Subscribe ನ್ಯೂಸಿಕ್ಸ್ ಕನ್ನಡ
newsics.com
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಸಂಭ್ರಮ ಇನ್ನೂ ಮುಗಿದಿಲ್ಲ. ಈ ಖುಷಿಯನ್ನು ಅಭಿಮಾನಿಗಳು ಇನ್ನೂ ಆಚರಿಸುತ್ತಿರುವಾಗಲೇ ಫ್ಯಾನ್ಸ್ಗೆ ಒಂದು ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಅವರ ಮುಂದಿನ ಚಿತ್ರ ‘ರಣಬಾಲಿ’ ಚಿತ್ರದ ಮೊದಲ ಪೋಸ್ಟರ್ನ ಹಾಡಿನ ಜೊತೆ ರಿವೀಲ್ ಮಾಡಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಮೊದಲ ಬಾರಿಗೆ ಭೇಟಿ ಆಗಿದ್ದು ‘ಗೀತ ಗೋವಿಂದಂ’ ಚಿತ್ರದ ಸೆಟ್ ಅಲ್ಲಿ. ಮೊದಲ ಭೇಟಿಗೆ ಸುಮಾರು 9 ವರ್ಷಗಳು ತುಂಬುತ್ತಿವೆ. ಆ ಬಳಿಕ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಇವರು ಒಟ್ಟಾಗಿ ನಟಿಸಿದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಈ ಮಧ್ಯೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಕಡೆಯಿಂದ ಒಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ.
ರಶ್ಮಿಕಾ ಹಾಗೂ ವಿಜಯ್ ಮುಂದಿನ ಚಿತ್ರಕ್ಕೆ ‘ರಣಬಾಲಿ’ ಎಂದು ಹೆಸರು ಇಡಲಾಗಿದೆ. ವಿಜಯ್ ಅವರು ರಾಣಬಾಲಿಯಾಗಿ ರಶ್ಮಿಕಾ ಮಂದಣ್ಣ ಅವರು ಜಯಮ್ಮನಾಗಿ ಗಮನ ಸೆಳೆಯುತ್ತಿದ್ದಾರೆ. ಸಾಂಗ್ ಮೂಲಕ ಮೊದಲ ಪೋಸ್ಟರ್ ರಿವೀಲ್ ಆಗಿದೆ. ಡಿ ಗ್ಲಾಮ್ ಲುಕ್ ಅಲ್ಲಿ ಇವರು ಗಮನ ಸೆಳೆದಿದ್ದಾರೆ. ತೆರೆಮೇಲೆ ಹಾಗೂ ತೆರೆ ಹಿಂದೆ ಇವರ ಕೆಮಿಸ್ಟ್ರಿ ಗಮನ ಸೆಳೆಯೋ ರೀತಿಯಲ್ಲಿ ಇದೆ. ರಾಹುಲ್ ಸಂಕ್ರಿತ್ಯನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾ ಇದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವಿಷಯದ ಕುರಿತೇ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇವರು ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಬಗ್ಗೆ ಮಾಹಿತಿ ಕೊಟ್ಟರೆ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಂತೆ ಆಗುತ್ತದೆ ಎಂಬುದು ಚಿತ್ರತಂಡದ ಆಲೋಚನೆ. ಈ ಸಿನಿಮಾ ಈ ವರ್ಷವೇ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿದೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ. ರವಿ ಶಂಕರ್ ನಿರ್ಮಿಸಿದ್ದಾರೆ ಮತ್ತು ಟಿ-ಸಿರೀಸ್ ಪ್ರಸ್ತುತಪಡಿಸಿದೆ. ಚಿತ್ರವು ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಕಥೆ 19ನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಸಮಯದಲ್ಲಿ ನಡೆದ ನಿಜ ಘಟನೆಗಳಿಂದ ಪ್ರೇರಿತವಾಗಿದೆ. ವಿಜಯ್ ಮತ್ತು ರಶ್ಮಿಕಾ ಅವರ ಮದುವೆಯ ನಂತರ ಅವರ ಮೊದಲ ಚಿತ್ರ ಇದಾಗಿದೆ.
https://youtu.be/yLKKz4-M_y8?si=KECQx6a2BokYULXL
ತೆಂಗಿನ ನಾರಿನಿಂದ ಮಾಡಿದ ಈ ಪಾತ್ರೆ ತೊಳೆಯೊ ಸ್ಕ್ರಬ್ಬರ್ ಗಟ್ಟಿಮುಟ್ಟಾಗಿರುತ್ತೆ