-ಕೋಲಿ ನಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುವ ಒಂದು ದೊಡ್ಡ ಗುಂಪು.
ಆರೋಗ್ಯದ ಮೇಲೆ ಪರಿಣಾಮ: ಈ ಬ್ಯಾಕ್ಟೀರಿಯಾ ಮಿಶ್ರಿತ ಆಹಾರ ಸೇವನೆಯಿಂದ ತೀವ್ರವಾದ ಹೊಟ್ಟೆ ನೋವು, ಅತಿಸಾರ , ವಾಂತಿ ಮತ್ತು ಜ್ವರ ಕಾಣಿಸಿಕೊಳ್ಳಬಹುದು.
ಶುಚಿತ್ವದ ಕೊರತೆ: ಆಹಾರ ಸಂಸ್ಕರಣೆಯ ಸಮಯದಲ್ಲಿ ಸರಿಯಾದ ಶುಚಿತ್ವ ಪಾಲಿಸದಿದ್ದರೆ ಅಥವಾ ಕಲುಷಿತ ನೀರು ಬಳಸಿದರೆ ಈ ಬ್ಯಾಕ್ಟೀರಿಯಾಗಳು ಆಹಾರವನ್ನು ಸೇರುತ್ತವೆ.