newsics.com
ತೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ ಭೀಕರ ಸ್ವರೂಪ ಪಡೆದುಕೊಂಡಿದೆ. ಇಂದು (ಮಾರ್ಚ್ 7) ಮುಂಜಾನೆ ಇಸ್ರೇಲ್ ವಾಯುಪಡೆ ನಡೆಸಿದ ದಿಢೀರ್ ದಾಳಿಗೆ ತೆಹ್ರಾನ್ನ ಅತ್ಯಂತ ಪ್ರಮುಖ ಮೆಹ್ರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತತ್ತರಿಸಿದೆ.
ಸರಣಿ ಕ್ಷಿಪಣಿ ದಾಳಿಯಿಂದಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಪ್ರದೇಶ ದಟ್ಟ ಹೊಗೆಯಿಂದ ಆವೃತವಾಗಿದೆ.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ವಿಮಾನ ನಿಲ್ದಾಣದ ಸಮೀಪವಿರುವ ಎಕ್ಬಾಟನ್ ನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ವಿಮಾನ ನಿಲ್ದಾಣದ ರನ್-ವೇ ಮತ್ತು ಇಂಧನ ಸಂಗ್ರಹಾಗಾರಗಳ ಬಳಿ ಭಾರಿ ಬೆಂಕಿ ಉರಿಯುತ್ತಿರುವುದು ಕಂಡುಬಂದಿದೆ.
ಮೆಹ್ರಾಬಾದ್ ಕೇವಲ ಪ್ರಯಾಣಿಕ ವಿಮಾನ ನಿಲ್ದಾಣವಲ್ಲ, ಇದು ಇರಾನ್ ಸೇನೆಯ ಪ್ರಮುಖ ಲಾಜಿಸ್ಟಿಕ್ ಹಬ್ ಕೂಡ ಹೌದು. ಇಸ್ರೇಲ್ ಸೈನ್ಯವು (IDF) ಈ ತಾಣವನ್ನು ಇರಾನ್ ಸರ್ಕಾರದ ಪ್ರಮುಖ ಮೂಲಸೌಕರ್ಯ ಎಂದು ಗುರಿಯಾಗಿಸಿಕೊಂಡು ದಾಳಿ ಮಾಡಿದೆ.