https://youtube.com/shorts/I7q3Ny48oOg?si=RFP8giogzKefv9jC
newsics.com
ಅಮೆರಿಕ ವಿಧಿಸುತ್ತಿದ್ದ ದುಬಾರಿ ಸುಂಕಗಳನ್ನು ಅಲ್ಲಿನ ನ್ಯಾಯಾಲಯ ಈಗ ಕಾನೂನುಬಾಹಿರ ಅಂತ ಸಾರಿದೆ. ಹೀಗಾಗಿ ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿಗಳನ್ನು (ಸುಮಾರು $166 ಶತಕೋಟಿ) ಕೇವಲ 45 ದಿನಗಳಲ್ಲಿ ವಾಪಸ್ ನೀಡಬೇಕಾದ ಇಕ್ಕಟ್ಟಿಗೆ ಸರ್ಕಾರ ಸಿಲುಕಿದೆ. ಇದರಿಂದಾಗಿ ವಿಶ್ವದಾದ್ಯಂತ ಇರುವ ಆಮದುದಾರರಿಗೆ ಮತ್ತು ವಿಶೇಷವಾಗಿ ನಮ್ಮ ಭಾರತೀಯ ರಫ್ತುದಾರರಿಗೆ ಭಾರಿ ಲಾಭವಾಗಲಿದೆ.
ಈಗಾಗಲೇ ಅಮೆರಿಕದ ಕೋರ್ಟ್ ನೀಡಿರುವ ಆದೇಶದಿಂದಾಗಿ ಸುಂಕಗಳು ಶೇ. 50% ರಿಂದ ನೇರವಾಗಿ 15% ಕ್ಕೆ ಇಳಿಕೆಯಾಗಲಿವೆ. ಇದರಿಂದ ನಮ್ಮ ಭಾರತೀಯ ಉದ್ಯಮಿಗಳಿಗೆ ಹಾಗೂ ರಫ್ತುದಾರರಿಗೆ ಬಿಗ್ ರಿಲೀಫ್ ಸಿಗಲಿದೆ. ಸುಮಾರು 3.3 ಲಕ್ಷ ಆಮದುದಾರರಿಗೆ (3,30,000) ಈ ಬೃಹತ್ ಮೊತ್ತವನ್ನು ಹಿಂದಿರುಗಿಸಲು ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಪಡೆ (CBP) ಹಗಲಿರುಳು ಶ್ರಮಿಸಿ ಹೊಸದೊಂದು ಮರುಪಾವತಿ ವ್ಯವಸ್ಥೆಯನ್ನು ರೆಡಿ ಮಾಡುತ್ತಿದೆ.
ಹಿಂದೆಲ್ಲಾ ಅಮೆರಿಕದಲ್ಲಿ ಸುಂಕ ವಾಪಸ್ ಪಡೆಯಲು ಕೋರ್ಟ್ ಮೆಟ್ಟಿಲೇರಬೇಕಿತ್ತು. ಫೆಡ್ಎಕ್ಸ್ (FedEx) ಮತ್ತು ಲೋರಿಯಲ್ನಂತಹ (L’Oreal) ದೈತ್ಯ ಕಂಪನಿಗಳು ಸೇರಿದಂತೆ ಬರೋಬ್ಬರಿ 2,000ಕ್ಕೂ ಹೆಚ್ಚು ಮೊಕದ್ದಮೆಗಳನ್ನು ಫೆಡರಲ್ ಟ್ರೇಡ್ ನ್ಯಾಯಾಧೀಶ ರಿಚರ್ಡ್ ಈಟನ್ ಅವರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಯುಎಸ್ ಕಸ್ಟಮ್ಸ್ ಅಧಿಕಾರಿ ಬ್ರಾಂಡನ್ ಲಾರ್ಡ್ ಅವರು ಕೋರ್ಟ್ಗೆ ತಿಳಿಸಿರುವಂತೆ, ಹೊಸ ಪ್ರಕ್ರಿಯೆಯಲ್ಲಿ ಆಮದುದಾರರು ಕಂತೆ ಕಂತೆ ದಾಖಲೆಗಳನ್ನು ಸಲ್ಲಿಸುವ ಅಗತ್ಯವೇ ಇಲ್ಲ!
ಈ ದುಡ್ಡು ವಾಪಸ್ ಬರೋದು ಹೇಗೆ ಅಂತೀರಾ? ಕಸ್ಟಮ್ಸ್ ಏಜೆನ್ಸಿ ಪ್ರಸ್ತಾಪಿಸಿರುವ ಹೊಸ ಸಿಸ್ಟಮ್ (ACE – ಆಟೊಮೇಟೆಡ್ ಕಮರ್ಷಿಯಲ್ ಎನ್ವಿರಾನ್ಮೆಂಟ್) ಮೂಲಕ ಆಮದುದಾರರು ತಾವು ಕಟ್ಟಿದ ಸುಂಕದ ಡಿಟೇಲ್ಸ್ ಅನ್ನು ಡಿಕ್ಲರೇಷನ್ ಮೂಲಕ ಸಲ್ಲಿಸಿದರೆ ಸಾಕು. ಅಧಿಕಾರಿಗಳು ಅದನ್ನು ಕ್ರಾಸ್-ಚೆಕ್ ಮಾಡಿ, ಅಮೆರಿಕದ ಖಜಾನೆ ಇಲಾಖೆಯಿಂದ ಬಡ್ಡಿ ಸಮೇತ ಒಂದೇ ಬಾರಿಗೆ ಹಣವನ್ನು ಪಾವತಿ ಮಾಡುತ್ತಾರೆ. ನೀವು ಎಷ್ಟೇ ಸಾಗಾಟಗಳನ್ನು ಮಾಡಿದ್ದರೂ, ಅದಕ್ಕಾಗಿ ಪ್ರತ್ಯೇಕವಾಗಿ ಕೇಸ್ ಹಾಕುವ ಟೆನ್ಷನ್ ಇನ್ಮುಂದೆ ಇರುವುದಿಲ್ಲ.
ಒಂದೇ ಬಾರಿಗೆ 15 ಲಕ್ಷ ಕೋಟಿ ರೂ. ಹಿಂತಿರುಗಿಸುವುದು ತಮಾಷೆಯ ಮಾತಲ್ಲ. ಜಡ್ಜ್ ಆದೇಶ ನೀಡಿದರೂ ಅದನ್ನು ತಕ್ಷಣ ಜಾರಿಗೆ ತರಲು ಹಳೆಯ ಸಿಸ್ಟಮ್ ಸಪೋರ್ಟ್ ಮಾಡುತ್ತಿಲ್ಲ ಎಂದು ಅಧಿಕಾರಿ ಬ್ರಾಂಡನ್ ಲಾರ್ಡ್ ಕೋರ್ಟ್ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ. ಯಾಕಂದ್ರೆ, ಹಳೆಯ ಮ್ಯಾನ್ಯುಯಲ್ ಸಿಸ್ಟಮ್ ಅಡಿಯಲ್ಲಿ ಪ್ರತಿಯೊಂದು ಬಿಲ್ ಅನ್ನು ಪ್ರತ್ಯೇಕವಾಗಿ ಪರಿಶೀಲಿಸಿ ದುಡ್ಡು ವಾಪಸ್ ಕೊಡಲು 40 ಲಕ್ಷ ಗಂಟೆಗಳಿಗಿಂತ ಹೆಚ್ಚು ಮಾನವ ಶ್ರಮ ಬೇಕು. ಇದೇ ಕಾರಣಕ್ಕೆ ಹೊಸ ಹೈಟೆಕ್ ಟೆಕ್ನಾಲಜಿ ಬಳಸಿಕೊಂಡು ದುಡ್ಡು ಸೆಟಲ್ ಮಾಡಲು ಕೋರ್ಟ್ ಇಲಾಖೆಗೆ ಸ್ವಲ್ಪ ಸಮಯಾವಕಾಶ ನೀಡಿದೆ.
Iran- Israel Conflict: ತೈಲ ಬೆಲೆ ಏರಿಸಿದ ರಷ್ಯಾ: ಹೆಚ್ಚಾಯ್ತು ಭಾರತದ ಟೆನ್ಶನ್