Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಮೆರಿಕಕ್ಕೆ ಸುಂಕದ ಪೆಟ್ಟು; ಭಾರತೀಯ ರಫ್ತುದಾರರಿಗೆ ಹೊಡೆಯಲಿದೆ ಬಂಪರ್ ಲಾಟರಿ!
ಪ್ರಮುಖವಿದೇಶ

ಅಮೆರಿಕಕ್ಕೆ ಸುಂಕದ ಪೆಟ್ಟು; ಭಾರತೀಯ ರಫ್ತುದಾರರಿಗೆ ಹೊಡೆಯಲಿದೆ ಬಂಪರ್ ಲಾಟರಿ!

Share
2 Min Read
SHARE

https://youtube.com/shorts/I7q3Ny48oOg?si=RFP8giogzKefv9jC

newsics.com

ಅಮೆರಿಕ ವಿಧಿಸುತ್ತಿದ್ದ ದುಬಾರಿ ಸುಂಕಗಳನ್ನು ಅಲ್ಲಿನ ನ್ಯಾಯಾಲಯ ಈಗ ಕಾನೂನುಬಾಹಿರ ಅಂತ ಸಾರಿದೆ. ಹೀಗಾಗಿ ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿಗಳನ್ನು (ಸುಮಾರು $166 ಶತಕೋಟಿ) ಕೇವಲ 45 ದಿನಗಳಲ್ಲಿ ವಾಪಸ್ ನೀಡಬೇಕಾದ ಇಕ್ಕಟ್ಟಿಗೆ ಸರ್ಕಾರ ಸಿಲುಕಿದೆ. ಇದರಿಂದಾಗಿ ವಿಶ್ವದಾದ್ಯಂತ ಇರುವ ಆಮದುದಾರರಿಗೆ ಮತ್ತು ವಿಶೇಷವಾಗಿ ನಮ್ಮ ಭಾರತೀಯ ರಫ್ತುದಾರರಿಗೆ ಭಾರಿ ಲಾಭವಾಗಲಿದೆ.

ಈಗಾಗಲೇ ಅಮೆರಿಕದ ಕೋರ್ಟ್ ನೀಡಿರುವ ಆದೇಶದಿಂದಾಗಿ ಸುಂಕಗಳು ಶೇ. 50% ರಿಂದ ನೇರವಾಗಿ 15% ಕ್ಕೆ ಇಳಿಕೆಯಾಗಲಿವೆ. ಇದರಿಂದ ನಮ್ಮ ಭಾರತೀಯ ಉದ್ಯಮಿಗಳಿಗೆ ಹಾಗೂ ರಫ್ತುದಾರರಿಗೆ ಬಿಗ್ ರಿಲೀಫ್ ಸಿಗಲಿದೆ. ಸುಮಾರು 3.3 ಲಕ್ಷ ಆಮದುದಾರರಿಗೆ (3,30,000) ಈ ಬೃಹತ್ ಮೊತ್ತವನ್ನು ಹಿಂದಿರುಗಿಸಲು ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಪಡೆ (CBP) ಹಗಲಿರುಳು ಶ್ರಮಿಸಿ ಹೊಸದೊಂದು ಮರುಪಾವತಿ ವ್ಯವಸ್ಥೆಯನ್ನು ರೆಡಿ ಮಾಡುತ್ತಿದೆ.

ಹಿಂದೆಲ್ಲಾ ಅಮೆರಿಕದಲ್ಲಿ ಸುಂಕ ವಾಪಸ್ ಪಡೆಯಲು ಕೋರ್ಟ್ ಮೆಟ್ಟಿಲೇರಬೇಕಿತ್ತು. ಫೆಡ್‌ಎಕ್ಸ್ (FedEx) ಮತ್ತು ಲೋರಿಯಲ್‌ನಂತಹ (L’Oreal) ದೈತ್ಯ ಕಂಪನಿಗಳು ಸೇರಿದಂತೆ ಬರೋಬ್ಬರಿ 2,000ಕ್ಕೂ ಹೆಚ್ಚು ಮೊಕದ್ದಮೆಗಳನ್ನು ಫೆಡರಲ್ ಟ್ರೇಡ್ ನ್ಯಾಯಾಧೀಶ ರಿಚರ್ಡ್ ಈಟನ್ ಅವರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಯುಎಸ್ ಕಸ್ಟಮ್ಸ್ ಅಧಿಕಾರಿ ಬ್ರಾಂಡನ್ ಲಾರ್ಡ್ ಅವರು ಕೋರ್ಟ್‌ಗೆ ತಿಳಿಸಿರುವಂತೆ, ಹೊಸ ಪ್ರಕ್ರಿಯೆಯಲ್ಲಿ ಆಮದುದಾರರು ಕಂತೆ ಕಂತೆ ದಾಖಲೆಗಳನ್ನು ಸಲ್ಲಿಸುವ ಅಗತ್ಯವೇ ಇಲ್ಲ!

ಈ ದುಡ್ಡು ವಾಪಸ್ ಬರೋದು ಹೇಗೆ ಅಂತೀರಾ? ಕಸ್ಟಮ್ಸ್ ಏಜೆನ್ಸಿ ಪ್ರಸ್ತಾಪಿಸಿರುವ ಹೊಸ ಸಿಸ್ಟಮ್ (ACE – ಆಟೊಮೇಟೆಡ್ ಕಮರ್ಷಿಯಲ್ ಎನ್ವಿರಾನ್ಮೆಂಟ್) ಮೂಲಕ ಆಮದುದಾರರು ತಾವು ಕಟ್ಟಿದ ಸುಂಕದ ಡಿಟೇಲ್ಸ್ ಅನ್ನು ಡಿಕ್ಲರೇಷನ್ ಮೂಲಕ ಸಲ್ಲಿಸಿದರೆ ಸಾಕು. ಅಧಿಕಾರಿಗಳು ಅದನ್ನು ಕ್ರಾಸ್-ಚೆಕ್ ಮಾಡಿ, ಅಮೆರಿಕದ ಖಜಾನೆ ಇಲಾಖೆಯಿಂದ ಬಡ್ಡಿ ಸಮೇತ ಒಂದೇ ಬಾರಿಗೆ ಹಣವನ್ನು ಪಾವತಿ ಮಾಡುತ್ತಾರೆ. ನೀವು ಎಷ್ಟೇ ಸಾಗಾಟಗಳನ್ನು ಮಾಡಿದ್ದರೂ, ಅದಕ್ಕಾಗಿ ಪ್ರತ್ಯೇಕವಾಗಿ ಕೇಸ್ ಹಾಕುವ ಟೆನ್ಷನ್ ಇನ್ಮುಂದೆ ಇರುವುದಿಲ್ಲ.

ಒಂದೇ ಬಾರಿಗೆ 15 ಲಕ್ಷ ಕೋಟಿ ರೂ. ಹಿಂತಿರುಗಿಸುವುದು ತಮಾಷೆಯ ಮಾತಲ್ಲ. ಜಡ್ಜ್ ಆದೇಶ ನೀಡಿದರೂ ಅದನ್ನು ತಕ್ಷಣ ಜಾರಿಗೆ ತರಲು ಹಳೆಯ ಸಿಸ್ಟಮ್ ಸಪೋರ್ಟ್ ಮಾಡುತ್ತಿಲ್ಲ ಎಂದು ಅಧಿಕಾರಿ ಬ್ರಾಂಡನ್ ಲಾರ್ಡ್ ಕೋರ್ಟ್ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ. ಯಾಕಂದ್ರೆ, ಹಳೆಯ ಮ್ಯಾನ್ಯುಯಲ್ ಸಿಸ್ಟಮ್ ಅಡಿಯಲ್ಲಿ ಪ್ರತಿಯೊಂದು ಬಿಲ್ ಅನ್ನು ಪ್ರತ್ಯೇಕವಾಗಿ ಪರಿಶೀಲಿಸಿ ದುಡ್ಡು ವಾಪಸ್ ಕೊಡಲು 40 ಲಕ್ಷ ಗಂಟೆಗಳಿಗಿಂತ ಹೆಚ್ಚು ಮಾನವ ಶ್ರಮ ಬೇಕು. ಇದೇ ಕಾರಣಕ್ಕೆ ಹೊಸ ಹೈಟೆಕ್ ಟೆಕ್ನಾಲಜಿ ಬಳಸಿಕೊಂಡು ದುಡ್ಡು ಸೆಟಲ್ ಮಾಡಲು ಕೋರ್ಟ್ ಇಲಾಖೆಗೆ ಸ್ವಲ್ಪ ಸಮಯಾವಕಾಶ ನೀಡಿದೆ.

Iran- Israel Conflict: ತೈಲ ಬೆಲೆ ಏರಿಸಿದ ರಷ್ಯಾ: ಹೆಚ್ಚಾಯ್ತು ಭಾರತದ ಟೆನ್ಶನ್

TAGGED:US tariffs hit; Indian exporters set to be hit by bumper lottery!
Share This Article
Facebook Twitter Copy Link Print
Previous Article ಮದುವೆ ಕಾರ್ಯಕ್ರಮದಲ್ಲಿ ತ್ರಿಶಾ ಕೃಷ್ಣನ್ ಜೊತೆ ಕಾಣಿಸಿಕೊಂಡ ವಿಜಯ್; ನಟನ ಬಾಡಿಗಾರ್ಡ್ ರಹಸ್ಯ ಪೋಸ್ಟ್!
Next Article ಮಹಿಳಾ ದಿನಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ!

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?