https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಸಿನಿ ದುನಿಯಾದಲ್ಲಿ ಸಖತ್ ಸುದ್ದಿ ಮಾಡಿರೋ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸಂಭ್ರಮ ಜೋರಾಗಿದೆ. ಹಲವು ದಿನಗಳಿಂದ ಹರಿದಾಡ್ತಿದ್ದ ಪಿಸುಮಾತುಗಳಿಗೆ ಕೊನೆಗೂ ತೆರೆ ಬಿದ್ದಂತಾಗಿದೆ.
ಟಾಲಿವುಡ್ನ ಮೋಸ್ಟ್ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿಯವರೆಗೆ ‘ರೀಲ್ ಲೈಫ್’ನಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಜೋಡಿ, ‘ರಿಯಲ್ ಲೈಫ್’ನಲ್ಲೂ ಅಧಿಕೃತವಾಗಿ ಗಂಡ-ಹೆಂಡತಿಯಾಗಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಆಪ್ತರು, ಬಂಧು-ಮಿತ್ರರು ಹಾಗೂ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಈ ತಾರಾಜೋಡಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ.
ಇಂದು ಬೆಳಗ್ಗೆ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ಹಿಂದೂ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನಡೆದಿವೆ. ವೇದ ಮಂತ್ರಗಳ ಪಠಣ ಹಾಗೂ ಮಂಗಳ ವಾದ್ಯಗಳ ಮೊಳಗುವಿಕೆಯ ನಡುವೆ ರಶ್ಮಿಕಾ ಕೊರಳಿಗೆ ವಿಜಯ್ ದೇವರಕೊಂಡ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ವಿಜಯ್ ಮತ್ತು ರಶ್ಮಿಕಾ ಜೋಡಿ ನೋಡಲು ಕಣ್ಣುಗಳೆರಡು ಸಾಲದು ಎಂಬಂತೆ ಕಂಗೊಳಿಸುತ್ತಿದ್ದರು. ಮದುವೆಯ ದಿರಿಸಿನಲ್ಲಿ ವಧು ರಶ್ಮಿಕಾ ಅವರ ಮುಖದಲ್ಲಿ ಮದುವೆಯ ಸಂಭ್ರಮ ಹಾಗೂ ಮಂದಹಾಸ ಎದ್ದು ಕಾಣುತ್ತಿತ್ತು.
ರಶ್ಮಿಕಾ ಮೂಲತ: ಕೊಡಗಿನವರಾಗಿದ್ದರಿಂದ ಕೊಡವ ಸಂಪ್ರದಾಯದಂತೆಯೂ ವಿವಾಹವಾಗಲಿದ್ದಾರೆ. ವಿಜಯ್ ದೇವರಕೊಂಡು ಕೊಡವ ಉಡುಪು ಧರಿಸಿ, ರಶ್ಮಿಕಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ತಮ್ಮ ವಿವಾಹದ ಸಂಭ್ರಮವನ್ನು ಈ ಜೋಡಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಮೀಸಲಾಗಿ ಇಟ್ಟಿದ್ದಾರೆ.
https://www.newsics.com/2026/02/26/heavy-rain-in-the-state-alert-for-11-districts/