Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸರ್ಕಾರದಿಂದ Guidance Value ಪರಿಷ್ಕರಣೆ : ಭಾರೀ ಹೊರೆಯಾಗಲಿದೆ ಸ್ಟ್ಯಾಂಪ್ ಡ್ಯೂಟಿ
ಕರ್ನಾಟಕಪ್ರಮುಖ

ಸರ್ಕಾರದಿಂದ Guidance Value ಪರಿಷ್ಕರಣೆ : ಭಾರೀ ಹೊರೆಯಾಗಲಿದೆ ಸ್ಟ್ಯಾಂಪ್ ಡ್ಯೂಟಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಕರ್ನಾಟಕ ಸರ್ಕಾರ ಮತ್ತೆ ಶಾಕ್ ನೀಡಲು ಮುಂದಾಗಿದೆ. ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ಜಮೀನು ಮತ್ತು ಕಟ್ಟಡಗಳ ಮಾರ್ಗದರ್ಶಿ ಮೌಲ್ಯದಲ್ಲಿ ಭಾರೀ ಪರಿಷ್ಕರಣೆಯನ್ನು ತರಲು ಕಂದಾಯ ಇಲಾಖೆ ಮುಂದಾಗಿದೆ.
ಸರ್ಕಾರದ ಮೂಲಗಳ ಪ್ರಕಾರ, ಗೈಡೆನ್ಸ್ ವ್ಯಾಲ್ಯೂನಲ್ಲಿ ಶೇ. 15 – 20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಇನ್ನೂ ಸರ್ಕಾರ ತೆಗೆದುಕೊಂಡಿಲ್ಲ. ಉದ್ದೇಶಿತ ಟಾರ್ಗೆಟ್ ತಲುಪದ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗುವ ಸಾಧ್ಯತೆಯಿದೆ.
ಮಾರ್ಗದರ್ಶಿ ಮೌಲ್ಯವನ್ನು ಹೆಚ್ಚಿಸಿದರೆ ನೇರವಾಗಿ ಮುದ್ರಾಂಕ ಶುಲ್ಕ (Stamp Duty) ಮತ್ತು ನೋಂದಣಿ ಶುಲ್ಕಗಳ (Registration Fees) ಮೇಲೆ ಇದರ ಪರಿಣಾಮ ಬೀರಲಿದೆ. ಕಂದಾಯ ಇಲಾಖೆಯಿಂದ ಕೊಟ್ಟ ಟಾರ್ಗೆಟ್ ರೀಚ್ ಆಗದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಬಹುದು ಎಂದು ಹೇಳಲಾಗುತ್ತಿದೆ. ಆಸ್ತಿ ನೋಂದಣಿಯಿಂದ ಬರುತ್ತಿರುವ ಆದಾಯದಲ್ಲಿ ಕೊರತೆಯನ್ನು ನೀಗಿಸಲು ಸರ್ಕಾರ ಈ ದಾರಿಯನ್ನು ಹಿಡಿಯಬಹುದು.
ಗೈಡೆನ್ಸ್ ವ್ಯಾಲ್ಯೂ ಏಪ್ರಿಲ್ ಒಂದರಿಂದ ಅಧಿಕ?
ಪರಿಷ್ಕೃತ ಮಾರ್ಗದರ್ಶಿ ಮೌಲ್ಯವನ್ನು ಜಾರಿಗೆ ತರಲು ಮತ್ತು ಇದಕ್ಕೆ ಸಂಬಂಧಿಸಿದ ಕರಡನ್ನು ಆದಷ್ಟು ಬೇಗ ಪ್ರಕಟಿಸಲು, ಕರ್ನಾಟಕ ಸರ್ಕಾರ, ನೋಂದಣಿ ಇಲಾಖೆಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ಹೊಸ ದರ ಜಾರಿಗೆ ಬರಬಹುದು. ಕಂದಾಯ ಇಲಾಖೆಯ ಕಾನೂನಿನ ಪ್ರಕಾರ, ಗೈಡೆನ್ಸ್ ವ್ಯಾಲ್ಯೂವನ್ನು ಪ್ರತೀ ವರ್ಷ ಬದಲಾಯಿಸಬಹುದು.
ಕಳೆದ ಬಾರಿ ಅಂದರೆ ಅಕ್ಟೋಬರ್ 2023ರಲ್ಲಿ ಸ್ಟ್ಯಾಂಪ್ ಡ್ಯೂಟಿ ಮೊತ್ತವನ್ನು ಹೆಚ್ಚಿಸಲಾಗಿತ್ತು. ಮೌಲ್ಯಮಾಪನ ಸಮಿತಿಯು, ಶುಲ್ಕ ಪರಿಷ್ಕರಣೆಗೆ ಶಿಫಾರಸನ್ನು ಮಾಡಿದೆ ಎಂದು ಹೇಳಲಾಗುತ್ತಿದೆ.
ನಿಗದಿತ ಗುರಿ ತಲುಪದ ಕಂದಾಯ ಇಲಾಖೆ
ಇ-ಖಾತಾ ಕಡ್ಡಾಯಗೊಳಿಸಿದ ನಂತರ ಆಸ್ತಿ ನೋಂದಣಿಯಲ್ಲಿ ಸಮಸ್ಯೆಗಳು ಉಂಟಾಗಿತ್ತು. ಹಾಗಾಗಿ, ನಿಗದಿ ಪಡಿಸಿದ್ದ ಗುರಿಯನ್ನು 28 ಸಾವಿರ ಕೋಟಿಯಿಂದ 25 ಸಾವಿರ ಕೋಟಿಗೆ ಇಳಿಸಲಾಗಿತ್ತು. ಹಾಗಾಗಿ, ಮೂರು ಸಾವಿರ ಕೋಟಿ ಆದಾಯದ ಕೊರತೆಯ ಹಿನ್ನಲೆಯಲ್ಲಿ, ಇದನ್ನು ಸರಿದೂಗಿಸಲು ಸರ್ಕಾರ, ಗೈಡೆನ್ಸ್ ವ್ಯಾಲ್ಯೂ ಹೆಚ್ಚಿಸಬಹುದು.
ಸದ್ಯ, ಸರ್ಕಾರ ಗೈಡೆನ್ಸ್ ವ್ಯಾಲ್ಯೂ ಮೇಲೆ ಶೇ. 5ರಷ್ಟು ಸ್ಟ್ಯಾಂಪ್ ಡ್ಯೂಟಿ, ಶೇ. 2ರಷ್ಟು ನೋಂದಣಿ ಶುಲ್ಕ ಮತ್ತು ಶೇ. 0.60ರಷ್ಟು ಸೆಸ್ ಮತ್ತು ಸರ್ಚಾರ್ಜ್ ಅನ್ನು ವಿಧಿಸುತ್ತದೆ. ಅಂದರೆ, ಒಟ್ಟಾರೆಯಾಗಿ ಆಸ್ತಿ ಖರೀದಿದಾರರು ಶೇ. 7.60 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈಗ, ಅದನ್ನು ಶೇ. 15 – 20ಕ್ಕೆ ಸರ್ಕಾರ ಹೆಚ್ಚಿಸುವ ಸಾಧ್ಯತೆಯಿದೆ.
ಸ್ವಯಂ ಚಾಲಿತ ಮ್ಯುಟೇಷನ್ – ಸಚಿವ ಕೃಷ್ಣ ಬೈರೇಗೌಡ ಹೇಳಿಕೆ

ಕಂದಾಯ ಇಲಾಖೆಯಲ್ಲಿ ಸ್ವಯಂ ಚಾಲಿತ ಮ್ಯುಟೇಷನ್ ಪದ್ದತಿಯನ್ನು ಸಚಿವಾಲಯ ಜಾರಿಗೆ ತಂದಿದೆ. ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆಬಾಗಿಲಿಗೇ ತಲುಪಿಸಬೇಕು ಎಂಬ ಸರ್ಕಾರದ ಉದ್ದೇಶ ಇದರಿಂದ ಈಡೇರಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ ಪಟ್ಟಿದ್ದಾರೆ.

“ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದರೆ 7 ದಿನ ನೊಟೀಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದ ಮೂಲಕ ತಕರಾರು ಸಲ್ಲಿಸಬಹುದು. ಯಾರೂ ತಕರಾರು ಸಲ್ಲಿಸದಿದ್ದರೆ ಎಂಟನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ” ಎಂದು ಸಚಿವರು ಹೇಳಿದ್ದಾರೆ.

ರಣ್ಬೀರ್- ಆಲಿಯಾ, ಸಿದ್ಧ್-ಕಿಯಾರಾ ದಾಖಲೆ ಮುರಿದ ರಶ್ಮಿಕಾ ಮಂದಣ್ಣ

TAGGED:Government revises Guidance Value: Will stamp duty and registration fees become a heavy burden?
Share This Article
Facebook Twitter Copy Link Print
Previous Article ರಣ್ಬೀರ್- ಆಲಿಯಾ, ಸಿದ್ಧ್-ಕಿಯಾರಾ ದಾಖಲೆ ಮುರಿದ ರಶ್ಮಿಕಾ ಮಂದಣ್ಣ
Next Article ವಿಕಲಚೇತನ ಯುವಕನನ್ನು ಬಲೆಗೆ ಬೀಳಿಸಿ ಅತ್ಯಾಚಾರಕ್ಕೆ ಯತ್ನಿಸಿದ ಮಹಿಳೆ.!

Popular Posts

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?