https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ದಾಂಡೇಲಿ : ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ವಿನಾಯಕ ನಗರದ ಹತ್ತಿರದ ಕಾಳಿ ನದಿಯಲ್ಲಿ ಎಮ್ಮೆಯ ಮೇಲೆ ಮೊಸಳೆಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ.
ಎಮ್ಮೆಯ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಅಲ್ಲೆ ಇದ್ದ ಸ್ಥಳೀಯರು ಬೊಬ್ಬೆ ಹಾಕಿದಾಗ ಮೊಸಳೆ ಎಮ್ಮೆಯನ್ನು ಬಿಟ್ಟು ಹೋಗಿದೆ ಎಮ್ಮೆಯ ಕೈಗೆ ಮತ್ತು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ತಕ್ಷಣವೇ ಮಾಜಿ ನಗರ ಸಭಾಧ್ಯಕ್ಷೆ ಹಾಗೂ ನಿಕಟಪೂರ್ವ ಸದಸ್ಯೆ ಸರಸ್ವತಿ ರಜಪೂತ್ ಅವರು ನಗರ ಸಭೆಗೆ ಮಾಹಿತಿಯನ್ನು ನೀಡಿದ್ದಾರೆ. ನಗರ ಸಭೆಯ ಪೌರಕಾರ್ಮಿಕರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಎಮ್ಮೆಯನ್ನು ಸ್ಥಳೀಯರ ಸಹಕಾರದಲ್ಲಿ ಆರೈಕೆ ಮಾಡಿ, ಸುಭಾಷ್ ನಗರದ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಗೋ ರಕ್ಷಕರ ಆರೈಕೆಯಲ್ಲಿರುವ ಜಾನುವಾರುಗಳ ಜೊತೆ ಬಿಟ್ಟು ಬಂದಿದ್ದಾರೆ. ಇದೀಗ ಗೋರಕ್ಷಕರಾದ ಶ್ರೀನಾಥ ಪಾಸಲ್ಕರ, ಸಚಿನ್ ದೊಂದ್ವಾಡೆ, ವೈಭವ್ ಭಜಂತ್ರಿ, ಸಂಚಿತ್, ರೋಹಿತ್, ಪ್ರಕಾಶ್, ಸಂತೋಷ ಬುಲುಬುಲೆ, ಪವನ್ ಬುಲುಬುಲೆ, ಕಾರ್ತಿಕ ಗಡೆಪ್ಪನವರ, ಗಗನ್ ಅವರ ತಂಡ ಈ ಎಮ್ಮೆಗೆ ಆರೈಕೆಯನ್ನು ಮಾಡುತ್ತಿದ್ದು, ಚಿಕಿತ್ಸೆಗಾಗಿ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಿ, ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ.