https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿಖರ್ ಧವನ್ ತಮ್ಮ ಗೆಳತಿ ಸೋಫಿ ಶೈನ್ ಅವರನ್ನು ಎರಡನೇ ಬಾರಿಗೆ ಬಹಳ ಸಂಭ್ರಮದಿಂದ ಮದುವೆಯಾಗಿದ್ದರು. ಮದುವೆಯ ಮೂರನೇ ದಿನ ಶಿಖರ್ ಧವನ್ ಅವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ದೆಹಲಿಯ ಪಟಿಯಾಲ ಹೌಸ್ ಫ್ಯಾಮಿಲಿ ಕೋರ್ಟ್ ಶಿಖರ್ ಧವನ್ ಅವರಿಗೆ ದೊಡ್ಡ ಪರಿಹಾರ ನೀಡಿದೆ. ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ ಅವರು ಮಾಜಿ ಕ್ರಿಕೆಟಿಗರಿಗೆ ಸುಮಾರು 5.72 ಕೋಟಿಯನ್ನು ಹಿಂದಿರುಗಿಸುವಂತೆ ಆದೇಶಿಸಿದೆ.
ಶಿಖರ್ ಧವನ್ ಮತ್ತು ಆಸ್ಟ್ರೇಲಿಯನ್ ಮೂಲದ ಆಯೆಷಾ ಮುಖರ್ಜಿ ದಂಪತಿ 2012 ರಲ್ಲಿ ಮದುವೆಯಾಗಿದ್ದರು. ಅಲ್ಲದೇ ಮೊದಲ ಪತ್ನಿಗೆ ಜೋರಾವರ್ ಧವನ್ ಎಂಬ ಒಬ್ಬ ಮಗನಿದ್ದು, ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ 2023ರ ಅಕ್ಟೋಬರ್ನಲ್ಲಿ ದೆಹಲಿ ಕೋರ್ಟ್ ಇವರಿಬ್ಬರಿಗೆ ವಿಚ್ಛೇದನ ನೀಡಿತ್ತು.
ವಿಚ್ಛೇದನದ ನಂತರ ಆಸ್ಟ್ರೇಲಿಯಾ ಕೋರ್ಟ್ 2024ರ ಫೆಬ್ರವರಿಯಲ್ಲಿ “ಇಂಟರಿಮ್ ಪ್ರಾಪರ್ಟಿ ಸೆಟಲ್ಮೆಂಟ್” ಆದೇಶ ನೀಡಿ. ಆಸ್ಟ್ರೇಲಿಯಾದಲ್ಲಿ ಮಾರಾಟವಾದ ಆಸ್ತಿಗಳಿಂದ ಬಂದ ಹಣದಲ್ಲಿ ಒಂದಿಷ್ಟು ಹಣವನ್ನು ಆಯೆಷಾ ಅವರಿಗೆ ನೀಡಬೇಕೆಂದು ಧವನ್ಗೆ ಆದೇಶ ನೀಡಿತ್ತು. ಆದೇಶದ ಅನುಸಾರವಾಗಿ ಧವನ್ ಹಣವನ್ನು ನೀಡಿದ್ದಾರೆ ಅಂತಾನೂ ಹೇಳಲಾಗಿದೆ.
ಆಸ್ಟ್ರೇಲಿಯಾದ ಕುಟುಂಬ ನ್ಯಾಯಾಲಯದ ಆದೇಶದ ನಂತರ ಈ ವಿಷಯ ಪ್ರಾರಂಭವಾಗಿತ್ತು. ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ ಆಸ್ಟ್ರೇಲಿಯಾದ ಪ್ರಜೆ. ಆಸ್ತಿ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಅವರು ಆಸ್ಟ್ರೇಲಿಯಾದ ನ್ಯಾಯಾಂಗವನ್ನು ಸಂಪರ್ಕಿಸಿದರು. ಈಗ ಆಸ್ಟ್ರೇಲಿಯಾದ ಕೋರ್ಟ್ ನೀಡಿದ ಆಸ್ತಿ ವಿತರಣಾ ಆದೇಶವು ಭಾರತೀಯ ಕಾನೂನಿನ ಅಡಿಯಲ್ಲಿ ಅಮಾನ್ಯವಾಗಿದೆ ಎಂದು ಸ್ಪಷ್ಟಪಡಿಸುವ ಮೂಲಕ ದೆಹಲಿ ಕೋರ್ಟ್ ಈ ಮಹತ್ವದ ಹೆಜ್ಜೆ ಇಟ್ಟಿದೆ.