Subscribe ನ್ಯೂಸಿಕ್ಸ್ ಕನ್ನಡ
newsics.com
ಯಾದಗಿರಿ: ಮಲ್ಲಿಕಾರ್ಜುನ ಮುತ್ಯಾ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಠ ಮಾಡ್ಕೊಂಡಿರೋ ಮುತ್ಯಾ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿ. ಯಾದಗಿರಿ, ಕಲಬರುಗಿ, ರಾಯಚೂರು, ವಿಜಯಪುರ, ಪಕ್ಕದ ತೆಲಂಗಾಣದ ಎರಡ್ಮೂರು ಜಿಲ್ಲೆಯಲ್ಲೂ ಈ ಸ್ವಯಂಘೋಷಿತ ದೇವಮಾನವ ಫುಲ್ ಫೇಮಸ್. ಮುತ್ಯಾನ ಅದೆಷ್ಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಆದ್ರೆ, ಇದೊಂದು ವಿಡಿಯೋ ಈಗ ಮುತ್ಯಾನಿಗೆ ಕಂಟಕ ತಂದೊಡ್ಡಿದೆ.ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಪರಾರಿಯಾಗಿರುವ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಈ ಬೆನ್ನಲ್ಲೇ ಇತ್ತ ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಪ್ರಾಪ್ತ ಬಾಲಕಿ ಪೋಷಕರಿಂದು ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಲಾಗಿದೆ. ನಮ್ಮ ಕುಟುಂಬ ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರೇ ಇದ್ದೇವೆ. ಸುಮಾರು ಮೂರು ನಾಲ್ಕು ವರ್ಷದಿಂದ ಮಲ್ಲಿಕಾರ್ಜುನ ದರ್ಶನಾಶೀರ್ವಾದ ಪಡೆಯಲು ಹೋಗುತ್ತೇವೆ. ಮಗಳ ಹುಟ್ಟುಹಬ್ಬಕ್ಕೆ ಆಶೀರ್ವಾದ ಪಡೆಯಲು ಕುಟುಂಬಸ್ಥರು ಅಪ್ಪಾಜಿ ಮಠಕ್ಕೆ ಹೋಗಿದ್ದೇವು.
ಆಶೀರ್ವಾದ ಕೊಟ್ಟರು. ನಾವು ಅದನ್ನು ಖುಷಿಯಾಗಿ ವಿಡಿಯೋ ಮಾಡಿದ್ದೇವೆ. ನಮ್ಮ ಸ್ಟೇಟಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಆಶೀರ್ವಾದ ಅಂತ ಹಾಕಿದ್ದೇವೆ. ಆದರೆ ಕಿಡಿಗೇಡಿಗಳು ವಿಡಿಯೋ ತಿರುಚಿ ವೈರಲ್ ಮಾಡಿದ್ದಾರೆ. ಪೊಲೀಸ್ ಇಲಾಖೆ ಸೇರಿ ಎಲ್ಲಿ ಕರೆದಿದ್ದರೂ ನಾವು ಎಲ್ಲಾ ಕಡೆಗೆ ಹೋಗಿದ್ದೇವೆ. ಅಪ್ಪಾ ಅವರದ್ದೂ ಏನೂ ತಪ್ಪಿಲ್ಲ, ದೇವರ ಸಮಾನ ಎಂದು ಹೇಳಿದ್ದೇವೆ. ವಿಡಿಯೋ ತಿರುಚಿದವರ ಮೇಲೆ ಕ್ರಮ ಆಗಬೇಕು ಎಂದು ಬಾಲಕಿ ಪೋಷಕರು ಒತ್ತಾಯಿಸಿದ್ದಾರೆ.