newsics.com
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಪುತ್ರಿ ಸುಹಾನಾ ಖಾನ್ ಸದಾ ಸುದ್ದಿಲ್ಲಿಯೇ ಇರ್ತಾರೆ. ಮಾಡಿರೋ ಒಂದೇ ಒಂದು ಚಿತ್ರವಾದ್ರೂ ವೈರಲ್ ಆಗೋದು ಜಾಸ್ತಿನೇ ನೋಡಿ. ಧರಿಸೋ ಬಟ್ಟೆ ಮತ್ತು ಬೋಲ್ಡ್ ನೇಚರ್‌ನಿಂದಲೂ ಎಲ್ಲರ ಸೆಳೆಯುತ್ತಾರೆ.
ಬಾಲಿವುಡ್ ಯುವ ನಟಿ ಸುಹಾನಾ ಖಾನ್ ಸ್ಪೆಷಲ್ ಆಗಿಯೇ ಕಾಣಿಸುತ್ತಿದ್ದಾರೆ. ಡಿಸೈನರ್ ಲೆಹೆಂಗಾ ತೊಟ್ಟ ಸುಹಾನಾ ಅಷ್ಟೆ ಸುಂದರವಾಗಿಯೆ ಕಾಣಿಸುತ್ತಿದ್ದಾರೆ. ಮಲ್ಟಿ ಕಲರ್ ಇರೋ ಈ ಲೆಹೆಂಗಾದಲ್ಲಿ ಪಿಂಕ್ ಬಣ್ಣವೂ ಇದೆ. ಗೋಲ್ಡನ್ ಕಲರ್ ದುಪಟ್ಟಾ ಕೂಡ ಇದೆ.
ತಿಳಿ ನೇರಳೆ ಬಣ್ಣದ ಬ್ಯಾಂಗ್ರೌಂಡ್ ಅಲ್ಲಿಯೇ ಈ ಒಂದು ಫೋಟೋ ಶೂಟ್ ಮಾಡಲಾಗಿದೆ. ಸುಹಾನಾ ಖಾನ್ ಕೂಡ ಅಷ್ಟೆ ಚೆನ್ನಾಗಿಯೇ ಇಲ್ಲಿ ಪೋಸ್ ಕೊಟ್ಟಿದ್ದಾರೆ. ಪ್ರತಿ ಫೋಟೋದಲ್ಲೂ ಒಂದು ವಿಶೇಷ ಹೊಳಪು ಕೂಡ ಇದೆ. ಒಳ್ಳೆ ಲೈಟಿಂಗ್ ಅಲ್ಲಿಯೇ ಇಡೀ ಫೊಟೋ ಶೂಟ್ ಮಾಡಲಾಗಿದೆ.
ಸುಹಾನಾ ಖಾನ್ ಈ ಫೋಟೋ ಶೂಟ್ ಅಲ್ಲಿ ಹೆಚ್ಚಾಗಿ ಕುಳಿತುಕೊಂಡ ಜಾಗದಲ್ಲಿಯೇ ಹಲವು ಪೋಸ್ ಕೊಟ್ಟಿದ್ದಾರೆ. ಈ ಪೋಸ್‌ಗಳಲ್ಲಿ ಭಿನ್ನ ವಿಭಿನ್ನ ಅನಿಸೋ ಎಕ್ಸಪ್ರೆಷನ್ ಕೊಟ್ಟಿದ್ದಾರೆ. ಹಾಗೆ ಕೊಟ್ಟ ಪ್ರತಿ ಎಕ್ಸಪ್ರೆಷನ್ ಅಲ್ಲೂ ತಾಜಾ ಫೀಲ್ ಇದೆ. ಕಣ್ಣಲ್ಲಿ ಅದೇನೋ ಒಂದು ಹೊಳಪು ಕಾಣಿಸುತ್ತದೆ.