https://youtube.com/shorts/I7q3Ny48oOg?si=RFP8giogzKefv9jC
newsics.com
ಮಹಿಳಾ ದಿನದ ಅಂಗವಾಗಿ, ಝೀಲೋ ಎಲೆಕ್ಟ್ರಿಕ್ಸ್ ವಿಶೇಷವಾಗಿ ಮಹಿಳೆಯರಿಗಾಗಿ ‘ನೈಟ್+ ರಾಣಿ’ ಆವೃತ್ತಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಂಕೇತವಾಗಿ ‘ರಾಣಿ’ ಎಂಬ ಹೆಸರನ್ನು ಹೊಂದಿದೆ.
ಝೀಲೋ ಎಲೆಕ್ಟ್ರಿಕ್ಸ್ ಮಹಿಳೆ ದಿನಾಚರಣೆ ಯ ದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದು, ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ವಿಶೇಷವಾಗಿ ಮಹಿಳೆಯರಿಗೆ ಮಾಡಲಾಗಿರುವ ಸ್ಕೂಟರ್ ಆಗಿದೆ. ಎಲೆಕ್ಟ್ರಿಕ್ ಸ್ಕೂಟರ್ ನೈಟ್+ ರಾಣಿ (Knight+ Rani Edition) ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಭಾರತದಾದ್ಯಂತ ಕೇವಲ 999 ಯೂನಿಟ್ಗಳನ್ನು ಮಾತ್ರ ಆರಂಭದಲ್ಲಿ ನೀಡಲಾಗುತ್ತದೆ. ಸ್ಕೂಟರ್ ಹೆಚ್ಚಿನ ಮಹಿಳೆಯರಿಗೆ ಇಷ್ಟವಾಗುವ ಬೇಬಿ ಪಿಂಕ್ ಬಾಡಿ ಕಲರ್ ಹೊಂದಿದ್ದು, ಬಿಳಿ ಬಣ್ಣದ ಪ್ಯಾನಲ್ಗಳು ಇವೆ.
ಝೀಲೋ ನೈಟ್+ ರಾಣಿ ಆವೃತ್ತಿಯ ಬುಕಿಂಗ್ಗಳು ಕಂಪನಿಯ ಅಧಿಕೃತ ಡೀಲರ್ ನೆಟ್ವರ್ಕ್ ಮೂಲಕ ತೆರೆದಿರುತ್ತವೆ. ಅಂದಹಾಗೆ ಇದರ ಬೆಲೆ ಕೇವಲ 69,990 (ಎಕ್ಸ್-ಶೋರೂಂ).
ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಣಿ ಎನ್ನುವ ಹೆಸರನ್ನು ಇಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ‘ರಾಣಿ’ ಎಂಬ ಪದವು ಶಕ್ತಿ ಮತ್ತು ವ್ಯಕ್ತಿತ್ವದ ಸಂಕೇತವಾಗಿದೆ. ಇದೇ ಕಾರಣಕ್ಕೆ ಈ ಹೆಸರನ್ನು ಇಡಲಾಗಿದೆ ಎಂದು ಝೀಲೋ ಎಲೆಕ್ಟ್ರಿಕ್ನ ಸಹ-ಸಂಸ್ಥಾಪಕ ಮುಕುಂದ್ ಬಹೇತಿ ಹೇಳಿದರು.
ಈ ಸ್ಕೂಟರ್ 1.8 kWh ಪೋರ್ಟಬಲ್ LFP ಬ್ಯಾಟರಿಯನ್ನು 100 ಕಿಮೀ ವ್ಯಾಪ್ತಿಯೊಂದಿಗೆ ಬಳಸುತ್ತದೆ. ಇದನ್ನು 1.5 kW ಮೋಟಾರ್ನೊಂದಿಗೆ ಜೋಡಿಸಲಾಗಿದೆ ಮತ್ತು ಪ್ರತಿ ಗಂಟೆಗೆ 55 ಕಿಲೋ ಮೀಟರ್ ಗರಿಷ್ಠ ವೇಗವನ್ನು ಹೊಂದಿದೆ.
ಹಿಲ್ ಹೋಲ್ಡ್ ಕಂಟ್ರೋಲ್, ದೀರ್ಘ ಮಾರ್ಗಗಳಲ್ಲಿ ಸ್ಥಿರ ಸವಾರಿಗಾಗಿ ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ನಂತರ ಸಂಕ್ಷಿಪ್ತವಾಗಿ ಆನ್ ಆಗುವ ಫಾಲೋ-ಮಿ-ಹೋಮ್ ಹೆಡ್ಲ್ಯಾಂಪ್ಗಳು, ಸಾಧನಗಳಿಗೆ USB ಚಾರ್ಜಿಂಗ್ ಪೋರ್ಟ್ ಮತ್ತು ಪ್ರತ್ಯೇಕವಾಗಿ ಚಾರ್ಜ್ ಮಾಡಬಹುದಾದ ತೆಗೆಯಬಹುದಾದ ಬ್ಯಾಟರಿ ಇವುಗಳ ವೈಶಿಷ್ಟ್ಯಗಳಾಗಿವೆ.
Iran- Israel Conflict: ತೈಲ ಬೆಲೆ ಏರಿಸಿದ ರಷ್ಯಾ: ಹೆಚ್ಚಾಯ್ತು ಭಾರತದ ಟೆನ್ಶನ್